ಮಣಿಪಾಲ: MSDCಯಲ್ಲಿ ಡ್ರೀಮ್ ಝೋನ್’ ವತಿಯಿಂದ “ಬ್ಲೌಸ್ & ಸಲ್ವಾರ್ ಕಮೀಜ್ ಡಿಸೈನ್” ಸರ್ಟಿಫಿಕೇಟ್ ಕೋರ್ಸ್

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಸ್ಕೂಲ್ ಆಫ್ ಫ್ಯಾಶನ್ ಮತ್ತು ಇಂಟೀರಿಯರ್ ಡಿಸೈನಿಂಗ್, ಡ್ರೀಮ್ ಜೋನ್ ನಲ್ಲಿ ಬ್ಲೌಸ್ & ಸಲ್ವಾರ್ ಕಮೀಜ್ ಡಿಸೈನ್ ಸರ್ಟಿಫಿಕೇಟ್ ಕೋರ್ಸ್ ತರಬೇತಿ ನಡೆಯಲಿದೆ. ಕಲಿಕೆಯ ಫಲಿತಾಂಶಗಳು:▪️ ಉಡುಪು ಹೊಲಿಗೆ, ಹೆಮ್ಮಿಂಗ್ ಮತ್ತು ಅಲಂಕಾರಗಳನ್ನು ಸೇರಿಸುವ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಬಹುದು.▪️ಬ್ಲೌಸ್ ಮತ್ತು ಸಲ್ವಾರ್ ಕಮೀಜ್‌ಗಾಗಿ ಮಾದರಿಗಳನ್ನು ತಯಾರಿಸಿ/ಅಭಿವೃದ್ಧಿಪಡಿಸಿ.▪️ ಮಹಿಳೆಯರ ಉಡುಪುಗಳು ಚೆನ್ನಾಗಿ ಹೊಂದಿಕೊಳ್ಳುವಂತೆ ಮಾಡಿ ಮತ್ತು ಪರಿಪೂರ್ಣ ಫಿಟ್ ಅನ್ನು […]

ಮಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷ ಕಾರಗೃಹ ಶಿಕ್ಷೆ; ಆರೋಪಿಯ ತಂದೆ, ಬಾವನಿಗೂ ಜೈಲು ಶಿಕ್ಷೆ..!

ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಯುವತಿಗೆ ಇನ್ನಿಬ್ಬರು ಕೊಲೆ ಬೆದರಿಕೆ ಹಾಕಿದ್ದ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವರಿಗೂ ಕಠಿಣ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಗೊಳಗಾದ ಆರೋಪಿ ಪುತ್ತೂರು ಕಬಕದ ನಿವಾಸಿ ನಿತೇಶ್ (40). ಈತನ ತಂದೆ ರಾಮಣ್ಣ ಪೂಜಾರಿ (63), ಭಾವ ನಿಖಿತಾಶ್ ಸುವರ್ಣ (40) ಕೊಲೆ ಬೆದರಿಕೆ […]

ಉಡುಪಿಯ ಪಾರಂಪರಿಕ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ

ಉಡುಪಿ ನಗರದ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾದ, ಸ್ವಾತಂತ್ರ್ಯ ಪೂರ್ವದಲ್ಲಿ ಸಬ್‌ ಜೈಲ್‌ ಆಗಿದ್ದ, ಹಳೆ ತಾಲೂಕು ಕಚೇರಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬ್ರಿಟಿಷರ ಆಳ್ವಿಕೆ ಇದ್ದ 1906ರಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡ ಮಾನ್ಯತೆಯೊಂದಿಗೆ ಉಳಿಸಲು ನಡೆಸಿದ ಪ್ರಯತ್ನಗಳು ವಿಫ‌ಲವಾಗಿವೆ. ಇದೀಗ ಕಟ್ಟಡವನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಅದರ ಹೆಂಚುಗಳನ್ನು ತೆಗೆಯುವ ಕಾರ್ಯ ಆರಂಭಗೊಂಡಿದೆ. ಈ ಜಾಗದಲ್ಲಿ ಇನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಉಡುಪಿ ನಗರದಲ್ಲಿರುವ ವಿರಳ ಪಾರಂಪರಿಕ ಕಟ್ಟಡಗಳಲ್ಲಿ […]

ಮಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ನಿಶ್ಶಬ್ದ ಪ್ರತಿಭಟನೆ.

ಮಂಗಳೂರು: ಕೊಲ್ಕತ್ತಾ ವೈದ್ಯೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಲಿಂಗ ಆಧಾರಿತ ಹಿಂಸಾಚಾರದ ಘಟನೆಗಳಿಗೆ ಪ್ರತಿಭಟನೆಯಾಗಿ, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಆಗಸ್ಟ್ 27ರಂದು ಸಂಜೆ 6:30 ಕ್ಕೆ ನಿಶ್ಶಬ್ದ ಪ್ರತಿಭಟನೆ ಆಯೋಜಿಸಿತು. ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಈ ಘಟನೆಯು ಲೈಂಗಿಕ ಹಿಂಸೆಯ ಬಲಿಪಶುಗಳ ಸ್ಮರಣಾರ್ಥವಾಗಿತ್ತು. ಎನ್‌ಎಸ್‌ಎಸ್ ಘಟಕ 5ರ ನೇತೃತ್ವದಲ್ಲಿ ಪ್ರೋಗ್ರಾಂ ಅಧಿಕಾರಿ ಶ್ರೀ ಮಹೇಶ್ ಡಿ.ಕೆ. ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 1,800 ವಿದ್ಯಾರ್ಥಿಗಳು ಮತ್ತು […]

ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಅಸಭ್ಯ ಫೋಟೊ ಶೂಟ್ ವಿವಾದ: ಪೊಲೀಸ್ ಇಲಾಖೆ ಸ್ಪಷ್ಟನೆ.

ಉಡುಪಿ: ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಫೋಟೊ ಶೂಟ್ ವಿವಾದಕ್ಕೆ ಸಂಬಂಧಿಸಿದಂತೆ ಒಬ್ಬ ಯುವತಿ ಹಾಗೂ ಯುವಕ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಪಡುಬಿದ್ರೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಯುವಕ ಹಾಗೂ ಯುವತಿಯನ್ನು ಕರೆದು ಬ್ಲೂಫ್ಲ್ಯಾಗ್ ಬೀಚ್ ವಸತಿ ಪ್ರದೇಶವಾಗಿರುವ ಬಗ್ಗೆ ಮನವರಿಕೆ ಮಾಡಿದ್ದು, ಅವರು ಅಲ್ಲಿಂದ ತೆರಳಿದ್ದರು. ಅಲ್ಲಿ ಯಾವುದೇ ಅಹಿತಕರ ಘಟನೆ […]