ಉಡುಪಿXPRESS ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ಬಿಡುಗಡೆ

ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಉಡುಪಿXPRESS ನ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ವನ್ನು ಬುಧವಾರ ಕೃಷ್ಣಮಠದ ಕನಕದಾಸ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು. ಪರ್ಯಾಯ ಪೀಠವೇರಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಂಚಿಕೆ ಅನಾವರಣಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪರ್ಯಾಯ ಉತ್ಸವ ಸಮಿತಿ, ಹೊರೆಕಾಣಿಕೆಯ ಸಮಿತಿಯ ಸದಸ್ಯರು, ಉಡುಪಿXPRESS ಮಾರುಕಟ್ಟೆ ವಿಭಾಗದ ಸ್ವರೂಪ್ ಶ್ರೀಯಾನ್, ಅಶೋಕ್, ನಿತಿನ್ ಉಪಸ್ಥಿತರಿದ್ದರು.

ಉಡುಪಿ: ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಭೇಟಿ

ಉಡುಪಿ: ಪೂರ್ವಭಾವಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಂಗಳವಾರ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ಆಡಳಿತ ಮೊಕ್ತೇಸರ ಮಾಜಿ ಸಾಸಕ ಕೆ ರಘುಪತಿ ಭಟ್ , ದೇವಳದ ಅರ್ಚಕರು , ಟ್ರಸ್ಟಿಗಳು ಭಕ್ತಿ ಆದರದಿಂದ ಉಭಯ ಶ್ರೀಗಳನ್ನು ಬರಮಾಡಿಕೊಂಡರು . ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯೋತ್ಸವವನ್ನು ಸಂಕಲ್ಪಿಸಿರುವುದರ ದ್ಯೋತಕವಾಗಿ ಶ್ರೀ ಮಠದ ಪಟ್ಟದ ದೇವರು ಮತ್ತು ಭಗವದ್ಗೀತೆ ಗ್ರಂಥಗಳನ್ನು ಸಾಲಂಕೃತ ಬೆಳ್ಳಿ […]

ಕಾರ್ಕಳ: ಜ.21 ರಿಂದ 26 ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು. ಅವರು ಬಸಿಲಿಕಾದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು […]

ಐತಿಹಾಸಿಕ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ: ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ: ಪುರಾತನ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ ತಪಸ್ಸು ಮಾಡಿದ್ದ ಕೀಳಂಜೆ ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆಯಾದಿ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ಜ.22 ರಿಂದ ಪ್ರಾರಂಭವಾಗಲಿದೆ. ಜ.22 ಸೋಮವಾರದಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪ ಸಮರ್ಪಣೆ, ಮುಷ್ಟಿ ಕಾಣಿಕೆ, ಮೃತ್ಯುಂಜಯ ಹೋಮ ಹಾಗು ಇತರ ಹೋಮಗಳು […]

ನಾಳೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ – ವೆತಾ ಉಡುಪಿ ಕೇಂದ್ರದ ಉದ್ಘಾಟನೆ

ಉಡುಪಿ: ಇಲ್ಲಿನ ಅಲಂಕಾರ್ ಚಿತ್ರಮಂದಿರದ ಹಿಂದಿರುವ ಮಹಾಲಸ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಜ.13 ರಂದು ಬೆಳಗ್ಗೆ 11 ಗಂಟೆಗೆ ಗುರುಕೃಪಾ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿಯ ಗೆತಾ -ವೆತಾ ಉಡುಪಿ ಕೇಂದ್ರದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಗಳಾಗಿ ಬಿ ಇ ಒ ಅಶೋಕ್ ಕಾಮತ್, ಅಲೆವೂರು ಶಾಂತಿ ನಿಕೇತನ ಶಾಲೆಯ ದಿನೇಶ್ ಕಿಣಿ, ಮುಕುಂದಕೃಪ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಧ್ಯಾಯಿನಿ ಸುಜಾತ ಶೆಟ್ಟಿ ಉಪಸ್ಥತರಿರಲಿದ್ದಾರೆ ಎಂದು ಸುಪ್ರೀತಾ ಕಾಮತ್ ಹಾಗೂ ಪ್ರಶಾಂತ್ ಕಾಮತ್ ತಿಳಿಸಿದ್ದಾರೆ.