ಮಣಿಪಾಲ: ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಹೊಟೇಲ್ ಕಾರ್ಮಿಕನ ಹತ್ಯೆ

ಉಡುಪಿ: ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಇರಿದು ಹೊಟೇಲ್ ಕಾರ್ಮಿಕನನ್ನು ಕೊಲೆಗೈದ ಘಟನೆ ಮಣಿಪಾಲದ ಬ್ಯಾಕಸಿನ್ ರೆಸ್ಟೊರೆಂಟ್ ನ ಮುಂಭಾಗದ ಅನಂತ ಕಲ್ಯಾಣ ಮಾರ್ಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕೇರಳದ ಕಾಸರಗೋಡು ನಿವಾಸಿ ಶ್ರೀಧರ ನಾಯಕ್ (38) ಕೊಲೆಯಾದ ವ್ಯಕ್ತಿ. ಈತ ಮಣಿಪಾಲ ಈಶ್ವರನಗರದ ಹೊಟೇಲ್ ಒಂದರ ಕುಕ್ ಎಂದು ತಿಳಿದುಬಂದಿದೆ. ಬೆಳಿಗ್ಗೆ 6ಗಂಟೆ ಸುಮಾರಿಗೆ ಮೂರರಿಂದ ನಾಲ್ಕು ಮಂದಿಯ ತಂಡ ಹೊಡೆದಾಟ ನಡೆಸುತ್ತಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಶ್ರೀಧರ್ ಅವರ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಪರಾರಿಯಾಗಿದ್ದಾರೆ. […]
ಬ್ರಹ್ಮಾವರದ ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಬ್ರಹ್ಮಾವರ: ಬೇಕರಿ / ಜನರಲ್ ಸ್ಟೋರ್ಸ್ ನಲ್ಲಿ ಸೇಲ್ಸ್ ಕೆಲಸಕ್ಕೆ ಮಹಿಳೆ ಅಥವಾ ಹುಡುಗಿಯರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:7349038077
ಕನ್ನಡ ಭಾ಼ಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಉಡುಪಿ: ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಇವರ ವತಿಯಿಂದ ಡಿಸೆಂಬರ್ 7 ಮತ್ತು 8 ರಂದು ನಡೆಸಲಾಗುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ -150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯು ಜಿಲ್ಲೆಯಲ್ಲಿ ನಿಗಧಿಪಡಿಸಲಾಗಿರುವ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗಳನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು, ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿಪಡಿಸಿದ ಪರೀಕ್ಷಾ ಕೇಂದ್ರಗಳ ಸುತ್ತಲೂ […]
ಉಡುಪಿ: ಡಿ. 9 ರಂದು ಅಂಚೆ ಪಿಂಚಣಿ ಅದಾಲತ್

ಉಡುಪಿ: ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಿಸೆಂಬರ್ 9 ರಂದು ಸಂಜೆ 4 ಗಂಟೆಗೆ ಅಂಚೆ ಪಿಂಚಣಿ ಅದಾಲತ್ ಅನ್ನು ನಿಗಧಿಪಡಿಸಲಾಗಿದೆ. ಅಂಚೆ ಇಲಾಖೆಯ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಡಿಸೆಂಬರ್ 6 ರ ಒಳಗೆ ಈ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಸಾಲಿನ ವಾರ್ಷಿಕ ಎನ್.ಎಸ್.ಎಸ್ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿ: ಪ್ರಾಂಶುಪಾಲ ಪ್ರೊ.ಶ್ರೀಧರ್ ಪ್ರಸಾದ್

ಉಡುಪಿ: ವಿದ್ಯಾರ್ಥಿಗಳು ಸಮುದಾಯ ಸೇವಾ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪ್ರಸ್ತುತ ಸಾಲಿನ ವಾರ್ಷಿಕ ಎನ್.ಎಸ್.ಎಸ್ ಶಿಬಿರವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಧರ್ ಪ್ರಸಾದ್ ಹೇಳಿದರು. ಅವರು ಇಂದು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು […]