ಚಿತ್ರನಟಿ ಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ

ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಚಿತ್ರನಟಿ ಸಾಯಿ ಪಲ್ಲವಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಚಿತ್ರನಟಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಪಡೆದಿದ್ದಾರೆ. ನಂತರ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

ನಾಳೆ (ಡಿ.22) ಮಣಿಪಾಲದಲ್ಲಿ‌ “ಬೇಕ್ ಲೈನ್” ಕೇಕ್ ಶಾಪ್ ಶುಭಾರಂಭ; ಇನ್ಮುಂದೆ ಸ್ವಾದಿಷ್ಟಕರ ವೆರೈಟಿ ಫ್ರೆಶ್ ಕೇಕ್ ಗಳು‌ ನಿಮ್ಮ ಮನೆ ಬಾಗಿಲಿಗೆ ಬರಲಿವೆ.

ಮಣಿಪಾಲ: ಇಲ್ಲಿನ ಅನಂತ ನಗರದಲ್ಲಿರುವ ಉಡುಪಿ ಗ್ರೂಪ್ ಆಫ್ ಇನ್ಸ್ಟಿ ಟ್ಯೂಶನ್ಸ್ ನ ಬಳಿ ಇರುವ ಅವಂತಿ ಕಾರ್ನರಿನಲ್ಲಿ ಡಿ.22 ರಂದು ಹೊಸದಾದ ಕೇಕ್ ಶಾಪ್ ‘ಬೇಕ್ ಲೈನ್’ ಇದರ ಉದ್ಘಾಟನ ಸಮಾರಂಭವು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ನಿಮ್ಮ ಸಂತೋಷದ ಕ್ಷಣಗಳನ್ನು ಸಿಹಿಯೊಂದಿಗೆ ಆಚರಿಸಲು ಬೇಕ್ ಲೈನ್ ಫ್ರೆಶ್ ಕೇಕ್ ಹಾಗೂ ಕನ್ಫೆಕ್ಷನರಿಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. ಬೇಕ್ ಲೈನ್ ಶಾಖೆಗಳು ಕಟಪಾಡಿ, ತೆಂಕನಿಡಿಯೂರು, ಮುದರಂಗಡಿ, ಮೂಡುಬೆಳ್ಳೆ, ಕಾರ್ಕಳ, ಕೆಮ್ಮಣ್ಣು, ಶಿರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೀಗ […]

ನಾವು ಹಿಂದುಗಳಾಗಿ ಉಳಿದರೆ ಮಾತ್ರ ದೇಶ ರಾಮರಾಜ್ಯವಾಗುತ್ತದೆ: ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಉಡುಪಿ: ನಾವು ಹಿಂದುಗಳಾಗಿ ಉಳಿದರೆ ಮಾತ್ರ ರಾಮಮಂದಿರ ಮಂದಿರವಾಗಿ ಉಳಿಯುತ್ತದೆ. ಈ ದೇಶ ರಾಮರಾಜ್ಯವಾಗುತ್ತದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿ ಹೇಳಿದ್ದಾರೆ. ಉಡುಪಿ ಪೇಜಾವರ ಮಠದ ಮುಂಭಾಗದಲ್ಲಿ ಅಭಿಮಾನಿಗಳಿಂದ ನಡೆದ 60ನೇ ವರ್ಷದ ಷಷ್ಠ್ಯಬ್ಧ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರ ನಡೆಯುತ್ತದೆ. ಮಂದಿರ ಮಾತ್ರವಲ್ಲ ರಾಮ ರಾಜ್ಯದ ಕನಸು ಕೂಡ ನನಸಾಗಬೇಕು. ರಾಮಭಕ್ತರೆಲ್ಲ ದೇಶಭಕ್ತರಾಗಬೇಕು ಎಂದರು. ಸಮಾರಂಭವನ್ನು […]

ಪರ್ಯಾಯ ಶ್ರೀಪಾದರಿಂದ “ಕೋಟಿ ತುಳಸಿ ಅರ್ಚನೆ” ಯ ಕರಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಅನುಜ್ಞೆಯ ಮೇರೆಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ಉಡುಪಿಯ ರಾಜಾಂಗಣದಲ್ಲಿ ಡಿ.31 ರವಿವಾರದಂದು ನಡೆಯಲಿರುವ ಋಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ “ಕೋಟಿ ತುಳಸಿ ಅರ್ಚನೆ”ಯ ಆಮಂತ್ರಣ ಪತ್ರಿಕೆ ಹಾಗೂ ಈ ಬಗ್ಗೆ ಶ್ರೀಮಠದಿಂದ ಪ್ರಕಟಿತ ಮನವಿಯ ಕರಪತ್ರವನ್ನು ಪರ್ಯಾಯ ಮಠದ ಪರಮ […]

ಆಯುರಾರೋಗ್ಯಕ್ಕಾಗಿ ನಂದಿ ಆರ್ಗಾನಿಕ್ ಫಾರ್ಮ್ ಹೌಸ್ ನ ಸಾವಯವ ಮೊರಿಂಗಾ(ನುಗ್ಗೆ) ಉತ್ಪನ್ನಗಳು

ಮಾನವ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಮುಖ್ಯ ಅಷ್ಟೇ ನೆಮ್ಮದಿಯು ಆತನ ದೇಹದಿಂದಲೂ ಅವನಿಗೆ ದೊರೆಯುವುದು ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಮನುಷ್ಯನಿಗೆ ತನ್ನ ದೇಹ ಸಹಕರಿಸಿದಾಗ ಮಾತ್ರ ಆತನ ಮನಸ್ಸು ದೃಢವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಕೊಪ್ಪಳದ ತಾವರೆಕೆರೆಯಲ್ಲಿ ಡಾ. ಬಸಯ್ಯ ಹಿರೇಮಠ ಎಂಬುವವರು “ನಂದಿ ಆರ್ಗಾನಿಕ್ ಫಾರ್ಮ್ ಹೌಸ್” ಎಂಬ ಒಂದು ಸಂಸ್ಥೆಯನ್ನು ನಿರ್ಮಿಸಿ ಸಂಪೂರ್ಣವಾಗಿ ಸಾವಯವತೆಯನ್ನು ಉಳಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಂದಿದ್ದಾರೆ. ಈ ಕಂಪನಿಯು ಕರ್ನಾಟಕದ ಏಕೈಕ ಮೋರಿಂಗಾ […]