ಮೂಡುಬಿದಿರೆ:ಕನಸನ್ನು ನನಸಾಗಿಸುವುದೇ ಆಳ್ವಾಸ್ ಹೆಚ್ಚುಗಾರಿಕೆ: ಡಾ.ಸದಾಕತ್ವಿ

ವಿದ್ಯಾಗಿರಿ: ಭವಿಷ್ಯದ ದೊಡ್ಡ ಕನಸಿನೊಂದಿಗೆ ಆಳ್ವಾಸ್ ಸಂಸ್ಥೆಗೆ ಸೇರಿದ್ದೀರಿ, ನಿಮ್ಮ ಕನಸು ನನಸಾಗಿಸುವವರೆಗೆ ಆಳ್ವಾಸ್ ನಿಮ್ಮ ಜತೆ ಸಾಗಲಿದೆ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸದಾಕಾತ್ ಹೇಳಿದರು.ವಿದ್ಯಾಗಿರಿಯ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಪಿಯು (ವಿಜ್ಞಾನ) ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನ ಅವಕಾಶಗನ್ನು ಒದಗಿಸುವುದು ಆಳ್ವಾಸ್‌ನ ಗುರಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ನನಸಾಗಿಸಲು ಆಳ್ವಾಸ್ ಸದಾ ಜತೆಯಾಗಿ ನಿಲ್ಲಲಿದೆ. ಇದಕ್ಕಾಗಿ ಆಡಳಿತ ವರ್ಗ, ಶಿಕ್ಷಕರು, […]

ಮಂಗಳೂರು: ಬಿ-ಆರ್ಕಿಟೆಕ್ಚರ್ ಮತ್ತು ಬಿ- ಪ್ಲ್ಯಾನಿಂಗ್ ಎಕ್ಸ್ಪರ್ಟ್ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್‌ಗೆ 7ನೇ ರ‍್ಯಾಂಕ್

ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೆ. ರೆಹಾನ್ ಮೊಹಮ್ಮದ್ ಜೆಇಇ ಮೈನ್‌ನ ಬಿ- ಪ್ಲ್ಯಾನಿಂಗ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ೭ನೇ ರ‍್ಯಾಂಕ್ ಹಾಗೂ ಬಿ – ಆರ್ಕಿಟೆಕ್ಚರ್‌ನಲ್ಲಿ 165ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ದೇಶದಲ್ಲಿರುವ ಎನ್‌ಐಟಿಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್ನಪ್ರವೇಶಕ್ಕಾಗಿ ನಡೆದ ಪರೀಕ್ಷೆ ಇದಾಗಿದ್ದು, ಜೆಇಇ ಮೈನ್‌ನ ಬಿ –ಪ್ಲ್ಯಾನಿಂಗ್‌ನಲ್ಲಿ ಶೈವಿ ಕೆ.ಎಚ್. 277ನೇ ರ‍್ಯಾಂಕ್, ವಿಹಾನ್ ಪೂಜಾರಿ 651ನೇ ರ‍್ಯಾಂಕ್, ಅಬ್ದುಲ್ ಖಾದರ್ ಮನ್ಸೂರ್ ಮೋಮಿನ್ 1367ನೇ ರ‍್ಯಾಂಕ್, ಡಿ.ಚಿನ್ಮಯ […]

ಉಡುಪಿ:ಕೋಸ್ಟಲ್ ಬರ್ತ್ ಅಭಿವೃದ್ಧಿ : ಪರಿಸರ ಸಾರ್ವಜನಿಕ ಅಲಿಕೆ ಸಭೆ

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕು ಹಂಗಾರಕಟ್ಟೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿ, ಬಂದರು ಮತ್ತುಮೀನುಗಾರಿಕೆ ವಿಭಾಗ, ಉಡುಪಿ ಇವರು ಸಾಗರಮಾಲ ಯೋಜನೆಯಡಿಯಲ್ಲಿ ಕರ್ನಾಟಕ ಕರಾವಳಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತವಾಗಿ ತಂಗಲು ಆಶ್ರಯ ಕಲ್ಪಿಸಲು ಸಿಮೆಂಟ್, ಖಾದ್ಯತೈಲ ಮತ್ತು ಕೃಷಿ ಉತ್ಪನ್ನಗಳು ಮತ್ತು ಇತರ ವಾಣಿಜ್ಯ ಸರಕುಗಳನ್ನು ನಿರ್ವಹಿಸಲು, ಸುರಕ್ಷಿತ ಆಶ್ರಯ ಮತ್ತು ಸಂಗ್ರಹಣೆಗಾಗಿ ಬೇಡಿಕೆಗಳಿರುವುದರಿಂದ, ಸರಕು ಸಾಗಣೆಯ ಅನುಕೂಲಕ್ಕಾಗಿ 1.62 ಹೆಕ್ಟೇರ್ ಪ್ರದೇಶದಲ್ಲಿ ಕೋಸ್ಟಲ್ ಬರ್ತ್ ಅನ್ನು ಅಭಿವೃದ್ಧಿಪಡಿಸುವ ಕುರಿತು ಪರಿಸರ ಸಾರ್ವಜನಿಕ ಆಲಿಕೆ ಸಭೆಯು ಬುಧವಾರಹಂಗಾರಕಟ್ಟೆ […]

ಉಡುಪಿ:ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಅಗತ್ಯವಿರುವ ಪೂರಕ ವಾತಾವರಣವನ್ನು ಅಧಿಕಾರಿಗಳು ಕಲ್ಪಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದರೊಂದಿಗೆ ಮಕ್ಕಳು ಸಮಾಜದಲ್ಲಿ ಆರೋಗ್ಯಯುತ ಜೀವನ ನಡೆಸಿ,ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅಗತ್ಯವಿರುವ ಪೂರಕ ವಾತಾವರಣ ಅಧಿಕಾರಿಗಳು ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಭಿಕ್ಷಾಟಣೆ ಮಾಡುತ್ತಿರುವ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಕಾಣೆಯಾದ ಮಕ್ಕಳು, ಮಾದಕವ್ಯಸನಿಯ ಮಕ್ಕಳು,ಪರಿತ್ಯಕ್ತ […]

ಕಟಪಾಡಿ: ತ್ರಿಶಾ ಕಾಲೇಜಿನಲ್ಲಿ ಗ್ರಾಜುಯೇಟ್ಸ್ ಡೇ ಆಚರಣೆ

ಕಟಪಾಡಿ:ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು, ಕಟಪಾಡಿಯ ವತಿಯಿಂದ ಮೇ 28, 2025ರಂದು ಬಿಎಂಜೆ ಹಾಲ್, ಶಂಕರಪುರದಲ್ಲಿ ಗ್ರಾಜುಯೇಟ್ಸ್ ಡೇ (Graduates Day) ಮತ್ತು ಪರಂಪರಾ ದಿನ(Traditional Day) ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಯಾಗಿ ಸಿಎ ಗುಜ್ಜಡಿ ಪ್ರಭಾಕರ ಎನ್ ನಾಯಕ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶ್ರದ್ಧೆ, ಶಿಸ್ತು, ನಿಷ್ಠೆಯ ಮಹತ್ವವನ್ನು ಮತ್ತು ಪ್ರಾಯೋಗಿಕ ಜ್ಞಾನ ಮತ್ತು ನೈತಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]