ಚಿತ್ರೀಕರಣ ಮುಗಿಸಿಕೊಂಡ ರಗಡ್ ಕಥೆಯ ‘ಬಯಲುಸೀಮೆ’!

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಯಾವತ್ತಿಗೂ ಒಂದು ವಿಶೇಷ ಪ್ರೀತಿ ಜಾರಿಯಲ್ಲಿರುತ್ತೆ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರವೊಂದು ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಜಾನರಿನ ಈ ಸಿನಿಮಾಗೆ ಕಥೆಗೆ ತಕ್ಕುದಾಗಿ ‘ಬಯಲುಸೀಮೆ’ ಎಂಬ ಶೀರ್ಷಿಕೆಯಿದಲಾಗಿದೆ. ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರೋ ಈ ಸಿನಿಮಾ ನಾನಾ ಮಜಲುಗಳ, ಮೈನವಿರೇಳಿಸೋ ತಿರುವುಗಳ ಮೂಲಕ ಪ್ರೇಕ್ಷಕರನ್ನು ಬೇರೆಯದ್ದೇ ಜಗತ್ತಿಗೆ ಕೊಂಡೊಯ್ಯುವಂತೆ ಮೂಡಿ ಬಂದಿದೆ ಎಂಬ ಆತ್ಮವಿಶ್ವಾಶ […]

ಆಚಾರ್ಯಸ್ ಏಸ್: 8, 9, 10ನೇ ತರಗತಿ ಹಾಗೂ ಪಿಯುಸಿ, ಸಿ.ಇ.ಟಿ, ಜೆ.ಇ.ಇ, ನೀಟ್; ಕ್ಲಾಸರೂಮ್(ಆಫ್ ಲೈನ್) ತರಬೇತಿ ಆರಂಭ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ 8, 9, ಹತ್ತನೇ ತರಗತಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ವಿದ್ಯಾರ್ಥಿಗಳಿಗೆ ಕ್ಲಾಸರೂಮ್ ತರಬೇತಿ ಮತ್ತೆ ಆರಂಭವಾಗಿದೆ. ಈ ಭಾರಿಯ ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಅನೇಕ ರಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿ ಆಯೋಜಿಸಿದೆ. 2022ರ ವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತೆಗಾಗಿ ಈ […]

ಮಣಿಪಾಲ: ನಾಪತ್ತೆಯಾಗಿದ್ದ ಬಾಲಕ ಪತ್ತೆ

ಮಣಿಪಾಲ: ಇಂದು ಮಧ್ಯಾಹ್ನ ಬಳಿಕ ನಾಪತ್ತೆಯಾಗಿದ್ದ ಮಣಿಪಾಲ ದಶರಥ ನಗರ 2ನೇ ಹಂತದ ನಿವಾಸಿ ವಿನುತಾ ಮಂಜುನಾಥ ಎಂಬವರ ಮಗ ಯತಿನ್ ಎಂಬಾತ ಸಂಜೆಯ ವೇಳೆ ಮಲ್ಪೆಯಲ್ಲಿ ಪತ್ತೆಯಾಗಿದ್ದಾನೆ. ಮಾಜಿ ಗ್ರಾಪಂ ಸದಸ್ಯ ರಾಘವೇಂದ್ರ ಶಾಂತಿನಗರ ಅವರು ಬಾಲಕನನ್ನು ಮಲ್ಪೆಯಲ್ಲಿ ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಈತ ಮನೆಯಲ್ಲಿ ಯಾರಿಗೂ ಹೇಳದೆ ಒಬ್ಬನೇ ಮಲ್ಪೆಗೆ ಹೋಗಿದ್ದ ಎನ್ನಲಾಗಿದೆ. ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಾಲಕನ ಪತ್ತೆಗಾಗಿ ವಾಟ್ಸಾಪ್ ನಲ್ಲಿ ಪೋಟೊ ಹಾಕಿ ಸಂದೇಶ ಕಳುಹಿಸಲಾಗಿತ್ತು. ಸಾಕಷ್ಟು […]

ರಾಜ್ಯದಲ್ಲಿ ಬಾಕಿ ಇರುವ ಚುನಾವಣೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ಅಧ್ಯಕ್ಷ, ಉಪಾಧ್ಯಕ್ಷ, ಮೇಯರ್‌ ಮತ್ತು ಉಪ ಮೇಯರ್‌ ಹಾಗೂ ಇತರ ಪದಾಧಿಕಾರಿಗಳ ಆಯ್ಕೆಗೆ ಬಾಕಿ ಇರುವ ಚುನಾವಣೆಗಳನ್ನು ನಡೆಸಲು ಮಂಗಳವಾರದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಕಾರ ಸಂಘಗಳು, ನೋಂದಾಯಿತ ಸೊಸೈಟಿಗಳು, […]

ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ: ಸೇವೆ ಮತ್ತು ಸಮರ್ಪಣ ಅಭಿಯಾನ

ಕಾರ್ಕಳ: ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಲುವಾಗಿ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಕುಕ್ಕುಂದೂರು ಮಹಾ ಶಕ್ತಿ ಕೇಂದ್ರದ ವತಿಯಿಂದ ಕೌಡೂರು ಗ್ರಾಮದ ವಿಕಲಚೇತನ ಮಕ್ಕಳಾದ ಅಕ್ಷಯ್ ಹಾಗೂ ಆದಿತ್ಯ ನಿವಾಸಕ್ಕೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಜೊತೆಗೆ ಆರ್ಥಿಕ ನೆರವು ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ, ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ […]