ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪಿಸಲು ಇನ್ನೆಷ್ಟು ಜೀವಗಳು ಬಲಿಯಾಗಬೇಕು?: ಅನ್ಸಾರ್ ಅಹಮದ್ ಉಡುಪಿ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಕೋಮುಗಲಭೆ ನಡೆಯುತ್ತಿದ್ದು, ಅದೆಷ್ಟೋ ಅಮಾಯಕರು ಜೀವ ತೆತ್ತಿರುತ್ತಾರೆ. ಮೊನ್ನೆಯಷ್ಟೇ ಸುಹಾಸ್ ಶೆಟ್ಟಿಯವರ ಕೊಲೆ ನಡೆದಾಗ ಮಾನ್ಯ ಗೃಹ ಮಂತ್ರಿಗಳು ಇಂತಹ ಪ್ರಕರಣಗಳು ಮರುಕಳಿಸದಂತೆ ಆ್ಯಂಟಿ ಕಮ್ಯುನಲ್ ಫೋರ್ಸ್ ರಚಿಸಲಾಗುವುದು ಎಂದು ಭರವಸೆ ನೀಡಿ ನೀಡಿದ್ದರು. ಆ ಘಟನೆ ನಡೆದ ನಂತರ ಈಗ ಇನ್ನೊಬ್ಬ ಅಮಾಯಕನ ಕೊಲೆ ನಡೆದಿದೆ. ಗೃಹ ಮಂತ್ರಿಗಳೇ ತಾವು ಹೇಳಿರುವ ಆ್ಯಂಟಿ ಕಮ್ಯುನಲ್ ಫೋರ್ಸ್ ರಚಿಸಲು ಇನ್ನೆಷ್ಟು ಅಮಾಯಕ ಬಡವರ ಮನೆಯ ಮಕ್ಕಳ ಜೀವ ಬಲಿ […]

ಮೇ 30ರಂದು “ಸ್ಕೂಲ್ ಲೀಡ‌ರ್” ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

ಉಡುಪಿ: ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹುನಿರೀಕ್ಷಿತ ಸ್ಕೂಲ್ ಲೀಡ‌ರ್ ಕನ್ನಡ ಸಿನಿಮಾ ಮೇ 30ರಿಂದ ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿನಿಮಾದ ನಿರ್ಮಾಪಕ ಕೆ. ಸತ್ಯೇಂದ್ರ ಪೈ ಅವರು, ಈ ಸಿನಿಮಾ ಹೈಸ್ಕೂಲ್ ಮಕ್ಕಳ ಮನೋ ವಿಕಾಸ, ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾವಸ್ತುವನ್ನು ಹೊಂದಿದೆ. ಗಂಭೀರ ಕತೆಯನ್ನು ಹಾಸ್ಯದ ಲೇಪನದೊಂದಿಗೆ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದು ಶಾಲಾ ಚುನಾವಣೆಯನ್ನು […]

ಉಡುಪಿಯ ಭಕ್ತಿ ಟ್ಯುಟೋರಿಯಲ್ಸ್ ನಲ್ಲಿ 6 ರಿಂದ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಟ್ಯೂಷನ್ ಕ್ಲಾಸಸ್

ಉಡುಪಿ:6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ (CBSE, ICSE ಮತ್ತು ರಾಜ್ಯ ಮಂಡಳಿ) ಅತ್ಯುತ್ತಮ ಟ್ಯೂಷನ್ ಕ್ಲಾಸಸ್ ಅನ್ನು ಸಮಂಜಸವಾದ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಮುಖ್ಯಾಂಶಗಳು: ◼6 ನೇ, 7 ನೇ, 8 ನೇ, 9 ನೇ ತರಗತಿ-ರಾಜ್ಯ ಮಂಡಳಿ CBSE, ICSE.◼ವಿಷಯಗಳು: ಗಣಿತ ಮತ್ತು ವಿಜ್ಞಾನ.◼ವಿದ್ಯಾರ್ಥಿಗಳಿಗೆ ವಿಶೇಷ ವೈಯಕ್ತಿಕ ಗಮನ.◼ತಲಾ 10 ವಿದ್ಯಾರ್ಥಿಗಳನ್ನು ಹೊಂದಿರುವ ಬ್ಯಾಚ್‌ಗಳು.◼ಪರಿಕಲ್ಪನಾ ಕಲಿಕೆ ಮತ್ತು ತಾರ್ಕಿಕ ತಿಳುವಳಿಕೆಯ ಮೇಲೆ ಕೇಂದ್ರೀಕರಣ.◼ಅರ್ಹ ಮತ್ತು ಅನುಭವಿ ಬೋಧಕರು.◼ತರಗತಿ ಬೋಧನೆ ಮತ್ತು ಮಾರ್ಗದರ್ಶನದಲ್ಲಿ […]

ಬಿ.ಕೆ.ಹರಿಪ್ರಸಾದ್ ಜೊತೆಗೆ ಸಿಎಂ ಉಪಾಹಾರ ಭೇಟಿ

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು. ದ್ವೇಷ ಯಾವುದೇ ಕಾರಣಕ್ಕೂ ಇರಬಾರದು ಎಂಬ ಬಗ್ಗೆ ಚರ್ಚಿಸಲಾಯಿತು. ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ವಸತಿ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ […]

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಪುವಿನಲ್ಲಿ ಪೌರ ಕಾರ್ಮಿಕರ ಪ್ರತಿಭಟನೆ

ಉಡುಪಿ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇಂದು ಕಾಪು ಪುರಸಭೆಯ ಆವರಣದಲ್ಲಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇಲ್ಲಿಗೆ ಭೇಟಿ ನೀಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು.ಪೌರ ಕಾರ್ಮಿಕರ ಬೇಡಿಕೆಗಳ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಪೌರ ಕಾರ್ಮಿಕರು ಇಲ್ಲದೆ ನಾವು ನಗರನ್ನು ಪಟ್ಟಣವನ್ನು ಊಹಿಸಲು ಸಾಧ್ಯವಿಲ್ಲ. ಸ್ವಚ್ಛ ನಗರಕ್ಕೆ ಪೌರ ಕಾರ್ಮಿಕರ ಸೇವೆ ಅಪಾರ. ನಿಮ್ಮ […]