ಚಂದ್ರಯಾನ 3- ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆ ಬಗ್ಗೆ ಅನ್ವೇಷಿಸಲಿದೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಚೆನ್ನೈ (ತಮಿಳುನಾಡು): ಭಾರತದ ಚಂದ್ರಯಾನ 3 ಯೋಜನೆಯು ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳನ್ನು ಅನ್ವೇಷಿಸಲಿದೆ.ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಿಗದಿತ ಉಡಾವಣಾ ಸಮಯದ ಪ್ರಕಾರ, ಜಿಎಸ್‌ಎಲ್​ವಿ ಮಾರ್ಕ್ 3 (ಎಲ್​ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದಾರೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್​, ಚಂದ್ರಯಾನವು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರಮುಖ ಜಾಗತಿಕ ಆಟಗಾರನನ್ನಾಗಿ ಮಾಡಲಿದೆ ಎಂದು […]

ಕಾಲು ಗಂಟಿನ ಮೂಳೆ ಬದಲಾವಣೆ (KNEE JOINT REPLACEMENT SURGERY) ತಡೆಯಲು ಹಾಗೂ ಗಂಟು ನೋವಿಗೆ ಆಯುರ್ವೇದ ಚಿಕಿತ್ಸೆ: ಡಾ. ಎಂ. ವಿ. ಉರಾಳ್

ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ದೇಹದ ವಿವಿಧ ಸಂಧಿಗಳಲ್ಲಿ ಹಿಂಸೆ ನೀಡುವಷ್ಟು ನೋವನ್ನು ಕೊಡುವ ಸಂಧಿವಾತ ಆರಂಭವಾದರೆ ಕುಳಿತರೆ ಏಳಲಾಗದು, ಎದ್ದರೆ ಕುಳಿತುಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ತರುತ್ತದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುವ ಸಂಧಿವಾತ ದೇಹದ ಯಾವ ಕೀಲುಗಳು ಸೇರುವ ಜಾಗದಲ್ಲಿ ಬೇಕಾದರೂ ಆರಂಭವಾಗಬಹುದು. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ​ ಸಂಧಿವಾತದ ಲಕ್ಷಣ ಮತ್ತು ಕಾರಣಗಳು ಸಾಮಾನ್ಯವಾಗಿ ಸಂಧಿವಾತ 40 ವರ್ಷದ ಬಳಿಕ ಕಾಣಿಸಿಕೊಳ್ಳುತ್ತದೆ. ಸಂಧಿಗಳಲ್ಲಿ ಅಂದರೆ ಭಾರವನ್ನು […]

ನಾಳೆಯಿಂದ ಪ್ರಧಾನಿ ಫ್ರಾನ್ಸ್​, ಯುಎಇ ಪ್ರವಾಸ

ನವದೆಹಲಿ :ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಮೋದಿ ಜುಲೈ 13 ಮತ್ತು 14ರಂದು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಲಿದ್ದಾರೆ.ಪ್ರಧಾನಿ ಮೋದಿ ಅವರ ಎರಡು ದಿನಗಳ ಅವಧಿಯ ವಿದೇಶ ಪ್ರವಾಸ ಆರಂಭವಾಗಲಿದೆ. ಪ್ರಧಾನಿ ಫ್ರಾನ್ಸ್​ ಹಾಗೂ ಯುಎಇಗೆ ಭೇಟಿ ನೀಡಲಿದ್ದಾರೆ ಪ್ಯಾರಿಸ್‌ನಲ್ಲಿ ಮೋದಿ ಅವರು ಸೆನೆಟ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಅಧ್ಯಕ್ಷರನ್ನು ಕೂಡ ಭೇಟಿಯಾಗಲಿದ್ದಾರೆ. ಫ್ರಾನ್ಸ್‌ನಲ್ಲಿರುವ […]

ಭರ್ಜರಿ ತಯಾರಿ , ದಿನಪೂರ್ತಿ ಕಾರ್ಯಕ್ರಮ : ಶಿವಣ್ಣನ ಹುಟ್ಟುಹಬ್ಬ

ಕೋವಿಡ್‌ ಆತಂಕ ಆನಂತರ ನಟ ಪುನೀತ್‌ ರಾಜಕುಮಾರ್‌ ಅವರ ಅಗಲಿಕೆಯ ದುಃಖದಿಂದಾಗಿ ನಟ ಶಿವರಾಜಕುಮಾರ್‌, ಸುಮಾರು ನಾಲ್ಕು ವರ್ಷಗಳಿಂದ ಅದ್ಧೂರಿ ಬರ್ತ್‌ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಶಿವರಾಜಕುಮಾರ್‌ ಸಮ್ಮತಿಸಿದ್ದು, ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ದಿನಪೂರ್ತಿ ಕಾರ್ಯಕ್ರಮ: ಜು.11ರ ಸಂಜೆಯಿಂದಲೇ ಶಿವರಾಜಕುಮಾರ್‌ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸದಲ್ಲಿ ರಾತ್ರಿ 12 ಗಂಟೆಗೆ ಬೃಹತ್‌ ಕೇಕ್‌ ಕತ್ತರಿಸಲಾಗುತ್ತಿದ್ದು, […]

ಕಾರ್ಪೊರೇಟ್ ಉದ್ಯೋಗಕ್ಕೆ ವಿದಾಯ ಹೇಳಿ ಕೃಷಿಯಲ್ಲಿ ಬದುಕು ಕಟ್ಟಿ ವರ್ಷಕ್ಕೆ 15 ಲಕ್ಷ ಸಂಪಾದಿಸುವ ಮಂಗಳೂರಿನ ಮಾದರಿ ಯುವಕ ಚೇತನ್ ಶೆಟ್ಟಿ!!

ಇಂದಿನ ಕಾಲದ ಯುವಕರೆಲ್ಲಾ ಕೈ ತುಂಬಾ ಸಂಪಾದನೆ ಮಾಡುವ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿರುವಾಗ, ಇಲ್ಲೊಬ್ಬ 35 ವರ್ಷದ ಯುವಕ ತನ್ನ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿ ಕೃಷಿಯಲ್ಲಿ ನೆಮ್ಮದಿ ಮತ್ತು ಬದುಕನ್ನು ಕಂಡುಕೊಂಡಿದ್ದಾರೆ. ಮಂಗಳೂರಿನ ಬೆಳ್ಳಾರೆಯ ನಿವಾಸಿ ಚೇತನ್ ಶೆಟ್ಟಿ ತನ್ನ ಎಂಟು ವರ್ಷಗಳ ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿ ಹುಟ್ಟೂರಿಗೆ ಮರಳಿ ಕೃಷಿಕರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. 2017 ರಲ್ಲಿ, ಬೆಂಗಳೂರಿನಿಂದ ಮರಳಿದ ಚೇತನ್ ಮಂಗಳೂರು ನಗರದಿಂದ 75 ಕಿಮೀ ದೂರದಲ್ಲಿರುವ ಬೆಳ್ಳಾರೆಯಲ್ಲಿರುವ ತಮ್ಮ ಪೂರ್ವಜರ […]