ದೇಶಾದ್ಯಂತ ಈದ್- ಉಲ್-ಫಿತ್ರ್ ಆಚರಣೆ

ಈದ್ ಉಲ್ ಫಿತ್ರ್ ವಿಶ್ವಾದ್ಯಂತ ಮುಸ್ಲಿಮರು ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬವಾಗಿದೆ. ಹಬ್ಬವು ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ಇದು ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ    ಅವಧಿಯಾಗಿದೆ. ಈದ್ ಉಲ್ ಫಿತರ್ ಅನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತಿದೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ಈದ್ ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು. ಕೆಲವು ಸಂಪ್ರದಾಯಗಳ ಪ್ರಕಾರ, ಮುಹಮ್ಮದ್ ಅವರು ಮೆಕ್ಕಾದಿಂದ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕವಾಗಿ, ಈದ್ ಉಲ್-ಫಿತರ್  ಸೂರ್ಯಾಸ್ತದ […]

“ಕ್ಷಯ”ವಿಲ್ಲದ ಸಂಪತ್ತು ಸಮೃದ್ದಿ ನೆಮ್ಮದಿಯನ್ನು ಕರುಣಿಸುವುದು “ಅಕ್ಷಯ ತೃತೀಯ”

ಅಕ್ಷಯ ತೃತೀಯ ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿಯಂದು ಬರುತ್ತದೆ. ಇದು “ಅಂತ್ಯವಿಲ್ಲದ ಸಮೃದ್ಧಿಯ ಮೂರನೇ ದಿನ” ಎಂದು ಸೂಚಿಸುತ್ತದೆ. ಸಂಸ್ಕೃತದಲ್ಲಿ, ಅಕ್ಷಯ ಎಂದರೆ “ಎಂದಿಗೂ ಕ್ಷಯವಿಲ್ಲದ್ದು” ಎಂದರ್ಥ. ತೃತೀಯಾ ಎಂದರೆ “ಚಂದ್ರನ ಮೂರನೇ ದಿನ”. ಸೂರ್ಯ-ಚಂದ್ರರು ಉಜ್ವಲವಾಗಿ ಬೆಳಗುವ ದಿನ ಇದಾಗಿದ್ದು, ಅಧ್ಯಾತ್ಮದ ದೃಷ್ಟಿಯಿಂದಲೂ ಈ ದಿನವು ಮಹತ್ವವನ್ನು ಪಡೆದಿದೆ. ಈ ದಿನದಂದು ಜಪ ತಪ ನಿಷ್ಠೆಗಳನ್ನು ಮಾಡುವುದರಿಂದ ಮನಸ್ಸು ಮತ್ತು ದೇಹವು ಶುದ್ದಗೊಂಡು ಅಧ್ಯಾತ್ಮದ ಸಾಧನೆಯು ಸುಲಭವಾಗಿ ಮೋಕ್ಷವು ದೊರೆಯುತ್ತದೆ. ಈ […]

ಸಂಘಟನೆಯಲ್ಲಿ ಬಲವಿದೆ ಎಂದು ಸಾಧಿಸಿ ತೋರಿದ ಸ್ವರ್ಣೋದ್ಯಮ ಸಂಘಟನಾ ಚತುರ ನೋವೆಲ್ಟಿ ಸಂಸ್ಥೆಯ ಜಿ.ಜಯ ಆಚಾರ್ಯ

ನೋವೆಲ್ಟಿ ಸ್ಟೋರ್ಸ್ ನ ಸಂಸ್ಥಾಪಕ ಜಿ. ಅನಂತಕೃಷ್ಣ ಆಚಾರ್ಯರ 4 ನೇ ಪುತ್ರ ಜಯ ಆಚಾರ್ಯರು ಪ್ರಾರಂಭದಲ್ಲಿ ಚಿತ್ರರಂಗದತ್ತ ಒಲವು ಹೊಂದಿದ್ದರು. ಬೆಂಗಳೂರಿನಲ್ಲಿರುವ ಆರ್. ನಾಗೇಂದ್ರರಾಯರ ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿ, ಡಿ.ಎಫ್.ಟಿ ಕೋರ್ಸ್ ಪೂರೈಸಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಹ ನಿರ್ದೇಶಕರಾಗಿ ದುಡಿದ ಅನುಭವವಿದೆ. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ನಟಿಸಿಯೂ ಇದ್ದಾರೆ. ತದನಂತರ ಜಿ.ವಿ.ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲೂ ಪರ್ಷಿಯನ್ ದೊರೆಯ ಪಾತ್ರದಲ್ಲಿ […]

ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ದುರ್ಗಾ ಪ್ರಸಾದ್ ಜ್ಯುವೆಲ್ಲರ್ಸ್ ನಲ್ಲಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ

ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ದುರ್ಗಾಪ್ರಸಾದ್ ಜ್ಯುವೆಲ್ಲರ್ಸ್ ವತಿಯಿಂದ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಅಂಗವಾಗಿ ಚಿನ್ನ, ವಜ್ರಾಭರಣ ಹಾಗೂ ಬೆಳ್ಳಿ ಪದಾರ್ಥಗಳ ಮೇಲೆ ಕೂಪನ್ ಗಳನ್ನು ಪಡೆದುಕೊಂಡು ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ. ಬಂಪರ್ ಬಹುಮಾನ 1 ಕಿಲೋ ಚಿನ್ನ, 5 ಕಿಲೋ ವರೆಗೆ ಇತರ ಬೆಳ್ಳಿ ನಾಣ್ಯ ಹಾಗೂ ಜಿಲ್ಲಾ ಬಹುಮಾನಗಳನ್ನು ಗೆಲ್ಲುವ ಅವಕಾಶ ಕೊಡುಗೆ ಮೇ 32 ರವರೆಗೆ ಮಾತ್ರ. ಕ್ಲಪ್ತ ಸಮಯಕ್ಕೆ ವಿವಿಧ ನಮೂನೆಯ ಚಿನ್ನ ಹಾಗೂ ವಜ್ರದ ಆಭರಣಗಳನ್ನು ತಯಾರಿಸಿ […]

ಕರ್ನಾಟಕ ಬ್ಯಾಂಕ್ ಸೆಂಟಿನರಿ ಮಹೋತ್ಸವ: ಏ.17 ರಿಂದ ಜು.17ರ ವರೆಗೆ ವಿಶೇಷ ಗೃಹ ಸಾಲ ಅಭಿಯಾನ

ಮಂಗಳೂರು: ಖಾಸಗಿ ಬ್ಯಾಂಕ್ ಗಳಲ್ಲೆ ಅಗ್ರಗಣ್ಯ ಸ್ಥಾನದಲ್ಲಿರುವ ಕರ್ಣಾಟಕ ಬ್ಯಾಂಕ್‌ ತನ್ನ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಗ್ರಾಹಕರಿಗಾಗಿ ಏ.17 ರಿಂದ ಜು.17ರ ವರೆಗೆ ವಿಶೇಷ ಅಭಿಯಾನ-‘ಕೆಬಿಎಲ್‌ ಸೆಂಟಿನರಿ ಮಹೋತ್ಸವ’ದ ಅಂಗವಾಗಿ ಗೃಹ ಸಾಲವನ್ನು ನೀಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು. ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವಿದ್ದಲ್ಲಿಂದ ಅವರ ಅನುಕೂಲಕರ ಸಮಯದಲ್ಲಿ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ […]