ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿ ಸೇರ್ಪಡೆ.

ನವದೆಹಲಿ: ಭಾರತ T20 ವಿಶ್ವಕಪ್ ವಿಜಯದ ನಂತರ ಕ್ರಿಕೆಟಿಗ ರವೀಂದ್ರ ಜಡೇಜಾ ಅವರು T20 ಅಂತರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದರು. ಇದೀಗ ರವೀಂದ್ರ ಜಡೇಜಾ ಅವರು ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಪ್ರಯಾಣವನ್ನು ಆರಂಭಿಸಿದ್ದಾರೆ. ಗುಜರಾತ್‌ನ ಬಿಜೆಪಿ ಶಾಸಕರಾಗಿರುವ ಕ್ರಿಕೆಟಿಗನ ಪತ್ನಿ ರಿವಾಬಾ ಜಡೇಜಾ ಈ ಘೋಷಣೆ ಮಾಡಿದ್ದಾರೆ. ಗುರುವಾರ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಶ್ರೀಮತಿ ಜಡೇಜಾ ಅವರು ಬಿಜೆಪಿ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರ ಕಾರ್ಡ್‌ನ ಫೋಟೋಗಳನ್ನು ತಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಬಿಜೆಪಿಯ ‘ಸದಾಸ್ಯತಾ ಅಭಿಯಾನ’ […]
ಹೆಬ್ರಿ: ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ

ಹೆಬ್ರಿ: ವ್ಯಕ್ತಿಗಳಲ್ಲಿ ಮಾತೇ ಸಾಧನೆ ಆಗಬಾರದು ಸಾಧನೆಯೇ ಮಾತಾಗಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಅನೇಕ ಸಾಧಕರನ್ನು ಗುರುತಿಸಿ ಕೇಂದ್ರ ಸರ್ಕಾರ ಇಂದು ಪ್ರಶಸ್ತಿಯನ್ನು ನೀಡುತ್ತಿದೆ. ಎಲೆ ಮರೆಯ ಕಾಯಿಯಂತೆ ಶ್ರದ್ಧೆಯಿಂದ ಕೆಲಸವನ್ನು ಮಾಡಿ ನಿವೃತ್ತಿಯಾದ ರಘುಪತಿ ಕಲ್ಕೂರ್ ಇವರನ್ನು ಗುರುತಿಸಿ ಗೌರವಿಸಿದ ಎಸ್.ಆರ್ ಶಿಕ್ಷಣ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸುತ್ತೇನೆ. ರಘುಪತಿ ಕಲ್ಕೂರ್ ಅವರು ವೃತ್ತಿಯಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿ ಮಕ್ಕಳ ಬದುಕಿಗಾಗಿ ಶ್ರಮಿಸಿದವರು. ಶಿಕ್ಷಕರು ಹೇಳುವ ಮಾತುಗಳನ್ನು ಶ್ರದ್ಧೆಯಿಂದ ಕೇಳಿ ಮಕ್ಕಳು […]
ಉಡುಪಿಯ ಜಾಹೀರಾತು ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಉಡುಪಿ:ಉಡುಪಿಯ ಜಾಹೀರಾತು ಕಂಪೆನಿಯಲ್ಲಿ ವೀರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448379989 https://docs.google.com/forms/d/e/1FAIpQLSd0RJe9MRm70Khqh1Ryx-EN8VJODcuqhwWa-ATvjcLuIaXZaA/viewform?usp=sf_link
ಪ್ರಾಂಶುಪಾಲರ ಪ್ರಶಸ್ತಿ ವಾಪಸ್ ಪಡೆದದ್ದು ನೋವಿನ ಸಂಗತಿ

ಉಡುಪಿ: ಪ್ರಾಂಶುಪಾಲರ ಪ್ರಶಸ್ತಿ ವಾಪಸ್ ಪಡೆದದ್ದು ನೋವಿನ ಸಂಗತಿ. ಸರ್ಕಾರದ ಈ ನಡೆ ಆಶ್ಚರ್ಯಕರವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಣೆ ಮಾಡಿ, ಬಳಿಕ ತಡೆಹಿಡಿದ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಪ್ರಾಂಶುಪಾಲರು ಅಂದು ರಾಜ್ಯ ಸರ್ಕಾರದ ಆದೇಶ ಪಾಲಿಸಿದ್ದರು. ಸಮಾನ ವಸ್ತ್ರ ಇರಬೇಕು ಎಂದು ಹಿಜಾಬ್ ನಿಷೇಧಿಸಲಾಗಿತ್ತು. ಸರ್ಕಾರದ ಆದೇಶವನ್ನು ಸರ್ಕಾರಿ ಅಧಿಕಾರಿಯಾಗಿ […]
ರಾಮಕೃಷ್ಣರಿಗೆ ಪ್ರಶಸ್ತಿ ನೀಡದಿದ್ದರೆ ಹೋರಾಟ: ಪೃಥ್ವಿರಾಜ್ ಶೆಟ್ಟಿ ಎಚ್ಚರಿಕೆ

ಉಡುಪಿ: ಕುಂದಾಪುರದ ಬಿ.ಜಿ ರಾಮಕೃಷ್ಣ ಎಂಬವರಿಗೆ ಸರಕಾರ ಪ್ರಶಸ್ತಿ ನೀಡಿ ಬಳಿಕ ವಾಪಸ್ ಪಡೆದದ್ದು ಖಂಡನೀಯ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, , ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಯಿತು. ಆದರೆ ರಾಮಕೃಷ್ಣ ಅವರು ಒಬ್ಬ ಶಿಕ್ಷಕನಾಗಿ ಸಮಾನ ವಸ್ತ್ರ ಸಂಹಿತೆಯ ಭಾಗವಾಗಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ತಡೆದಿದ್ದರು. ಇದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಅವರಿಗೆ ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆದಿರುವುದು ಖಂಡನೀಯ. […]