ಉಡುಪಿ: ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ವಾರ್ಷಿಕ ಮಹಾಸಭೆ – ನೂತನ ಸದಸ್ಯರ ನೇಮಕ

ಉಡುಪಿ, ಆಗಸ್ಟ್ 25: ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 25ರ ಭಾನುವಾರ ಕಟ್ಟಡದ ಆವರಣದಲ್ಲಿಯೇ ಇರುವ ಸಭಾಗೃಹದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೇ ಆಗಿರುವ ಶ್ರೀ ಇಕ್ಬಾಲ್ ಹಮ್ಮಾಜಿಯವರು ವಹಿಸಿದ್ದರು ಹಾಗೂ ಸದಸ್ಯರನ್ನು ಸ್ವಾಗತಿಸಿ ಸಭೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಪ್ರಮಿಳಾ ಜತ್ತನ್ನರವರು ಹಿಂದಿನ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಆ ಬಳಿಕ ಸಂಘದ ಖಜಾಂಚಿಯಾಗಿರುವ ಶ್ರೀಮತಿ ರೇಶ್ಮಾರವರು ಹಿಂದಿನ […]
ನಯಂಪಳ್ಳಿಯ ನಾರಾಯಣ ಅಂಚನ್ ನಿಧನ

ಉಡುಪಿ: ಪ್ರಗತಿಪರಕೃಷಿಕರು, ನಯಂಪಳ್ಳಿ ಶ್ರೀ ಮಡಿ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಭಜನಾಮಂಡಲಿಯ ಸ್ಥಾಪಕ ಕೋಶಾಧಿಕಾರಿಯೂ,ಅಬಕಾರಿ ಗುತ್ತಿಗೆದಾರರು ಆಗಿದ್ದ ನಯಂಪಳ್ಳಿ ನಿವಾಸಿ ನಾರಾಯಣ ಅಂಚನ್ (79) ಆ.25 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ
ಕುಂದಾಪುರ: ಕಟ್ಟಿ ಹಾಕಿದ್ದ ದನವನ್ನು ಬಿಡಿಸಿಕೊಂಡು ಮನೆಗೆ ಬರುತ್ತಿದ್ದಾಗ ಮರಗಳು ಬಿದ್ದು ಮಹಿಳೆ ಮೃತ್ಯು.

ಕುಂದಾಪುರ: ತಾಲೂಕಿನ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದ ಮಲ್ಲಾರಿ ಎಂಬಲ್ಲಿ ರವಿವಾರ ಸಂಜೆ ವೇಳೆ ಸುರಿದ ಗಾಳಿ-ಮಳೆಗೆ ಮರಗಳು ಬುಡ ಸಮೇತ ಉರುಳಿ ಬಿದ್ದು ಮಹಿಳೆ ಹಾಗೂ ಅವರು ಮನೆಗೆ ಕರೆತರುತಿದ್ದ ದನವೊಂದು ಅದರಡಿ ಸಿಲುಕಿ ಮೃತಪಟ್ಟ ಧಾರುಣ ಘಟನೆ ನಡೆದಿದೆ. ಮೃತರನ್ನು ಮಲ್ಲಾರಿಯ ಅಣ್ಣಪ್ಪಯ್ಯ ಎಂಬವರ ಪತ್ನಿ ಸುಜಾತ ಆಚಾರ್ತಿ (53) ಎಂದು ಗುರುತಿಸಲಾಗಿದೆ. ಸಂಜೆ 5:30ರ ಸುಮಾರಿಗೆ ಮಳೆ ಸುರಿಯತೊಡಗಿದ್ದು, ಸುಜಾತ ಮನೆ ಸಮೀಪದಲ್ಲೇ ಮೇಯಲೆಂದು ಕಟ್ಟಿ ಹಾಕಿದ್ದ ದನವನ್ನು ಬಿಡಿಸಿಕೊಂಡು ಮನೆಗೆ ಮರಳುತಿದ್ದಾಗ […]
ಕಾರ್ಕಳ ಅತ್ಯಾಚಾರ ಪ್ರಕರಣ: ಡ್ರಗ್ಸ್ ಬಗ್ಗೆ ರಕ್ತ ಪರೀಕ್ಷೆಯಲ್ಲಿ ಯುವತಿಯ ವರದಿ ಪಾಸಿಟಿವ್, ಆರೋಪಿಗಳ ವರದಿ ನೆಗೆಟಿವ್: ಉಡುಪಿ ಎಸ್ಪಿ ಡಾ.ಅರುಣ್ ಕೆ.

ಕಾರ್ಕಳ, ಆ.25: ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವತಿಯ ಬ್ಲಡ್ ಟೆಸ್ಟ್ ರಿಪೋರ್ಟ್ ನಲ್ಲಿ ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದ್ದು, ಪ್ರಥಮ ಆರೋಪಿಯಾದ ಅಲ್ತಾಫ್ ಬ್ಲಡ್ ಟೆಸ್ಟ್ ವರದಿ ನೆಗೆಟಿವ್ ಬಂದಿದೆ ಎಂದು ಎಸ್ಪಿ ಡಾ.ಅರುಣ್ ಮಾಹಿತಿ ನೀಡಿದ್ದಾರೆ. ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿಯ ಬ್ಲಡ್ ರಿಪೋರ್ಟ್ ನೆಗೆಟಿವ್ ಎಂದು ಬಂದಿರುತ್ತದೆ. ಯುವತಿಯ ಬ್ಲಡ್ ಸ್ಯಾಂಪಲ್ ನಲ್ಲಿ ಮಾದಕ ದ್ರವ್ಯ ಪಾಸಿಟಿವ್ ಬಂದಿರುವ ಬಗ್ಗೆ ಆರೋಪಿ ಅಲ್ತಾಫ್ ನನ್ನು ಕಷ್ಟಡಿಗೆ […]
