ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮಲ್ಪೆ: ಒಂದು ದೇವಸ್ಥಾನದ ಜೀರ್ಣೋದ್ದಾರ ಎಂದರೆ ಇಡೀ ಊರಿಗೆ ಊರೇ ಸಂಭ್ರಮಿಸುತ್ತದೆ. ದೇವರು ಮತ್ತೆ ಆಲಯ ಸೇರುವುದರೊಂದಿಗೆ ಎಲ್ಲರಿಗೂ ಶ್ರೇಯಸ್ಸಾಗುತ್ತದೆ. ಆತನ ಅನುಗ್ರಹ ದೇವಸ್ಥಾನಕ್ಕೆ ದುಡಿದ ಎಲ್ಲರಿಗೂ ಸಿಗುವಂತಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು. ಅವರು ಶುಕ್ರವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮಧ್ವರ ಪವಿತ್ರ ಕ್ಷೇತ್ರ ವಡಭಾಂಡೇಶ್ವರ ಅದಮಾರು ಮಠದ ಕಿರಿಯ ಯತಿ ಶ್ರೀ ಈಶ ಪ್ರಿಯ […]
ಕಾರ್ಕಳ: ನಾಳೆ (ಮಾ. 24) ಅಭಿನವ್ ಭಾರತ್ ವತಿಯಿಂದ “ನಮಗಾಗಿ ಮೋದಿ” ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ

ಉಡುಪಿ: ಅಭಿನವ ಭಾರತ ಕಾರ್ಕಳ ವತಿಯಿಂದ ನಮಗಾಗಿ ಮೋದಿ ವಿಶೇಷ ರಾಷ್ಟ್ರ ಜಾಗೃತಿ ಸಮಾವೇಶ ಮಾರ್ಚ್ 24ರಂದು ಸಂಜೆ 4 ಗಂಟೆಗೆ ಕಾರ್ಕಳದ ಬಂಡಿಮಠದಲ್ಲಿರುವ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಯುವ ರಾಜಕೀಯ ವಿಶ್ಲೇಷಕರಾದ ಸುರಭಿ ಹುದಿಗೆರೆ ಇವರು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಂಗ್ ಕಮಾಂಡರ್ ಬಿ.ಎಸ್ ಸುದರ್ಶನ್, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ. ಈ ಜಾಗೃತಿ ಸಮಾವೇಶದ ಅಧ್ಯಕ್ಷತೆಯನ್ನು ಹಿರಿಯ ಉದ್ಯಮಿಯಾದ ಬೋಳ ಪ್ರಭಾಕರ್ ಕಾಮತ್ […]
ಮಾ.25 ರಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ. ಮಾ. 22ರ ರಾತ್ರಿ 7:30ಕ್ಕೆ ವಿಘ್ನೇಶ್ವರ ಪ್ರಾರ್ಥನೆ ನಡೆಯಲಿದ್ದು, ಮಾ. 23 ರಂದು ಮಧ್ಯಾಹ್ನ ಒಂದಕ್ಕೆ ದಿ|ಪರ್ಕಳ ಗುರುರಾಜ್ ಜೋಯ್ಸರ ಸುಪುತ್ರರಿಂದ ಕಲಶ ಅಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ ಬೈಗಿನ ಬಲಿ, ಚಂದ್ರಮಂಡಲ ರಥೋತ್ಸವ ಮತ್ತು ದೊಡ್ಡ ರಂಗ ಪೂಜೆ, ಬೂತ ಬಲಿ, ಮಾ. 24ರಂದು ಬೆಳಿಗ್ಗೆ ಆಶ್ಲೇಷ ಬಲಿ, ದುರ್ಗಾ ಹೋಮ […]
ವಿಜೃಂಭಣೆಯ ಪೆರ್ಡೂರು ಜಾತ್ರಾ ಮಹೋತ್ಸವ: ಪ್ರಸನ್ನ ಪೆರ್ಡೂರು ಅವರು ಕ್ಲಿಕ್ಕಿಸಿದ ಸುಂದರವಾದ ಚಿತ್ರಗಳು..

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ರಥೋತ್ಸವ ಮೆರವಣಿಗೆಯು ಮಾ.16 ರಂದು ಸಾಯಂಕಾಲ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಪ್ರಸನ್ನ ಪೆರ್ಡೂರು ಅವರು ಶ್ರೀಮನ್ಮಹಾರಥೋತ್ಸವ, ಹಚ್ಚಡ ಸೇವೆ, ಸುಡುಮದ್ದು ಪ್ರದರ್ಶನ, ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದ, ನಾಟಕ ಹಾಗೂ ಯಕ್ಷಗಾನದ ಸುಂದರವಾದ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.
Bangalore Fashion Week 2024: ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡ ಬೆಂಗಳೂರು ಫ್ಯಾಷನ್ ವೀಕ್

ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್ ವೀಕ್ (Bangalore Fashion Week 2024) ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಡೆದ ಶೋನಲ್ಲಿ ಸೆಲೆಬ್ರೆಟಿ ಡಿಸೈನರ್ಗಳು, ಮಾಡೆಲ್ಗಳು, ಫ್ಯಾಷನ್ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ. ಸಮ್ಮರ್ ಸೀಸನ್ ಡಿಸೈನರ್ವೇರ್ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್ಗಳು ಬಿಗ್ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಾ ನೋಡುಗರ ಮನ ಸೆಳೆದರೇ, ಸೆಲೆಬ್ರೆಟಿ ಡಿಸೈನರ್ಗಳು, ಕೊರಿಯಾಗ್ರಾಫರ್ಗಳು ಹಾಗೂ ಸೆಲೆಬ್ರೆಟಿಗಳು ರ್ಯಾಂಪ್ನ ಈ ಪ್ರದರ್ಶನಕ್ಕೆ ಸಾಕ್ಷಿಯಾದರು. […]