ಉಡುಪಿ: ಸಹಪಾಠಿ ಶ್ರೀಪಾದರೊಂದಿಗೆ ಜನ್ಮದಿನವನ್ನು ಆಚರಿಸಿದ ಪುತ್ತಿಗೆ ಶ್ರೀ

ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರದ ಶುಭಸಂದರ್ಭದಲ್ಲಿ ತಮ್ಮ ಸಹಪಾಠಿಗಳಾದ ಅದಮಾರು ಹಿರಿಯ ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಹಾಗೂ ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಗೌರವಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು. ಪುತ್ತಿಗೆ ಕಿರಿಯ ಸುಶ್ರಿಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮತ್ತು ಅನೇಕ ವಿದ್ವಾಂಸರ ಹಾಗೂ ಶ್ರೀಪುತ್ತಿಗೆ ವಿದ್ಯಾಪೀಠದ ಅನೇಕ ಹಳೆವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಕೃಷ್ಣಮಠದಲ್ಲಿ ಜರುಗಿದ ಈ ಸಮಾರಂಭದಲ್ಲಿ ಪರ್ಯಾಯ ಮಠದ ವತಿಯಿಂದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು […]
ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್ ವಿವರಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ಹೈಕೋರ್ಟ್ ಸೂಚನೆ.

ಬೆಂಗಳೂರು: ಚಿತ್ರದುರ್ಗ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ವಿರುದ್ಧ 3,991 ಪುಟಗಳ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿರುವ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ಅದನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಯವರೆಗೂ ನಿರ್ಬಂಧ ಜಾರಿಯಲ್ಲಿರುತ್ತದೆ. ಚಾರ್ಜ್ ಶೀಟ್ […]
ಉಡುಪಿ: ಕ್ಷುಲ್ಲಕ ರಾಜಕಾರಣ ಮಾಡಿಕೊಂಡು ಕಾಲಹರಣ ಮಾಡಬೇಡಿ: ಶಾಸಕರಿಗೆ ಎಚ್ಚರಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್

ಉಡುಪಿ: ಕುಂದಾಪುರದ ಪ್ರಾಂಶುಪಾಲರ ಪ್ರಶಸ್ತಿ ತಡೆ ಕುರಿತಾಗಿ ಅಸಾಂವಿಧಾನಿಕ, ಅನಾಗರಿಕ ರೀತಿಯಲ್ಲಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿರುವುದರ ಬಗ್ಗೆ ಮೊದಲು ಶಾಸಕರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಜ್ಞಾನದ ಬೆಳಕನ್ನು ನೀಡಿ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಗೌರವ, ಅತೀವ ಕಾಳಜಿ ಇದೆ. ಶಿಕ್ಷಕರ ಮೇಲೆ ಗೌರವದ ನೆಪ ಇಟ್ಟುಕೊಂಡು ಕಾನೂನಿಗೆ ವಿರುದ್ಧವಾಗಿ ಅನಾಗರಿಕ ರೀತಿಯಲ್ಲಿ ತಮ್ಮವರು ಪ್ರತಿಭಟನ ನಡೆಯುವಾಗ ಕಾನೂನು ರೂಪಿಸುವ ರಾಜ್ಯ […]
ಡಯಾನ- ಕುಕ್ಕಿಕಟ್ಟೆ ರಸ್ತೆಯಲ್ಲಿ ಮರಣ ಗುಂಡಿ; ಸ್ವಲ್ಪ ಎಡವಿದ್ರೂ ಮಸಣ ಸೇರುದಂತೂ ಗ್ಯಾರಂಟಿ!

ಉಡುಪಿ: ಈ ರಸ್ತೆಯಲ್ಲಿ ಪ್ರಯಾಣಿಸುವುದು ಎಂದರೆ ಸಾವಿಗೆ ಆಹ್ವಾನ ಕೊಟ್ಟಂತೆ. ಜೀವದ ಆಸೆಯನ್ನೆ ಬಿಟ್ಟುಬಿಡಬೇಕು. ಮನೆಗೆ ತಲುಪುತ್ತೇವೆ ಎಂಬ ಗ್ಯಾರಂಟಿ ಅಂತೂ ಇಲ್ಲವೇ ಇಲ್ಲ. ಇದು ಡಯಾನ- ಕುಕ್ಕಿಕಟ್ಟೆ ರಸ್ತೆಯ ನರಕ ದರ್ಶನ. ಹೌದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಡಯಾನ-ಕುಕ್ಕಿಕಟ್ಟೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಯ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ನಿತ್ಯ ಸರ್ಕಸ್ ಮಾಡಿಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಎಡವಿದ್ರೂ ಆಸ್ಪತ್ರೆ ಅಥವಾ ಮಸಣ ಸೇರುದಂತೂ ಗ್ಯಾರಂಟಿ. ಈಗಾಗಲೇ […]
ಬ್ರಹ್ಮಾವರ: ಸ್ಕೂಟರ್-ಬೈಕ್ ನಡುವೆ ಅಪಘಾತ; ಸ್ಕೂಟರ್ ಸವಾರ ಮೃತ್ಯು.

ಬ್ರಹ್ಮಾವರ: ಸ್ಕೂಟರ್ ಮತ್ತು ಬೈಕ್ ಮಧ್ಯೆ ಸೆ.8ರಂದು ಮಧ್ಯಾಹ್ನ ವೇಳೆ ಕನ್ನಾರು- ಕೊಕ್ಕರ್ಣೆ ರಸ್ತೆಯ ಸಾಸ್ತಾವು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ. ಮೃತರನ್ನು ಸ್ಕೂಟರ್ ಸವಾರ ಸಹಿತ್ ತಂಡಿ ಎಂದು ಗುರುತಿಸಲಾಗಿದೆ. ಕನ್ನಾರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಕೊಕ್ಕರ್ಣೆ ಕಡೆಯಿಂದ ಕನ್ನಾರು ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಎರಡೂ ವಾಹನಗಳು ರಸ್ತೆಗೆ ಬಿದ್ದು ಸ್ಕೂಟರ್‌ನಲ್ಲಿದ್ದ ಸಹಿತ್ ತಂಡಿ ಹಾಗೂ ಬೈಕ್‌ನಲ್ಲಿದ್ದ ಸವಾರ […]