ನಿಟ್ಟೆ: ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2021-22 ನೇ ಸಾಲಿನ ಪದವಿ ಪ್ರದಾನ ಸಮಾರಂಭ

ನಿಟ್ಟೆ: ಪ್ರತಿಯೋರ್ವ ಮಾನವನೂ ತನ್ನ ವಿದ್ಯಾರ್ಥಿ ಜೀವನ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಡರು ತೊಡರುಗಳು, ಅನಿಶ್ಚಿತತೆಯನ್ನು ಸಮರ್ಥವಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಎದುರಿಸಲು ಮಾರ್ಗದರ್ಶನ ನೀಡಿದ ಎಲ್ಲರನ್ನೂ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಹಾದಿಯಲ್ಲಿ ಎದುರಾಗುವ ತೊಂದರೆಗಳೇ ನಮ್ಮ ಯಶಸ್ಸಿಗೆ ಸ್ಪೂರ್ತಿ ಹಾಗೂ ದಾರಿದೀಪವಾಗಬೇಕು ಎಂದು ಅಮೇರಿಕದ ಹ್ಯಾರಿಸ್ಬರ್ಗ್ ನಲ್ಲಿರುವ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಎಕಡೆಮಿಕ್ ಎಫೇರ್ಸ್ ಎಂಡ್ ಎಡ್ಮಿನಿಶ್ಟ್ರೇಶನ್ ನ ಸೀನಿಯರ್ ಅಸೋಸಿಯೇಟ್ ಡೀನ್ ಡಾ.ಒಮಿದ್ ಅನ್ಸಾರಿ ಅಭಿಪ್ರಾಯಪಟ್ಟರು. ಅಕ್ಟೋಬರ್ […]

ಅಜೆಕಾರಿನ ಕಾಂಗ್ರೆಸ್ ಕಾರ್ಯಕರ್ತ ಅರುಣ್ ಕುಲಾಲ್ ನಿಧನ

ಅಜೆಕಾರು ದೊಂಡೇರಂಗಡಿಯ ನಿವಾಸಿ ಅರುಣ್ ಕುಲಾಲ್ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರಿಗೆ 41 ವರ್ಷ ವಯಸಾಗಿತ್ತು. ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ದೊಂಡೇರಂಗಡಿ ಭಾಗದಲ್ಲಿ ಪಕ್ಷ ಸಂಘಟನೆ‌, ಸಾಮಾಜಿಕ‌ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ದೈವ ನರ್ತಕರ ಜೊತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂತಾರ ವೀಕ್ಷಣೆ

ಉಡುಪಿ: ಜಾತಿ ಮತ ದೇಶ ಭಾಷೆಗಳ ಗಡಿ ದಾಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ, ದೈವದ ಸೇವೆ […]

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್: ಬ್ರಿಟಿಷ್ ನೆಲದಲ್ಲಿ ಇತಿಹಾಸ ಸೃಷ್ಟಿ 

ಬ್ರಿಟನ್: ಇನ್ನೂರು ವರ್ಷಗಳ ಕಾಲ ಭಾರತೀಯರ ಮೇಲೆ ದಬ್ಬಾಳಿಕೆ ಮಾಡಿದ, ಭಾರತವನ್ನು ಕೊಳ್ಳೆ ಹೊಡೆದ ಬ್ರಿಟನ್ ಗೆ ಇದು ನುಂಗಲಾರದ ತುತ್ತಾಗಿದ್ದರೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಅಪ್ಪಟ ಬ್ರಿಟಿಷರಿಗೆ ಮೀಸಲಾಗಿದ್ದ ಪ್ರಧಾನಿ ಪದವಿಗಿಂದು ಭಾರತೀಯ ಮೂಲದ ರಿಷಿ ಸುನಕ್ ಅವರು ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಸೂರ್ಯ ಮುಳುಗದ ನಾಡಿಗೆ ಇದು ಅತ್ಯಂತ ಅನಿವಾರ್ಯವಾಗಿದೆ. ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರ ರಾಜೀನಾಮೆಯ ಬಳಿಕ ತೆರವಾಗಿದ್ದ ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಭಾರತೀಯ ಮೂಲದ ರಿಷಿ […]

“ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್” ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ಸ್ವೀಟ್ಸ್ ಮಾರಾಟ

ಉಡುಪಿ: ಕಲ್ಸಂಕ ವೃತ್ತದ ಬಳಿಯಲ್ಲಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 40 ವರ್ಷಗಳಿಂದ ತೊಡಗಿಸಿಕೊಂಡಿರುವ ”ಜಹಾಂಗೀರ್ ಭಟ್ಸ್ ಉಡುಪಿ ಸ್ವೀಟ್ ಹೌಸ್ ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸ್ವೀಟ್ಸ್ ಮಾರಾಟ ಆಯೋಜಿಸಲಾಗಿದೆ. ಉಡುಪಿ ಸ್ವೀಟ್ ಹೌಸ್’ನಲ್ಲಿ ಪಾರಂಪರಿಕ ಮತ್ತು ನವೀನ ಮಾದರಿಯ ಎಲ್ಲಾ ತರಹದ ಸಿಹಿ ತಿಂಡಿಗಳನ್ನು ಶುದ್ಧ ತುಪ್ಪದಿಂದ ತಯಾರಿಸಲಾಗುತ್ತದೆ.ಗ್ರಾಹಕರಿಗೆ ವಿಶೇಷ ಗಿಫ್ಟ್ ಪ್ಯಾಕ್ ಗಳು ದೊರೆಯಲಿವೆ. ಪ್ರತೀ ಕೆಜಿಗೆ ಸೂಪರ್ ಸ್ಪೆಷಲ್ ಸ್ವೀಟ್ಸ್ 880 ರೂ., […]