ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಛಾಯಾ ಸಂಸ್ಕ್ರತಿ ವಿಶೇಷ ಕಾರ್ಯಕ್ರಮ

ಉಡುಪಿ: ಸೀಮಿತ ವರ್ತಮಾನಕ್ಕೆ ಮಾತ್ರವಲ್ಲ, ಎಂದೆಂದಿಗೂ ಛಾಯಾಗ್ರಹಣದ ಪ್ರಾಮುಖ್ಯತೆ ನಿರಂತರವಾಗಿರುತ್ತದೆ. ಎಲ್ಲರ ಬದುಕಿನಲ್ಲಿ ಛಾಯಾಚಿತ್ರದ ಪಾತ್ರ ಬಹು ಮುಖ್ಯ. ಛಾಯಚಿತ್ರ ಕಲಾವಿದ ದಾಖಲೆಗಾರನು ಹೌದು ಎಂದು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಆಶಯ ವ್ಯಕ್ತಪಡಿಸಿದ್ದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗು ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಕೆಮೆರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಛಾಯಾ ಹಾಗು ಮಾಧ್ಯಮ ಗೋಷ್ಠಿಯಲ್ಲಿ […]
ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ ಇದರ ಆಶ್ರಯದಲ್ಲಿ ಆ16 ರಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರದಲ್ಲಿ ಆಯೋಜಿಸಲಾದ ಉಡುಪಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಧವಿ ಆಚಾರ್, ಉಪಾಧ್ಯಕ್ಷರು ನಿರುಪಮಾ ಹೆಗ್ಡೆ, […]
ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಧುರ: ಸುನಿಧಿ ಹೆಬ್ಬಾರ್ ಬರೆದ ಬರಹ..

ಸ್ವಾತಂತ್ರ್ಯ ಎಂಬ ಉತ್ಸವದ ನೆನಪಿನ ಅಂಗಳದಲ್ಲಿ ಯಾವುದೇ ಹಬ್ಬವಾಗಲಿ, ಹಬ್ಬದ ದಿನ ನಾವು ಖುಷಿಯಾಗಿರುವುದು ಒಂದು ಲೆಕ್ಕವಾದರೆ ಆ ಹಬ್ಬದ ತಯಾರಿ ನೂರು ಪಟ್ಟು ಸಂತೋಷಕಾರಿಯಾದದ್ದು. ಅದೂ ಗೆಳೆಯರೊಂದಿಗೆ ಸೇರಿ, ಕೆಲಸವನ್ನೆಲ್ಲ ಹಂಚಿಕೊಂಡು, ಒಮ್ಮೆ ನಗುತ್ತಾ ಒಮ್ಮೆ ಕಚ್ಚಾಡುತ್ತ, ನಲಿಯುತ್ತ ಆಚರಿಸುತ್ತಿದ್ದದ್ದು ನಮ್ಮ ರಾಷ್ಟ್ರೀಯ ಹಬ್ಬಗಳು. ಅಗಸ್ಟ್ ತಿಂಗಳ ಜಿಟಿ ಜಿಟಿ ಮಳೆಯಲ್ಲಿ ಬಟ್ಟೆಯನೆಲ್ಲ ಒದ್ದೆಮಾಡಿಕೊಂಡು ಉತ್ಸಾಹದಿಂದ ನಾವೆಲ್ಲ ಸೇರುತ್ತಿದದ್ದು ಸ್ವಾತಂತ್ರ್ಯೋತ್ಸವಕ್ಕೆ. ನಾನು ನನ್ನ ನೆನಪಿನ ಪುಟವನ್ನು ತಿರುವು ಹಾಕಿ ಹೋಗಬಯಸುವುದು ಮರಳಿ ನನ್ನ ಹೈ ಸ್ಕೂಲ್ […]
ಉಡುಪಿ: “ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂ” ನಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ ಗೃಹೋಪಯೋಗಿ ಪೀಠೋಪಕರಣಗಳು

ಉಡುಪಿ: ಅಗ್ಗದ ಬೆಲೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಪೀಠೋಪಕರಣಗಳನ್ನು ಮನೆಗೆ ತರುವ ಪ್ಲ್ಯಾನ್ ಮಾಡಿದ್ದೀರಾ.?. ಹಾಗಾದ್ರೆ ನಿಮಗೆ ಇಲ್ಲಿ ಸಿಗುತ್ತೇ ಭಾರೀ ರಿಯಾಯಿತಿಯೊಂದಿಗೆ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಆಕರ್ಷಕ ಇಂಟೀರಿಯರ್ಸ್ ಸಾಮಾಗ್ರಿಗಳು. ಯಸ್, ಸ್ವಾತಂತ್ರ್ಯ ದಿನಾಚರಣೆ, ನಾಗರ ಪಂಚಮಿ, ವರಮಹಾಲಕ್ಷ್ಮಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ಮಲ್ಪೆ ಕಲ್ಮಾಡಿ ರಸ್ತೆಯಲ್ಲಿ ಇರುವ ‘ಅವನಿ ಫರ್ನೀಚರ್ ಅಂಡ್ ಇಂಟೀರಿಯರ್ಸ್ ಶೋರೂಂ’ ಗೃಹೋಪಯೋಗಿ ಪೀಠೋಪಕರಣಗಳು ರಿಯಾಯಿತಿ ದರದಲ್ಲಿ ಸಿಗಲಿದ್ದು, ವಿವಿಧ ಕಂಪನಿಯ ಫರ್ನಿಚರ್ ಗಳು ಲಭ್ಯವಿದೆ. […]
ಯಾರು ಹೇಳಿದರು: ನಮಗೆ ಸ್ವಾತಂತ್ರ್ಯ ಬಂದಿಲ್ಲವೆಂದು..?

ಅಂತೂ ನಾವು ಸ್ವತಂತ್ರರು: ಕನ್ನಡವನ್ನು ಬಿಟ್ಟು ಪರಂಗಿಗಳ ಇಂಗ್ಲಿಷನ್ನು ನೆಚ್ಚಿಕೊಂಡು ನಮ್ಮ ಭಾಷೆಯನ್ನೂ ಕೊಂದುಕೊಂಡು, ಇಂಗ್ಲಿಷನ್ನು ದಿನನಿತ್ಯದ ಬದುಕಿನಲ್ಲಿ ಮಾತಾಡುತ್ತ ಅದನ್ನು ಬೆಳೆಸುವುದಕ್ಕೆ; ಯಾರೋ ಬರೆದ ನಮ್ಮ ಚರಿತ್ರೆಯನ್ನು ಕಣ್ಮುಚ್ಚಿ ಬಾಯ್ಮುಚ್ಚಿ ಓದುವುದಕ್ಕೆ; ಯಾರೋ ತಿರುಚಿ ಬರೆದ ಚರಿತ್ರೆಯನ್ನೇ ಸತ್ಯವೆಂದು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಬರೆದು ಅಂಕಗಳಿಸುವುದಕ್ಕೆ, ಮತ್ತೊಬ್ಬರ ಕೈಕೆಳಗೆ ದುಡಿಯುವುದರಲ್ಲೇ ಆನಂದ ಪಡುವುದಕ್ಕೆ; ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಮರೆಸಿ ವಿದೇಶೀ ಸಂಸ್ಕೃತಿಯನ್ನು ಮೆರೆಸುವುದಕ್ಕೆ; ಜಾತ್ಯತೀತರೆನ್ನುತ್ತಲೇ ಜಾತೀಯತೆಯನ್ನು ಬೆಳೆಸುತ್ತಾ ಜಾತಿಯಾಧಾರದಲ್ಲಿ ರಾಜಕೀಯ ದೊಂಬರಾಟ ಮಾಡುವುದಕ್ಕೆ; ಮಠಗಳನ್ನು ಕಟ್ಟಿಕೊಂಡು […]