ಉಡುಪಿಯಲ್ಲಿ ಸೆಪ್ಟೆಂಬರ್ 5 ರಂದು ನೇರ ಸಂದರ್ಶನ

ಉಡುಪಿ: ಉಡುಪಿ ಅಂಚೆ ವಿಭಾಗದ ಅಂಚೆಅಧೀಕ್ಷಕರು ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ವಿಮಾ/ ನೇರ ಪ್ರತಿನಿಧಿಗಳ ಆಯ್ಕೆಗಾಗಿ ಸೆಪ್ಟಂಬರ್ 5ರಂದು ಬೆಳಗ್ಗೆ 11 ಗಂಟೆಗೆ ನಗರದ ಪ್ರಧಾನ ಅಂಚೆಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಆಸಕ್ತ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ, ಸ್ವ-ವಿವರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಇವುಗಳ ಮೂಲ […]
ಉಡುಪಿ:ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವು ಆಗಸ್ಟ್ 26 ರಂದು ಬೆಳಗ್ಗೆ 10 ಗಂಟೆಗೆ ನಗರದ ಡಯಟ್ ಹತ್ತಿರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು […]
ಉಡುಪಿ: ಕೃಷ್ಣಾಷ್ಟಮಿ ಪ್ರಯುಕ್ತ Ambalpady LED POINT ನಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ.

ಉಡುಪಿ: ಅಂಬಲಪಾಡಿ, ಸರವರ ಕಟ್ಟಡ, ಕಪ್ಪೆಟ್ಟು ರಸ್ತೆಯಲ್ಲಿ ಇರುವ ಅಲಂಕಾರಿಕ ದೀಪಗಳು ಮತ್ತು ನೇತಾಡುವ ದೀಪಗಳ ಅಧಿಕೃತ ಡೀಲರ್ ಆಗಿರುವ ಎಲ್ಇಡಿ ಪಾಯಿಂಟ್ ನಲ್ಲಿ ಗ್ರಾಹಕರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಪ್ರಯುಕ್ತ ಬಲ್ಬ್, ಬ್ಯಾಟನ್, ಹಾಗೂ ಅಲಂಕಾರ ದೀಪಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಫಿಲಿಪ್ಸ್(Philips) 9w ಬಲ್ಬ್ 1+1 ಉಚಿತ ಕೊಡುಗೆ ರೂ.150 ಹಾಗೂ ಫಿಲಿಪ್ಸ್ (Philips) 20w ಬ್ಯಾಟನ್ 1+1 ಉಚಿತ ಕೊಡುಗೆ ರೂ.330 ಗೆ ಸಿಗಲಿದೆ. ಹಾಗೂ ಎಲ್ಲಾ ರೀತಿಯ ಅಲಂಕಾರಿಕ ದೀಪಗಳು […]
ದೀಕ್ಷಾಭೂಮಿ ಯಾತ್ರೆಗೆ ಡಾ.ಬಿ.ಆರ್ ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ : ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ. ಬಿ.ಆರ್ ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟçದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ನಿಯೋಜಿಸಲು ಅರ್ಹ ಆಸಕ್ತ 18 ವರ್ಷಮೇಲ್ಪಟ್ಟ ಅಭ್ಯರ್ಥಿಗಳಿಂದ ಇಲಾಖೆಯ ವೆಬ್‌ಸೈಟ್https://swdservices.karnataka.gov.in/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಬಿ ಬ್ಲಾಕ್, ಎರಡನೇ ಮಹಡಿ, ಮಣಿಪಾಲ, ಉಡುಪಿ ದೂ.ಸಂಖ್ಯೆ: […]
ಕಾರ್ಕಳ:ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ -ಅರ್ಜಿ ಆಹ್ವಾನ

ಉಡುಪಿ: ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಶಿಶು ಅಭಿವೃದ್ಧಿ ಯೋಜನೆಯಡಿ ಗ್ರಾಮ ಪಂಚಾಯತ್ ಮತ್ತು ಪುರಸಭೆ ವ್ಯಾಪ್ತಿಯ 7 ಅಂಗನವಾಡಿ ಕಾರ್ಯಕರ್ತೆ ಹಾಗೂ 23 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳನೇಮಕಾತಿಗೆ ಅರ್ಹ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಂದ ವೆಬ್‌ಸೈಟ್ https://karnemakaone.kar.nic.in/abcd/ ನಲ್ಲಿಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 19 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಕಾರ್ಕಳದೂ.ಸಂಖ್ಯೆ:08258-230992 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.