ಶಂಕರನಾರಾಯಣ: ವಾರಾಹಿ ಕಾಲುವೆಗೆ ಹಾರಿ ಗೃಹಿಣಿ ಆತ್ಮಹತ್ಯೆ.

ಶಂಕರನಾರಾಯಣ: ಉಳ್ಳೂರು-74 ಗ್ರಾಮದ ದೊಡ್ಮನೆ ಸುನಿತಾ(42) ಅವರು ಮಾನಸಿಕ ಖಾಯಿಲೆಯಿಂದ ಬಳುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.9ರಂದು ವಾರಾಹಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಸೆ. 8ರ ರಾತ್ರಿ ಊಟ ಮಾಡಿ ಮಲಗಿದ್ದ ಸುನಿತಾ ಅವರು ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಹುಡುಕಾಡಿದ್ದಾಗ, ವಾರಾಹಿ ಕಾಲುವೆಯ ಸಿಮೆಂಟ್‌ ದಂಡೆಯ ಮೇಲೆ ಸುನಿತಾ ಅವರ ಮೃತ ಪತ್ತೆಯಾಗಿದೆ. ಹಿಂದೆಯೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪುತ್ರ ಸುಮಂತ್‌(20) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ […]

ಮಣಿಪಾಲ: ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು

ಮಣಿಪಾಲ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಲಾಭಾಂಶಕ್ಕಾಗಿ ವ್ಯಕ್ತಿಯೊಬ್ಬರು ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ವಂಚನೆಗೆ ಒಳಗಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸಂತೋಷನಗರದ ಮಹಮ್ಮದ್ ಶರೀಫ್(28) ಎಂಬವರು ಹೆಚ್ಚಿನ ಲಾಭಾಂಶ ನೀಡುವ ಮೊಬೈಲ್ ಸಂದೇಶವನ್ನು ನಂಬಿ ಹಣ ಹೂಡಿಕೆ ಮಾಡಿದ್ದರು. ಇವರು ಬೇರೆ ಬೇರೆ ಅವಧಿಯಲ್ಲಿ ಒಟ್ಟು 8,46,583ರೂ. ಹಣವನ್ನು ಹೂಡಿಕೆ ಮಾಡಿದ್ದು, ಆರೋಪಿಗಳು ಆ ಹಣವನ್ನು ತಮ್ಮ ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.

ಉಡುಪಿ: ಬಲ್ಲಾಳ್ ಮೊಬೈಲ್ ನಲ್ಲಿ ‘ಐಫೋನ್‌’ ಜೊತೆಗೆ ಉಚಿತವಾಗಿ ಪಡೆಯಿರಿ 9,999 ರೂ. ಮೌಲ್ಯದ ಗಿಫ್ಟ್.

ಉಡುಪಿ: ಆಪಲ್ ಐಫೋನ್ ನೂತನವಾಗಿ ಹೊರತಂದಿರುವ “ಆಪಲ್ ದಿ ಐ ಫೋನ್ 16′, ‘ಆಪಲ್ ವಾಚ್ ಸೀರೀಸ್ 10’ ಮತ್ತು ‘ಏರ್ಪೋಡ್ ಸೀರಿಸ್ 4’ ಗಳನ್ನು ಸೆ.10 ರಿಂದ ಉಡುಪಿಯ ಕಲ್ಪನಾ ಚಿತ್ರಮಂದಿರದ ಬಳಿಯ ‘ಬಲ್ಲಾಳ್ ಮೊಬೈಲ್ ನಲ್ಲಿ ಬುಕ್ಕಿಂಗ್‌ ಪ್ರಾರಂಭವಾಗಿದೆ. ಈ ನೂತನ ಆಪಲ್ ಉತ್ಪನ್ನಗಳು “ಬಲ್ಲಾಳ್ ಮೊಬೈಲ್ಸ್” ನಲ್ಲಿ ಮುಂಗಡವಾಗಿ ಬುಕ್ ಮಾಡಿ, ಪ್ರತಿಯೊಬ್ಬ ಗ್ರಾಹಕರಿಗೆ 9,999 ರೂ. ಮೌಲ್ಯದ ಮೊಬೈಲ್ ಸಲಕರಣೆಗಳು ಉಚಿತವಾಗಿ ಪಡೆಯಿರಿ. ಇಂದೇ ನಿಮ್ಮ ಕನಸಿನ ಐಫೋನ್ ಬುಕ್ ಮಾಡಿ… […]

ಉಡುಪಿ: ಸ್ಫೋಟಕ ಪತ್ತೆಯಲ್ಲಿ ಈತ ಎಕ್ಸ್ ಪರ್ಟ್; ಹಲವು ಹೆಗ್ಗಳಿಕೆಗಳ ಪೊಲೀಸ್‌ ಶ್ವಾನ “ಐಕಾನ್ “..!

ಉಡುಪಿ: ಪೊಲೀಸ್ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪೊಲೀಸ್‌ ಶ್ವಾನ “ಐಕಾನ್” ಹಲವು ಹೆಗ್ಗಳಿಕೆಯನ್ನು ಹೊಂದಿದೆ. ಲ್ಯಾಬ್ರಡಾರ್ ರಿಟ್ರೇವರ್ ತಳಿಯ ಈ ಶ್ವಾನ 2014ರ ನವೆಂಬರ್ 5ರಂದು ಶ್ವಾನದಳ ವಿಭಾಗಕ್ಕೆ ಸೇರ್ಪಡೆಗೊಂಡಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿ ಸ್ಫೋಟಕ ಪತ್ತೆಯಲ್ಲಿ 9 ತಿಂಗಳು ಕಠಿಣ ತರಬೇತಿಯನ್ನು ಇದು ಪಡೆದಿತ್ತು. ಈತನಕ ಉಡುಪಿ ಜಿಲ್ಲೆಯಲ್ಲಿ ಹಾಗೂ ಹೊರ ಜಿಲ್ಲೆಯಲ್ಲಿ ಸುಮಾರು 417 ಕ್ಕಿಂತ ಅಧಿಕ ವಿಶೇಷ ಕರ್ತವ್ಯ ನಿರ್ವಹಿಸಿದೆ. ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ವಿದೇಶಿ ಗಣ್ಯರು ಹಾಗೂ […]

ಉಡುಪಿ:ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದಯೋಜನೆಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಚಲಿಸಬಲ್ಲ ಇ-ತ್ರಿಚಕ್ರ ವಿದ್ಯುತ್ ಚಾಲಿತ ಸುಸಜ್ಜಿತ ಪರಿಸರ ಸ್ನೇಹಿ ಕಿಯಾಸ್ಕ್ “ಮತ್ಸ್ಯ ವಾಹಿನಿ” ವಾಹನಗಳಲ್ಲಿ ತಾಜಾ ಮೀನು ಮಾರಾಟಕ್ಕೆ ಹಾಗೂ ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಪರವಾನಗಿಆಧಾರದಲ್ಲಿ ಪಡೆಯುವ ಬಗ್ಗೆ ಜಿಲ್ಲೆಯ ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗದವರಿಗೆ 1 ಲಕ್ಷ ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ವರ್ಗದವರಿಗೆ 0.50 ಲಕ್ಷ […]