ಮೇ.18,19: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ನಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ.

ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಮೇ18 ಮತ್ತು 19ರಂದು ಉಡುಪಿ ಕೋರ್ಟ್ ಬಳಿ, ದೇವರಾಜ್ ಟವರ್ಸ್, ಒಂದನೇ ಮಹಡಿಯಲ್ಲಿ ಬೆಳಿಗ್ಗೆ 10 ರಿಂದ 1.30 ರವರೆಗೆ ಸಾಯಂಕಾಲ 3 ರಿಂದ 6ರ ವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದ ಮುಂದಾಳತ್ವವನ್ನು ನಿರ್ಮಲ ಪ್ರಭು, ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಅವರು ವಹಿಸುವರು. ಆಕರ್ಷಣೆ: ಶ್ರವಣ ತಪಾಸಣೆ. ಉಚಿತ ಶ್ರವಣಸಾಧನ. (HearingAid) ಟ್ರಯಲ್. ಶ್ರವಣ ಸಾಧನಗಳ […]

ಉಡುಪಿ ಬನ್ನಂಜೆಯಲ್ಲಿ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ಮಳಿಗೆ ‘ಉಡುಪಿ ಸ್ಟೋರ್ಸ್ ಉದ್ಘಾಟನೆ

ಉಡುಪಿ: ಉಡುಪಿ ವಿ21 ಗ್ರೂಪ್ ನವರಿಂದ ಸಾಂಪ್ರದಾಯಿಕ ತಿಂಡಿ-ತಿನಿಸು ಹಾಗೂ ಕರಕುಶಲ ವಸ್ತುಗಳ ನೂತನ ಮಳಿಗೆ “ಉಡುಪಿ ಸ್ಟೋರ್ಸ್*ನ ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಶುಕ್ರವಾರ ಉದ್ಘಾಟನೆ ನಡೆಯಿತು. ಈ ಮಳಿಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಉಡುಪಿಯ ಆಹಾರೋತ್ಪನ್ನಗಳಿಗೆ ಎಲ್ಲ ಕಡೆ ಬೇಡಿಕೆಯಿದೆ. ಸಮಾಜಕ್ಕೆ ಶುಚಿ-ರುಚಿಯಾದ ಗುಣಮಟ್ಟದ ಆರೋಗ್ಯಪೂರ್ಣ ಆಹಾರವನ್ನು ಒದಗಿಸುವ ಮಹದಾಸೆಯಿಂದ ಆರಂಭಿಸಲ್ಪಟ್ಟ ಈ ಮಳಿಗೆ ಯಶಸ್ವಿಯಾಗಲಿದೆ ಎಂದು […]

ಮಾರುತಿ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯದ ಬಂಪರ್ ಆಫರ್ ಮೇ.12ರ ವರೆಗೆ ಲಭ್ಯ

ಉಡುಪಿ,ಮೇ 10: ನಗರದ ಕನಕದಾಸ ರಸ್ತೆಯಲ್ಲಿ ಇರುವ ಸುಸಜ್ಜಿತ ವಿಶಾಲ ಶೋರೂಮ್ ‘ಮಾರುತಿ ಜ್ಯುವೆಲರ್ಸ್’ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಸ್ಪೆಶಲ್ ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ.ಸ್ವರ್ಣಭರಣ ಉದ್ಯಮದಲ್ಲಿ 30 ವರ್ಷಗಳ ಅಪಾರ ಅನುಭವ ಹೊಂದಿರುವ ನಾಜೂಕು ಕೆಲಸಕ್ಕೆ ಹೆಸರುವಾಸಿಯಾದ ಈ ಮಳಿಗೆಗಳಲ್ಲಿ ಪ್ರತಿ 1 ಗ್ರಾಂ ಚಿನ್ನ ಖರೀದಿಗೆ 300 ರೂ.ಡಿಸ್ಕೌಂಟ್ ನೀಡಲಾಗುವುದು. ಎಲ್ಲ ಮಾದರಿಯ, ಎಲ್ಲ ವಿನ್ಯಾಸದ ಪಾರಂಪರಿಕ ಮತ್ತು ಫ್ಯಾಶನೇಬಲ್ ಚಿನ್ನಾಭರಣಗಳು ಇಲ್ಲಿ ದೊರೆಯಲಿವೆ.ಸಂಸ್ಥೆಯು ಈಗಾಗಲೇ ಉಡುಪಿಯಲ್ಲಿ ಎರಡು, ಕುಂದಾಪುರದ ಮುನ್ಸಿಪಲ್ ರಸ್ತೆ ಮತ್ತು […]

ಡಾ‌.ಉಮೇಶ್ ಪ್ರಭು ಮಡಿಲಿಗೆ ಬಾಲ‌ ವಾತ್ಸಲ್ಯ ಸಿಂಧು ಪ್ರಶಸ್ತಿ.

ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀಕೃಷ್ಣ ಬಾಲನಿಕೇತನ, ವಿಶ್ವೇಶತೀರ್ಥ ಸೇವಾಧಾಮ, ಶ್ರೀ ಕೃಷ್ಣ ಸೇವಾಧಾಮ‌ ಟ್ರಸ್ಟ್ ವತಿಯಿಂದ ಬುಧವಾರ ಕೊಡಮಾಡುವ ಬಾಲ್ಯ ವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಸಂತೆಕಟ್ಟೆ ಕೃಷ್ಣಾನುಗ್ರಹ ಸಂಸ್ಥೆ ಚೇರ್ಮನ್ ಡಾ.ಉಮೇಶ್ ಪ್ರಭು ಅವರಿಗೆ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಎಲ್ಲಿಯೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಇರಬಾರದು. ಶಿಕ್ಷಣದ ಜತೆಗೆ ಮೌಲ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು ಎಂದು ಡಾ.ಉಮೇಶ್ ಪ್ರಭು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 60ರ ಸಂಭ್ರಮದಲ್ಲಿರುವ ಪೇಜಾವರ ಸ್ವಾಮೀಜಿಯವರನ್ನು ಬಾಲನಿಕೇತನ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. […]

ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಶ್ರೀಮನ್ಮಹಾರಥೋತ್ಸವ.

ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಗುರುವಾರ ಶ್ರೀ ಮನ್ಮಹಾರಥೋತ್ಸವ ನಡೆಯಿತು . ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ ಶ್ರೀ ಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗ ಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು‌. ಪರ್ಯಾಯ ತಂತ್ರಿ ವೇ.ಮೂ. ಬೆಟ್ಟಿಗೆ ವೆಂಕಟರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ.ಮೂ ಗುರುರಾಜಭಟ್ ಅರ್ಚಕತ್ವದಲ್ಲಿ, […]