ವಿದ್ಯಾರ್ಥಿನಿಲಯ ಪ್ರವೇಶಾತಿ : ಅರ್ಜಿ ಆಹ್ವಾನ

ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್,ಸಿಖ್, ಬೌದ್ಧ ವರ್ಗದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಾತಿಗೆ ಸಾಮಾನ್ಯ ಪದವಿ ಮಟ್ಟದಕೋರ್ಸ್, ವೃತ್ತಿಪರ ಕೋರ್ಸು ಮತ್ತು ಸ್ನಾತಕೋತ್ತರ ಕೋರ್ಸಿನ ವಿದ್ಯಾರ್ಥಿಗಳಿಂದ ಸ್ಟೇಟ್ ಹಾಸ್ಟೆಲ್ ಪೋರ್ಟಲ್ ತಂತ್ರಾಂಶದವೆಬ್‌ಸೈಟ್ https://shp.Karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಕಛೇರಿ ಮಣಿಪಾಲದೂ.ಸಂಖ್ಯೆ: 0820-2573596, ಸಹಾಯವಾಣಿ ಸಂಖ್ಯೆ: 8277799990, ಜಿಲ್ಲಾ […]
ಶ್ರೀಮತಿ ಲೀಲಾವತಿ ಯಾನೆ ರುಕ್ಮಿಣಿ ಸಾಮಂತ್ ನಿಧನ

ಉಡುಪಿ:ದಿವಂಗತ ಮುಂಡ್ಕಿನಜಡ್ಡು ಲಕ್ಷ್ಮಣ ಸಾಮಂತ್ ಯಾನೆ ನರಸಿಂಹ ಸಾಮಂತ್ ರವರ ಧರ್ಮಪತ್ನಿ, ರಾಧಾಕೃಷ್ಣ ಮತ್ತು ಅಶೋಕ್ ಸಾಮಂತ್ ರವರ ಮಾತೃ, 84 ವರ್ಷ ಪ್ರಾಯದ ಶ್ರೀಮತಿ ಲೀಲಾವತಿ ಯಾನೆ ರುಕ್ಮಿಣಿ ಸಾಮಂತ್, ಶುಕ್ರವಾರ ಸಂಜೆ 7:15 ಗಂಟೆಗೆ ಸ್ವಗ್ರಹದಲ್ಲಿ ದೈವಾಧೀನ ರಾಗಿರುವರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯ ಕ್ರಿಯೆಯು ಇಂದು ದಿನಾಂಕ 21- 09-2024 ರ ಶನಿವಾರ ಬೆಳಿಗ್ಗೆ 8-30 ಗಂಟೆಗೆ ಮುಂಡ್ಕಿನಜಡ್ಡು ವಿನಲ್ಲಿ ಜರಗಲಿದೆ.
ಸಂತೆಕಟ್ಟೆ ರಸ್ತೆ ದುರಸ್ತಿಗಾಗಿ ಹಾಡು ರಚನೆ

ಉಡುಪಿ: ಉಡುಪಿ ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ನಿತ್ಯ ಪರದಾಟ ನಡೆಸುತ್ತಿದ್ದಾರೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೀಗ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ‘ಮದನ್ ಮಣಿಪಾಲ್’ ಎಂಬವರು ಹಾಡು ರಚಿಸಿದ್ದು, ಅದು ಭಾರೀ ವೈರಲ್ ಆಗಿದೆ. ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಅವ್ಯವಸ್ಥೆಯಿಂದಾಗಿ ಈ ಭಾಗದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದಾಗಿ ಇಲ್ಲಿ ಅಪಘಾತಗಳು ನಡೆದಿದ್ದಕ್ಕೆ ಲೆಕ್ಕವೇ ಇಲ್ಲ. ಹಾಗೆ ಅಪಘಾತಕ್ಕೆ ಈಡಾದವರು ಮದನ್ ಅವರಿಗೆ […]
ಕೋಡಿ: ಕೈರಂಪಣಿ ಬಲೆಗೆ ಬಿದ್ದ ಬೃಹತ್ ಕಡಲಾಮೆಗಳ ರಕ್ಷಣೆ

ಉಡುಪಿ: ಮೀನುಗಾರಿಕೆಯ ವೇಳೆ ಬೃಹತ್ ಗಾತ್ರದ ಕಡಲಾಮೆಗಳೆರಡು ಕೈರಂಪಣಿ ಬಲೆಗೆ ಬಿದ್ದಿದ್ದು, ಮೀನುಗಾರರು ವಾಪಾಸು ಸಾಗರದಾಳಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ತಾಲೂಕಿನ ಎಂ. ಕೋಡಿ ಸಮೀಪ ಸಮುದ್ರದಲ್ಲಿ ಎರಡು ಕಡಲಾಮೆಗಳು ಮೀನುಗಾರರ ಬಲೆಗೆ ಸೆರೆ ಸಿಕ್ಕಿದ್ದವು. ಬ್ರಹ್ಮಲಿಂಗೇಶ್ವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 40 ಕೆಜಿ, ಭಾರದ ಹಾಗೂ 20 ಕೆಜಿ ತೂಕದ ಎರಡು ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿದ್ದವು. ಬಲೆ ಮೇಲಕ್ಕೆತ್ತಿದ್ದಾಗ ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಮೀನುಗಾರರಾದ ಪ್ರವೀಣ್ […]
ಉಡುಪಿ: FUNKIDZನಲ್ಲಿ ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ.

ಉಡುಪಿ:ಉಡುಪಿ/ಮಣಿಪಾಲ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಒಳಾಂಗಣ ಆಟದ ಪ್ರದೇಶ ಮತ್ತು ಮಕ್ಕಳ ಚಟುವಟಿಕೆ ಕೇಂದ್ರವಾದ FUNKIDZನಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಕೆಲಸದ ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 8.30ರ ವರೆಗೆ, ಕಂಪ್ಯೂಟರ್ನಲ್ಲಿ ಸಾಮಾನ್ಯ ಜ್ಞಾನ ಹೊಂದಿರಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8317346853