ಕಳತ್ತೂರಿನಲ್ಲಿ ವಿನಯ್ ಕುಮಾರ್ ಸೊರಕೆ ಅವರಿಗೆ ಸನ್ಮಾನ ಕಾರ್ಯಕ್ರಮ.

ಕಳತ್ತೂರು:ಕೆ ಪಿ ಸಿ ಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಕಾಪು ದ್ವಾದಶಿ ಪಬ್ಲಿಸಿಟಿಯ 2 ನೇ ಶಾಖೆಗೆ ಕಳತ್ತೂರು ಪುಂಚಲಕಾಡು ಗ್ರಾಮದಲ್ಲಿ ಉದಯವಾಣಿ ಪತ್ರಿಕೆಯ ಜಾಹೀರಾತು ಗ್ರಾಮೀಣ ಕಚೇರಿಗೆ ಭೇಟಿ ನೀಡಿ ಸಂಸ್ಥೆಗೆ ಶುಭಕೋರಿದರು. ಕರ್ನಾಟಕದ ಕರಾವಳಿ ಪ್ರದೇಶ ಅತೀ ಹೆಚ್ಚು ಪ್ರಸಾರವಾಗುವ ಗ್ರಾಮಾಂತರ ಜನರ ಮನೆ ಮನೆಗೆ ತಲುಪುವ ಏಕೈಕ ಪತ್ರಿಕೆ ಉದಯವಾಣಿ ಪುಟ್ಟ ಗ್ರಾಮ ಪುಂಚಲಕಾಡುವಿನಲ್ಲಿ ಶಾಖೆಯು ತೆರೆದಿದ್ದು ತುಂಬಾ ಸಂತೋಷವಾಯಿತು ಇನ್ನಷ್ಟು ಸಂಸ್ಥೆಯು ಬೆಳೆಯಲಿ […]

ಹೆಬ್ರಿ: ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃತ್ಯು.

ಹೆಬ್ರಿ: ಪ್ರಗತಿಪರ ಕೃಷಿಕ ಜ್ಞಾನೇಶ್ವರ ಹೆಬ್ಟಾರ್‌(62) ಅವರು ಬುಧವಾರ ಮರದಿಂದ ಬಿದ್ದು ಮೃತಪಟ್ಟ ಘಟನೆ ಕಬ್ಬಿನಾಲೆ ಹೊನ್ನ ಕೊಪ್ಪಲದಲ್ಲಿ ನಡೆದಿದೆ. ಕೃಷಿ ಚಟುವಟಿಕೆಗೆ ಸಂಬಂಧಿಸಿ ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಧ್ಯಾಹ್ನ ಹೊತ್ತು ಕೃಷಿ ಕೆಲಸಕ್ಕೆ ಹೋದ ತನ್ನ ಪತಿ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿದ್ದರು. ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್‌ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ […]

ಬೆಳ್ತಂಗಡಿ: ಈಜಲು ಹೋದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತ್ಯು.

ಬೆಳ್ತಂಗಡಿ: ವೇಣೂರಿನ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಮೃತ ಯುವಕರು ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಎಂದು ಗುರುತಿಸಲಾಗಿದೆ. ವೇಣೂರು ಚರ್ಚ್‌ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಇವರು ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಬಳಿಕ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಕಿಂಡಿ ಅಣೆಕಟ್ಟಿನ ಸಮೀಪ ಇವರು ಸ್ನಾನಕ್ಕೆ ಇಳಿದಿದ್ದು, ನದಿ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ […]

ಮಲ್ಪೆ: ಯುವಕ ನಾಪತ್ತೆ

ಉಡುಪಿ: ಮಲ್ಪೆಯ ಬೋಟ್‌ನಲ್ಲಿ ಮೀನು ಖಾಲಿ ಮಾಡುವ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ಜಿಲ್ಲೆಯ ಕನಕಪ್ಪ(20) ಎಂಬವರು ನ.23ರಂದು ಸಂಜೆ ಊರಿಗೆ ಹೋಗುವುವುದಾಗಿ ಹೇಳಿ ಮಲ್ಪೆಯ ಬಾಡಿಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯನ್ನು ಕಾಲಕಾಲಕ್ಕೆ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ:ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ರಸ್ತೆಯ ನಿರ್ವಹಣೆಯನ್ನು ಕಾಲಕಾಲಕ್ಕೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಗುತ್ತಿಗೆದಾರರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆಯಿಂದಾಗಿ ಉಂಟಾದ ಹೊಂಡ ಗುಂಡಿಗಳನ್ನು ದುರಸ್ಥಿ ಮಾಡುವ ಬಗ್ಗೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ […]