6 ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಗೆ ಒಪ್ಪಿಗೆ : ಬ್ರಿಕ್ಸ್​ ವಿಸ್ತರಣೆ

ಜೋಹಾನ್ಸ್‌ಬರ್ಗ್‌: ಬ್ರಿಕ್ಸ್​ ಗುಂಪಿನಲ್ಲಿ ಪ್ರಸ್ತುತ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿವೆ. 2019ರ ನಂತರ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್​ ಶೃಂಗಸಭೆ ನಡೆಯುತ್ತಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಹೊಸ ರಾಷ್ಟ್ರಗಳ ಸೇರ್ಪಡೆ ಕುರಿತ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ಜಗತ್ತಿನ […]

‘Chandrayaan 3’ ಲ್ಯಾಂಡಿಂಗ್ ವರ್ಚುಯಲ್ ಆಗಿ ದಕ್ಷಿಣ ಆಫ್ರಿಕಾದಿಂದ ವೀಕ್ಷಿಸಲಿರುವ ಪ್ರಧಾನಿ

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): 15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ.ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವರ್ಚುಯಲ್ ಆಗಿ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.ಹೀಗಾಗಿ ಸೌತ್ ಆಫ್ರಿಕಾದಿಂದಲೇ ಮೋದಿ ವರ್ಚುಯಲ್ ಆಗಿ ಐತಿಹಾಸಿಕ ವಿಕ್ರಮ್‌ ಲ್ಯಾಂಡರ್ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ಚಂದ್ರನ ಅಜ್ಞಾತ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಹೇಳಿದೆ. ಲ್ಯಾಂಡಿಂಗ್‌ನ ಲೈವ್ […]

ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್​ ಗೋಲ್ಡ್​​ ಮೆಚ್ಚುಗೆ

ಟೆಕ್ಸಾಸ್( ಅಮೆರಿಕ)​: ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್​ವೈರ್​ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್​ ಗೋಲ್ಡ್ ಪ್ರಶಂಸಿದ್ದಾರೆ.ಇಂದು ಸಂಜೆ ಚಂದ್ರಯಾನ-3 ಯೋಜನೆ​​ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ […]

ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ನಲ್ಲಿ ಪ್ರಧಾನಿ ಮೋದಿ

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಅಸ್ಥಿರವಾದ ಜಾಗತಿಕ ಆರ್ಥಿಕತೆಯ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ.ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಿಎಂ ಮೋದಿ ಮಂಗಳವಾರ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಮಾತನಾಡಿ, ”ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ” ಎಂದೂ ಹೇಳಿದರು. ”ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್​ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು, 100ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ಸರ್ಕಾರ ಕೈಗೊಂಡಿರುವ ಮಿಷನ್ ಮೋಡ್ ಸುಧಾರಣೆಗಳ ಪರಿಣಾಮ ವ್ಯಾಪಾರ ಸುಲಭತೆಯು (Ease […]

ಬ್ರಿಕ್ಸ್​ ಶೃಂಗಸಭೆ ಭಾಗವಹಿಸಲುಜೋಹಾನ್ಸ್​ಬರ್ಗ್​ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) : ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಆಫ್ರಿಕಾದ ನೃತ್ಯಗಾರರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ಭಾರತೀಯ ಶೈಲಿಯ ಡೋಲು, ವಾದ್ಯಗಳು ಮೊಳಗಿದವು.ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜಧಾನಿ ಜೋಹಾನ್ಸ್​ಬರ್ಗ್​ಗೆ ಬಂದಿಳಿದರು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ನಂತರ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ […]