ಮೇ.18 ರಿಂದ ಜೂ.30ರ ವರೆಗೆ ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್”ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ.

ಉಡುಪಿ: ಉಡುಪಿ ಬನ್ನಂಜೆ “ಪ್ರೆಸ್ಟೀಜ್ ಎಕ್ಸ್‌ಕ್ಲೂಸಿವ್” ನಲ್ಲಿ ಮೆಗಾ ಸೇಲ್ಸ್ & ಎಕ್ಸ್‌ಚೇಂಜ್ ಮೇಳ ಮೇ.18 ರಿಂದ ಜೂ.30ರ ವರೆಗೆ ನಡೆಯಲಿದೆ. ಗ್ರಾಹಕರು ಇಲ್ಲಿ ಹಳೆಯ ಕುಕ್ಕರ್‌ಗಳು, ದೋಸೆ ತವಾ, ಕಡಾಯಿ, ಮಿಕ್ಸರ್, ಗ್ರೈಂಡರ್‌ಗಳು ಮತ್ತು ಯಾವುದೇ ಬ್ರಾಂಡ್‌ನ, ಯಾವುದೇ ಷರತ್ತುಗಳ ಗ್ಯಾಸ್ ಸ್ಟೌವ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇಲ್ಲಿ ಗ್ರಾಹಕರಿಗೆ 25%-64% ವರೆಗಿನ ವಿನಿಮಯ ಕೊಡುಗೆಗಳಿವೆ. ಇದು ಉಡುಪಿಯ ಏಕೈಕ ಪ್ರೆಸ್ಟೀಜ್ ಎಕ್ಸ್ಕ್ಯೂಸ್ ಶೋರೂಮ್ ಆಗಿದ್ದು, ಗ್ರಾಹಕರು ನಿಜವಾದ ಪ್ರೆಸ್ಟೀಜ್ ಉತ್ಪನ್ನಗಳನ್ನು ಖರೀದಿಸಬಹುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ […]

ಉಡುಪಿ: ತಕ್ಷಣ ಬೇಕಾಗಿದ್ದಾರೆ

SSLC, ITI, PUC ಯಾವುದೇ ವಿದ್ಯಾರ್ಹತೆ ಇದ್ದವರು ಎಲೆಕ್ಟ್ರಿಕಲ್ ತಂತ್ರಜ್ಞ ಮತ್ತು ಸಹಾಯಕರು ಬೇಕಾಗಿದ್ದಾರೆ. ಸಂಬಳ: 14,000 ರಿಂದ 30,000 ಇಎಸ್‌ಐ, ಪಿಎಫ್, ಕೊಠಡಿ ಸೌಲಭ್ಯವನ್ನು ಒದಗಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:ಶಾಂತಾ ಇಲೆಕ್ಟ್ರಿಕಲ್ಸ್ & ಇಂಜಿನಿಯರ್ಸ್ ಪ್ರೈ.ಲಿ.ಅಭರಣ ಜ್ಯುವೆಲ್ಲರ್ಸ್ ಹತ್ತಿರ, ಕಾರ್ಪೊರೇಷನ್ ಬ್ಯಾಂಕ್ ರಸ್ತೆ, ಅನುಗ್ರಹ ಸಂಕೀರ್ಣ, ಉಡುಪಿ9964582804, 7353762951

ಸಾಂಸ್ಕೃತಿಕ ಹಬ್ಬ “ಆಕೃತಿ – 2024”: ಬಂಟಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

ಉಡುಪಿ: ಕೆನರಾ ಇಂಜಿನಿಯರಿಂಗ್ ಕಾಲೇಜು, ಮಂಗಳೂರು ಇಲ್ಲಿ ಮೇ.9, 10 ಮತ್ತು 11 ರಂದು ನಡೆದ “ಆಕೃತಿ – 2024” ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಇದರಲ್ಲಿ ಬಂಟಕಲ್‍ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಚೇತನ್ ಕೋಟ್ಯಾನ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಸುಜಲ್ ಎಸ್ ಕುಮಾರ್, ವಿನಾಯಕ್ ಯು ಪೈ, ಯಶ್ ಶೆಟ್ಟಿ ಮತ್ತು ತರುಣ್ ಜಿ ಭಟ್ ಇವರು ಫ್ರೀ ಫೈರ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಪೂಜಾರಿ ಭೂಷಣ್ ಭಾಸ್ಕರ್ […]

ಮಣಿಪಾಲ: ಗಾಂಜಾ ಸೇವನೆ – ಒಟ್ಟು 7 ಮಂದಿ ಪೊಲೀಸರ ವಶಕ್ಕೆ.

ಮಣಿಪಾಲ, ಮೇ 17: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ.14ರಂದು ಮಣಿಪಾಲ ವಿದ್ಯಾರತ್ನ ನಗರದ ಐರಿಶ್ ಫ್ಲಾಜಾದ ಬಳಿ ನಿಶಾಂತ್(22), ಅಮಿತ್(20), ಮೇ 12ರಂದು ಪ್ರಜ್ವಲ್(21), ಆರ್ಯನ್ (20), ಪ್ರಧುಮಾನ್, ಹೆಮಾನ್ಯ(20), ಸುಭಾಸ್(23) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್ […]

ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ಪುಟ್ಟ ಕಲಾವಿದೆಯ ಕಲಾಸಿರಿಯ ಅನಾವರಣ.

ಉಡುಪಿ: ಖ್ಯಾತ ಪುಟ್ಟ ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಇವಳಿಂದ ವಯಲಿನ್ ವಾದನ ಕಛೇರಿ ಕಾರ್ಯಕ್ರಮ ನಿನ್ನೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು . ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಬಾಲಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಗುರುಗಳಾದ ವಿದ್ವಾನ್ ಶ್ರೀ ಅನುರೂಪ್ ಅವರನ್ನೂ ಮತ್ತಿತರ ಸಹಕಲಾವಿದರನ್ನೂ ಪ್ರಸಾದ ನೀಡಿ ಹರಸಿದರು. ಕಿಕ್ಕಿರಿದ ರಾಜಾಂಗಣದಲ್ಲಿ ನಡೆದ ಈ ಸಂಗೀತ ಗಾನ […]