11ನೇ ಕಿಯಾ ಸ್ಕಿಲ್ ವರ್ಲ್ಡ್ ಕಪ್ ಸಮಾರಂಭ: ಬಾರ್ಕೂರು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಚಿತ್ ಕುಮಾರ್ ಗೆ ಚಿನ್ನದ ಪದಕ.

ಬ್ರಹ್ಮಾವರ: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ) ಇದರ ಆಡಳಿತಕ್ಕೊಳಪಟ್ಟ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2014-16ರ ಸಾಲಿನಲ್ಲಿ ಎಂ.ಎಂ.ವಿ (ಆಟೊಮೊಬೈಲ್) ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ಶ್ರೀ ಸಂಚಿತ್ ಕುಮಾರ್ ಇವರು ಪ್ರಸಿದ್ಧ ಕಾರು ಉತ್ಪಾದನಾ ಸಂಸ್ಥೆ ‘ಕಿಯಾ’ ದ ಇತ್ತೀಚೆಗೆ ಸೌತ್ ಕೊರಿಯಾದಲ್ಲಿ ನಡೆದ ದಿ ಲೆವೆಂತ್ ಕಿಯಾ ಸ್ಕಿಲ್ ವರ್ಲ್ಡ್ ಕಪ್ (The 11th KIA Skill World Cup) ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ವೈಲ್ಡ್ ಬೆಸ್ಟ್ ಟೆಕ್ನಿಷಿಯನ್ (World […]

ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಇವರ “ಮೋರೆಯಾ ಮೋರೆಯಾ” ಗಾನ-ನೃತ್ಯ ವಿಡಿಯೋ ಹಾಡು ಬಿಡುಗಡೆ.

ಮಣಿಪಾಲ: ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಇವರ “ಮೋರೆಯಾ ಮೋರೆಯಾ” ಗಾನ-ನೃತ್ಯ ವಿಡಿಯೋ ಹಾಡು ಶ್ರೀ ನರಸಿಂಹ ದೇವಸ್ಥಾನ ನರಸಿಂಗೆಯಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಖೇಸ್ತರಾದ ರಮೇಶ್ ಸಾಲ್ವಂಕರ್, ಆನಂದ್ ನಾಯಕ್ ನರಸಿಂಗೆ, ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋಒಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕರಾದ ನಿತ್ಯಾನಂದ್ ನಾಯಕ್ ನರಸಿಂಗೆ ಉಪಸ್ಥಿತರಿದ್ದರು. https://youtu.be/KiU_Yz8aXHI?si=z_GUpY_QSzSmEZ2B ಹಾಡನ್ನು ಅನಾವರಣಗೊಳಿಸಿ “ಮೋರೆಯಾ ಮೋರೆಯಾ” ಗಾನ-ನೃತ್ಯ ತಂಡಕ್ಕೆ ಶುಭ ಹಾರೈಸಿದರು. ಈ ಗಾನ-ನೃತ್ಯಕ್ಕೆ ಪ್ರದೀಪ್ ಕುಕ್ಕುಡೆಯವರ […]

ಹಿರಿಯ ನಾಗರಿಕರಿಗಾಗಿ ಮಾರ್ಗ ಟೀಮ್ ವತಿಯಿಂದ ವಿಶೇಷ ಟೂರ್ ಪ್ಯಾಕೇಜ್

ಉಡುಪಿ: ದಿ :31 ಮೇ 2024 ರಂದು ಮಾರ್ಗ ಟೀಮ್ ವತಿಯಿಂದ ಹಿರಿಯ ನಾಗರಿಕರಿಗಾಗಿ ಪ್ರಸಿದ್ಧ ದೇವಸ್ಥಾನಗಳ ದರ್ಶನ ಹಾಗೂ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ .ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ;ಟೀಮ್ ಮಾರ್ಗಮೊ : 9113009028,9591982777

ಮೇ 16 ರಿಂದ 19: ಉಡುಪಿ ದೊಡ್ಡಣಗುಡ್ಡೆಯಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮೇ 16 ರಿಂದ 19 ರ ವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ರಾಮನಗರ ಜಿಲ್ಲೆಯಿಂದ ಬಾದಾಮಿ, ರಸಪುರಿ, […]