ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅವಹೇಳನ ಖಂಡಿಸಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

ಉಡುಪಿ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಅವಹೇಳನ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದ ಆಸ್ಕರ್ ಫರ್ನಾಂಡಿಸ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಮುಖಂಡರು ಅಸಂವಿಧಾನಿಕ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕರಾಗಿ ರೂಪುಗೊಂಡಿದ್ದಾರೆ, ಇದನ್ನು ಸಹಿಸಲು ಬಿಜೆಪಿಯವರಿಗೆ ಆಗುತ್ತಿಲ್ಲ. ಅವಹೇಳನ ಮಾಡುವುದರ ಜೊತೆಗೆ ಸುಳ್ಳು ದೂರುಗಳನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದರು. […]
ಗೃಹಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಹುನ್ನಾರ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಗೃಹಲಕ್ಷ್ಮಿ ಯೋಜನೆಗೆ ಹಣವನ್ನು ಹೊಂದಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಇದಕ್ಕಾಗಿ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ. ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 50,000 ಬಿಪಿಎಲ್ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ […]
ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಉಳ್ಳಾಲದ ತಾಯಿ, ಮಗು ಸ್ಥಳದಲ್ಲೇ ಮೃತ್ಯು.

ಉಳ್ಳಾಲ: ಸೌದಿ ಅರೇಬಿಯಾದ ದಮಾಮ್ ಬಳಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ನಿವಾಸಿಯಾಗಿದ್ದ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮೃತರನ್ನು ಹೈದರ್‌ಉಳ್ಳಾಲ್ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಆಕೆಯ ಎರಡೂವರೆ ವರ್ಷದ ಮಗ ಲಯನ್ ಎಂದು ಗುರುತಿಸಲಾಗಿದೆ. ಮದೀನದಿಂದ ಕಾರಿನಲ್ಲಿ ಸಫಾ ಅವರು ಪತಿ ಮಲಪುರಂ ಆರಿ ಕೋಡ್ ಸ್ವದೇಶಿ ಸುಹೈಲ್ (35) ಮತ್ತು ಸಹೋದರ ಮುಹವಿಯ (23) ಜತೆಗೆ ದಮಾವನಲ್ಲಿರುವ ಹೈದರ್ ಅವರ ಮನೆಗೆ ತೆರಳುತ್ತಿದ್ದರು. ಕಾರು ಚಲಾಯಿಸುತ್ತಿದ್ದ […]
ಉಡುಪಿ: ಚಿನ್ನದ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಕಳವು: ಪ್ರಕರಣ ದಾಖಲು

ಉಡುಪಿ: ನಗರದ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿಯೊರ್ವ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಜುವೆಲ್ ಪ್ಲಾಜಾ ಕಟ್ಟಡದಲ್ಲಿ ಸೆ.20ರಂದು ಸಂಜೆ ವೇಳೆ ನಡೆದಿದೆ. ಸಬೀರ್ ಅಲಿ ಮಲ್ಲಿಕ್ ಎಂಬವರ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಪಶ್ಚಿಮ ಬಂಗಾಳ ಮೂಲದ ಸೋಮೇನ್ ಡೋಲುಯಿ ಎಂಬಾತನಿಗೆ ಜುಮ್ಕಿಯ ಕೆಳಗೆ ಗುಂಡು ಅಳವಡಿಸಲು ಚಿನ್ನದ ಗಟ್ಟಿ ನೀಡಿ, ಸಬೀರ್ ಊಟ ಮಾಡಲು ಮನೆಗೆ ತೆರಳಿದ್ದರು. ಸಂಜೆ ವೇಳೆ ಸಬೀರ್, […]
ಹಿರಿಯಡ್ಕ: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ.

ಹಿರಿಯಡ್ಕ: ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಆತ್ರಾಡಿ ಗ್ರಾಮದ ಮದಗ ಚೆನ್ನಿಬೆಟ್ಟಿನ ನಿವಾಸಿ ಶ್ರೀಧರ(58) ಎಂಬವರು ಸೆ.20ರಂದು ಸಂಜೆ ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.