ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ

ಮಲ್ಪೆ: ಜೀರ್ಣೋದ್ಧಾರಗೊಂಡ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ದೇಗುಲದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಬುಧವಾರ ಬೆಳಗ್ಗೆ ಜರಗಿತು. ಶಾಸಕ ಯಶ್ಪಾಲ್ ಸುವರ್ಣ ಅವರು ಚಪ್ಪರ ಮುಹೂರ್ತವನ್ನು ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು, ಆನುವಂಶಿಕ ಆಡಳಿತ ಮೊಕೇಸರ ಶ್ರೀನಿವಾಸ ಭಟ್, ಕಾರ್ಯಾಧ್ಯಕ್ಷ ನಾಗರಾಜ್ ಮೂಲಿಗಾರ್, ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಉಪಾಧ್ಯಕ್ಷ ಆನಂದ ಪಿ. ಸುವರ್ಣ, ರಮೇಶ್ ಕೋಟ್ಯಾನ್, ಶರತ್ […]
ಭಾರತೀಯ ದಂತ ವೈದ್ಯರ ಸಂಘ: ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ.

ಉಡುಪಿ: ಭಾರತೀಯ ದಂತ ವೈದ್ಯರ ಸಂಘ, ಉಡುಪಿ. ಇವರ ವತಿಯಿಂದ ರಾಜ್ಯಮಟ್ಟದ ಪದಾಧಿಕಾರಿಗಳ ಕಾರ್ಯಗಾರವನ್ನು ಭಾನುವಾರದಂದು ವ್ಯಾಲಿ ವ್ಯೂ ಕಂಟ್ರಿ ಕ್ಲಬ್ ಮಣಿಪಾಲದ ಆಯೋಜಿಸಲಾಗಿತ್ತು. ಭಾರತೀಯ ದಂತ ವೈದ್ಯ ಸಂಘದ ರಾಜ್ಯಾಧ್ಯಕ್ಷ ಡಾ. ಭರತ್ ಎಸ್.ವಿ. ಸಮಾರಂಭ ಉದ್ಘಾಟಿಸಿದರು. ಡಾ. ರಂಗನಾಥ್ ವಿ. ಹಾಗೂ ಡಾ.ಶ್ರೀನಿಧಿ ಡಿ. ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಹೊಸ ಹೊಸ ತಂತ್ರಜಾನವನ್ನು ಅಳವಡಿಸಕೊಳ್ಳುವ ಬಗ್ಗೆ ವಿಸೃತ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯ ಸಂಘ ಉಡುಪಿ ಇದರ ಅಧ್ಯಕ್ಷ […]
ಇತಿಹಾಸ ಪ್ರಸಿಧ್ಧ ಕಟಪಾಡಿ ಬೀಡು “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕಟಪಾಡಿ: ಫೆ.24 ರಂದು ನಡೆದ ಇತಿಹಾಸ ಪ್ರಸಿಧ್ಧ ಕಟಪಾಡಿ ಬೀಡು “ಮೂಡು – ಪಡು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 09 ಜೊತೆ ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 16 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 23 ಜೊತೆ ನೇಗಿಲು ಕಿರಿಯ: 93 ಜೊತೆ ಒಟ್ಟು ಕೋಣಗಳ ಸಂಖ್ಯೆ: 177 ಜೊತೆ ಕನೆಹಲಗೆ: ( ಸಮಾನ ಬಹುಮಾನ ) • ಬೋಳಾರ […]
ಪೆರ್ಡೂರು ರತ್ನಾಕರ ಕಲ್ಯಾಣಿಯವರಿಗೆ ಗೌರವಾಭಿನಂದನೆ.

ಉಡುಪಿ: ಕಿದಿಯೂರು ಹೋಟೆಲ್ ಉಡುಪಿ ಇದರ ತೃತೀಯ ಅಷ್ಟ ಪವಿತ್ರ ನಾಗಮಂಡಲ ಉತ್ಸವದ ಧಾರ್ಮಿಕ ಸಭೆಯಲ್ಲಿ ಸುಮಾರು 25ವರ್ಷಗಳ ಕಾಲ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೆರ್ಡೂರ್ ರತ್ನಾಕರ ಕಲ್ಯಾಣಿ ಅವರನ್ನು ಅವರ ಸೇವಾ ಹಿರಿತನವನ್ನು ಪರಿಗಣಿಸಿ ಹೋಟೆಲ್ ನ ಎಮ್ ಡಿ ಶ್ರೀ ಭುವನೇಂದ್ರ ಕಿದಿಯೂರು, ಗಣ್ಯರ ಸಮ ಕ್ಷಮದಲ್ಲಿ ಗೌರವವಿಸಿ ಅಭಿನಂದಿಸಿದರು. ಇವರು ಇತ್ತೀಚೆಗಷ್ಟೇ ಕಸಾಪ ಪುರಸ್ಕಾರವನ್ನು ಪಡೆದಿದ್ದಾರೆ.
ಉಡುಪಿ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟ್ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಭೇಟಿ

ಭಾರತ ತಂಡದ ಮಾಜಿ ಕ್ರಿಕೇಟ್ ಆಟಗಾರರಾದ ಕೃಷ್ಣಮಾಚಾರಿ ಶ್ರೀ ಕಾಂತ್ ಹಾಗೂ ಪತ್ನಿ ಕೃಷ್ಣಮಠಕ್ಕೆ ಆಗಮಿಸಿದ್ದರು. ಶ್ರೀ ಕೃಷ್ಣ, ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.