ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ: ಮೇ23 & ಮೇ24 ರಂದು ‘ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್`ನಿಂದ ಕ್ಯಾಂಪಸ್ ಇಂಟರ್ವ್ಯೂ

ಬ್ರಹ್ಮಾವರ: ದಿ ಬಾರ್ಕೂರು ಎಜುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ “ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ”ಯಲ್ಲಿ ಪ್ರತೀ ವರ್ಷ ಬೆಂಗಳೂರಿನ ಪ್ರಸಿದ್ಧ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಕ್ಯಾಂಪಸ್ ಇಂಟರ್ವ್ಯೂ ಮಾಡುತ್ತ ಬಂದಿದ್ದು, ಈ ವರುಷ ಕೂಡ ಇದೇ ಬರುವ 23/05/2025 ಮತ್ತು 24/05/2025ನೇ ಶುಕ್ರವಾರ ಹಾಗೂ ಶನಿವಾರದಂದು ಕ್ಯಾಂಪಸ್ ಇಂಟರ್ವ್ಯೂ ನಡೆಸಲಿದೆ. ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಐಟಿಐಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟಣೆ ತಿಳಿಸಿದ್ದಾರೆ.
ಹೊಸದಿಲ್ಲಿ:’ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ,ಇಂದು ಸರ್ವಪಕ್ಷ ಸಭೆಗೆ ಕರೆ

ಹೊಸದಿಲ್ಲಿ: “ಆಪರೇಷನ್ ಸಿಂದೂರ’ ನಡೆಸಿ ಪಾಕಿಸ್ಥಾನದ ಮೇಲೆ “ಉಗ್ರ ಪ್ರತೀಕಾರ’ ತೀರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ, ಇನ್ನಷ್ಟು ದಾಳಿ ನಡೆಸಲಿದೆಯೇ?ಇಂತಹದೊಂದು ಕುತೂಹಲಕ್ಕೆ ಕಾರಣವಾಗಿರುವುದು ಸ್ವತಃ ಮೋದಿ ನಡೆಸುತ್ತಿರುವ ಸರಣಿ ಸಭೆಗಳು ಹಾಗೂ ಮೋದಿ ಪ್ರಭಾ ವಲಯ ದಲ್ಲಿರುವ ಜನಪ್ರತಿನಿಧಿ ಹಾಗೂ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಗಳು. ಮಂಗಳವಾರ ತಡರಾತ್ರಿಯ ದಾಳಿ ಬೆನ್ನಲ್ಲೇ ಬುಧವಾರ ತಮ್ಮ ಸಂಪುಟ ಸಭೆ ನಡೆಸಿರುವ ಮೋದಿ, ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ದಾಳಿ ಕುರಿತ ವಿವರ ನೀಡಲು ಈ […]
ಮಣಿಪಾಲ: ಕೆಎಂಸಿ ಡೀನ್ ಆಗಿ ಡಾ.ಅನಿಲ್ ಕೆ.ಭಟ್ ನೇಮಕ.

ಉಡುಪಿ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ನೂತನ ಡೀನ್ ಆಗಿ ಡಾ. ಅನಿಲ್ ಕೆ ಭಟ್ ಅವರನ್ನು ಇಂದು ನೇಮಕ ಮಾಡಲಾಗಿದೆ. ಅತುತ್ತಮ ವೈದ್ಯರು, ಶಿಕ್ಷಣ ತಜ್ಞರು ಮತ್ತು ಆಡಳಿತಾಧಿಕಾರಿಯಾಗಿರುವ ಡಾ.ಭಟ್ ಅವರು ಮೂಳೆ ಚಿಕಿತ್ಸೆ, ಕೈ ಶಸ್ತ್ರಚಿಕಿತ್ಸೆ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಡಾ.ಭಟ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಮತ್ತು ಕೆಎಂಸಿ ಮಣಿಪಾಲದಿಂದ ಮೂಳೆಚಿಕಿತ್ಸೆಯಲ್ಲಿ ಎಂಎಸ್ ಪದವಿಯೊಂದಿಗೆ ಡಿಎನ್ಬಿ ಪದವಿ ಪಡೆದಿದ್ದಾರೆ. […]
ಉಡುಪಿಯ ಆಶಾ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಆಶಾ ಜುವೆಲ್ಲರ್ಸ್ ನಲ್ಲಿ ಸೇಲ್ಸ್ ಸ್ಟಾಫ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಚಿಲ್ಲರೆ ಕ್ಷೇತ್ರದಲ್ಲಿ 1 ರಿಂದ 2 ವರ್ಷದ ಅನುಭವ ಕಡ್ಡಾಯವಾಗಿ ಇರಬೇಕು. ಬಿಕಾಂ ಪದವಿ ಪಡೆದಿದ್ದು, ಸಾಮಾನ್ಯ ಕಂಪ್ಯೂಟರ್ ಜ್ಞಾನವಿರಬೇಕು. ಆಸಕ್ತರು ನಿಮ್ಮ ನವೀಕರಿಸಿದ ರೆಸ್ಯೂಮ್ ನೊಂದಿಗೆ ಆಧಾರ್ ಕಾರ್ಡ್ ನ ಫೋಟೋ ಕಾಪಿ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕನಕದಾಸ ರಸ್ತೆ ಉಡುಪಿ-01📩[email protected] 📞 +91 6363-914186
ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಗಣೇಶ ನಗರ ನಿವಾಸಿ ಅಶೋಕ(47) ಎಂಬ ವ್ಯಕ್ತಿಯು 2023 ರ ಜೂನ್ 01 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಶರೀರ, ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಉಪನಿರೀಕ್ಷಕರು ಮೊ.ನಂ: 9480805449, ವೃತ್ತ ನಿರೀಕ್ಷಕರು ಮೊ.ನಂ: […]