ಸಮಾಜದ ಸಮಸ್ತರನ್ನೂ ಒಗ್ಗೂಡಿಸಿ ಸಮುದಾಯೋನ್ನತಿಯಿಂದ ರಾಷ್ಟ್ರೋನ್ನತಿಯತ್ತ ಸಾಗುವ ವಿಶ್ವ ಬಂಟರ ಸಮ್ಮೇಳನ-2023

ಅವಿಭಜಿತ ದ.ಕ ಜಿಲ್ಲೆಯ ಅನಭಿಷಿಕ್ತ ದೊರೆಗಳಾಗಿ ಮೆರೆದ ಜನನಿ, ಜನ್ಮ ಭೂಮಿ ಮತ್ತು ಕರ್ಮಭೂಮಿಗೆ ಕೀರ್ತಿ ತಂದ ಬಾವ, ಗುತ್ತು, ಬರ್ಕೆ, ಬೂಡಿನ ಗತ್ತು ಗೈರತ್ತಿನ ಕ್ಷಾತ್ರ ತೇಜದ ವೈಶ್ಯ ವರ್ಣದ ಸಮುದಾಯ ಬಂಟ ಯಾನೆ ನಾಡವರದ್ದು. ಬಂಟ ಅಂದರೆ ಸಚಿವ- ಮಂತ್ರಿ- ಭಟ ಎಂಬುದಾಗಿಯೂ, ಅರಸೊತ್ತಿಗೆಯ ಕಾಲದಲ್ಲಿ ಆಳುಪ ಅರಸರಾಗಿ, ಸಾಮಂತಿಕೆಯ ಕಾಲದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದವರು. ಛಲ, ಬುದ್ದಿ ಬಲ- ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ದರೆ ಅದು ಬಂಟರದ್ದು. ಆಡು ಮುಟ್ಟದ ಸೊಪ್ಪಿಲ್ಲ, […]
ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.24ರಂದು ವಿಜಯದಶಮಿ ಆಚರಣೆ.

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸಿ, ದೇವರ ಪ್ರಸಾದವನ್ನು ಪಡೆದರು. ಶ್ರೀ ಕ್ಷೇತ್ರದಲ್ಲಿ ಅ.23ರಂದು ರಾತ್ರಿ ಶಾರದಾ ವಿಸರ್ಜನೆ, ಕನ್ನಿಕಾ ಪೂಜೆ, ಮಹಾಮಂತ್ರಾಕ್ಷತೆ ಹಾಗೂ ಅ.24ರಂದು ವಿಜಯದಶಮಿ ಆಚರಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ಕಟ್ಟೆರವಿರಾಜ ವಿ. ಆಚಾರ್ಯ ತಿಳಿಸಿದ್ದಾರೆ.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಪೂಜೆ

ಬ್ರಹ್ಮಾವರ: ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಪೂಜಾ ಸಮಾರಂಭವು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಅ.24ರ ವರೆಗೆ ನಡೆಯಲಿದೆ. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಆಗಮಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಅಮ್ಮನವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಗೋವಿಂದರಾಜು ಎಸ್. ಕಾರ್ಯನಿರ್ವಹಣಾಧಿಕಾರಿ, ಹೆಚ್.ಧನಂಜಯ ಶೆಟ್ಟಿ ಅಧ್ಯಕ್ಷರು ಹೆಚ್.ಸುರೇಂದ್ರ ಶೆಟ್ಟಿ ಅನುವಂಶಿಕ ಮುಕ್ತೇಸರ, ಹೆಚ್. ಪ್ರಭಾಕರ ಶೆಟ್ಟಿ ಅನುವಂಶಿಕ ಮುಕ್ತೇಸರ, ಹೆಚ್.ಶಂಭು ಶೆಟ್ಟಿ ಅನುವಂಶಿಕ ಮುಕ್ತೇಸರ, ಆರ್. ಶ್ರೀನಿವಾಸ ಶೆಟ್ಟಿ ಅನುವಂಶಿಕ […]
ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ: ಅ.23ರಂದು ಮಹಾನವಮಿ, ಅ.24ರಂದು ವಿಜಯೋತ್ಸವ ಆಚರಣೆ

ಸಿದ್ದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.23 ಸೋಮವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ, ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ ಪುರ ಮೆರವಣಿಗೆ (ರಥ ಬೀದಿ ಮತ್ತು ರಾಜಬೀದಿ), ಸಂಜೆ ಗಂಟೆ 5:30 ರಿಂದ 7:15 ರ ತನಕ ನೃತ್ಯಾಂಗಣ ನಾಟ್ಯಾಲಯ ಸಿದ್ದಾಪುರ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅ.24 ಮಂಗಳವಾರ ಉದಯ ಪೂರ್ವ 6.05 ಗಂಟೆಗೆ ಕದಿರು ಮುಹೂರ್ತ, ಧಾನ್ಯ ಸಂಗ್ರಹ ಕಣಜ […]
ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಅ.24ರಂದು ವಿಜಯದಶಮಿ ಆಚರಣೆ

ಕಾಪು: ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು (ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟದ್ದು) ಶ್ರೀ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.24 ರಂದು ಕ್ಷೇತ್ರದಲ್ಲಿ ವಿಜಯದಶಮಿ, ಕಲಶ ವಿಸರ್ಜನೆ ಆಚರಿಸಲಾಗುವುದು. ಅ.31 ರಂದು ಮಂಗಳವಾರ ಚಂಡಿಕಾಯಾಗ ಪೂರ್ಣಾಹುತಿ, ಮಹಾ ಅನ್ನಸಂತರ್ಪಣೆ ಜರುಗಲಿರುವುದು.