ಮಣಿಪಾಲ MSDCಯಲ್ಲಿ “ಇಂಟರ್ ನೆಟ್ ತಂತ್ರಜ್ಞಾನ”ದ ಕುರಿತು ಒಂದು ತಿಂಗಳ ಅಲ್ಪಾವಧಿ ಕೋರ್ಸ್.

ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ವಾಗಿದ್ದು ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ. Embedded Systems and loT: 🔹IoT Architecture and life cycle 🔹 Platforms for IoT 🔹 Real time […]

ಮಂಗಳೂರು: ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

ಮಂಗಳೂರು: ಸುಧಾಕರ್ ಶೆಟ್ಟಿ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಮ್ಯಾಕ್ಸ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಜೂ.14 ರಂದು ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿರಣ್ ಶೆಟ್ಟಿ ಮಂಗಳೂರು, ಉಮನಾಥ್ ಕೋಟ್ಯಾನ್, ನಿಶಾ, ದೇವಿರಾಜ್ ಎಸ್. ಎನ್.ಡಿ. , ಸಿದ್ಧಾರ್ಥ್ ಸುವರ್ಣ, ಮರಿಯ, ತುಳುನಾಡ ತುಡರ್ ಖ್ಯಾತಿಯ ಕೀರ್ತಿ ಕಾರ್ಕಳ, ಸುರೇಶ್ ಕುಲಾಲ್ ಅಂಕಿತ, ವಿನು ಶೆಟ್ಟಿ ಮುಲ್ಕಿ ಮತ್ತು ದಾಕ್ಷಾಯಿಣಿ ವೀರೇಶ್ ರವರು ಪಾಲ್ಗೊಂಡಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.

ಉತ್ತಮ ಸೇವೆಗಾಗಿ ಅಗ್ನಿಶಾಮಕ ಚಾಲಕರಿಗೆ ಚಿನ್ನದ ಪದಕ

ಉಡುಪಿ: ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ವತಿಯಿಂದ ಉಡುಪಿಯ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವೀಂದ್ರ ಅವರ ಅತ್ಯುತ್ತಮ ಮತ್ತು ಗಣನೀಯ ಸೇವೆಯನ್ನು ಪರಿಗಣಿಸಿ, ಇವರ ಉತ್ತಮ ಸೇವೆಗಾಗಿ ರಾಜ್ಯ ಸರಕಾರವು 2024 ನೇ ಸಾಲಿನ ಚಿನ್ನದ ಪದಕ ನೀಡಿ ಗೌರವಿಸಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.