ಮಹಿಳಾ ಶಕ್ತಿಯೊಂದಿಗೆ ಜಗಜಗ ಮಿಂಚಿತು ಉಡುಪಿಯ ಪವರ್ ಫುಲ್ “ಪವರ್ ಪರ್ಬ!

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್‌ಫಾರಂ ಆಫ್ ವುಮನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್, ಮೈದಾನದಲ್ಲಿ ನಡೆಯುತ್ತಿರುವ ‘ಪವರ್’ ಪರ್ಬ-2025’ರಲ್ಲಿ ಶನಿವಾರ ಸಂಜೆ ಸಭಾ ಕಾರ್ಯಕ್ರಮ ,ಸಾಂಸ್ಕೃತಿಕ ಹಾಗು ಪವರ್ ಸಂಸ್ಥೆ ಸದಸ್ಯರಿಂದ ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು . ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳಿಯರಿಗೋಸ್ಕರ ನಡೆಯುತ್ತಿರುವ ಪವರ್ ಪರ್ಬದಲ್ಲಿ ಕಳೆದೆರಡು ದಿನಗಳಿಂದ ಮಹಿಳಾ ಶಕ್ತಿಯ ಅನಾವರಣವಾಗುತ್ತಿದ್ದು, 150ಕ್ಕೂ ಹೆಚ್ಚು ಮಳಿಗೆಗಳು, ತರಹೇವಾರಿ ಖಾದ್ಯ ಉತ್ಪನ್ನಗಳು, ಆಟದ ವಿಭಾಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು […]

ಹೆಬ್ರಿ: ಅಡಿಕೆ ಮರ ತಲೆಗೆ ಬಿದ್ದು ಕೃಷಿಕ ಮೃತ್ಯು.

ಹೆಬ್ರಿ: ಒಣಗಿದ ಅಡಿಕೆ ಮರ ತುಂಡಾಗಿ ತಲೆಯ ಮೇಲೆ ಬಿದ್ದ ಪರಿಣಾಮ ಕೃಷಿಕರೊಬ್ಬರು ಮೃತಪಟ್ಟ ಘಟನೆ ವರಂಗ ಗ್ರಾಮದ ಮೂಡುಕುಡೂರು ಕೆಳಗಿನ ಮನೆ ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ರಾಮ(62) ಎಂದು ಗುರುತಿಸಲಾಗಿದೆ. ಇವರು ಫೆ.4ರಂದು ತೋಟದಲ್ಲಿ ಒಣಗಿದ ಅಡಿಕೆ ಮರವನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಒಣಗಿದ ಅಡಿಕೆ ಮರವು ತುಂಡಾಗಿ ತಲೆಯ ಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಚಿಕಿತ್ಸೆಗೆ ಸ್ಪಂದಿಸದೆ ಫೆ.6ರಂದು ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. […]

ಬ್ರಹ್ಮಾವರ:ಯುವಕ ನಾಪತ್ತೆ

ಬ್ರಹ್ಮಾವರ: ಬಾರ್ಕೂರಿನಲ್ಲಿ ವಾಸವಾಗಿದ್ದ ಅಶೋಕ(39) ಎಂಬವರು ಫೆ.6ರಂದು ಬೆಳಗ್ಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋದವರು ಇದುವರೆಗೂ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ಆತ್ರಾಡಿಯಲ್ಲಿ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ.

ಉಡುಪಿ: ಕರಾವಳಿಯ ಜನಪ್ರಿಯ ಸಂಸ್ಥೆಯಾದ ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಅದ್ದೂರಿಯಿಂದ ನಡೆಯಿತು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಇಚ್ಚಾಶಕ್ತಿ ಗಟ್ಟಿಯಾಗಿದ್ದರೆ ಸಾಧನೆ ಮಾಡುವ ಬದ್ದತೆಯಿದ್ದರೆ ದೊಡ್ಡ ಸಾಧಕರಾಗಬಹುದು, ಉದ್ಯೋಗದಾತರಾಗಬಹುದು ಎನ್ನುವುದಕ್ಕೆ ಶಾಂಭವಿ ಸಂಸ್ಥೆ ಕಟ್ಟಿ […]

ಕಟಪಾಡಿ: ತ್ರಿಶಾ ವಿದ್ಯಾ ಪಿಯು ಕಾಲೇಜು : ಭವೀಷ್ ಬೆಳ್ಳಾರೆಗೆ ರಾಜ್ಯ ಮಟ್ಟದಲ್ಲಿ ಕವನ‌ ವಾಚನದಲ್ಲಿ ಪ್ರಥಮ‌ ಸ್ಥಾನ

ಕಟಪಾಡಿ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಚಿತ್ರದುರ್ಗ ಇವರ ಸಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ 2024-25 ಚಿತ್ರದುರ್ಗದಲ್ಲಿ ಫೆಬ್ರವರಿ 07ರಂದು ನಡೆದ ಕವನ ವಾಚನ ಸ್ಪರ್ಧೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಭವಿಷ್ ಬೆಳ್ಳಾರೆ ಪ್ರಥಮ ಬಹುಮಾನ ಪಡೆದಿರುತ್ತಾರೆ. ಇವರು ಸುಳ್ಯ ತಾಲೂಕು ಬೆಳ್ಳಾರೆ ತಡಗಜೆಯ ರುಕ್ಮಯ್ಯ ಮೂಲ್ಯ […]