ಉಡುಪಿ:ಜಿಲ್ಲೆಯಲ್ಲಿ ಪ್ರವಾಹ, ಅತಿವೃಷ್ಠಿ ಹಾನಿಗಳಿಗೆ ತ್ವರಿತವಾಗಿ ಸ್ಪಂದಿಸಿ : ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್

ಉಡುಪಿ: ಅತಿವೃಷ್ಠಿಯಿಂದ ಉಂಟಾಗುವ ಪ್ರವಾಹ, ಅದರಿಂದಾಗುವ ಇತರೆ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ತ್ವರಿತವಾಗಿ ಸ್ಪಂದಿಸಿ, ಯಾವುದೇ ಜನ, ಜಾನುವಾರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹೇಳಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ಮಳೆಹಾನಿ ಬಗ್ಗೆ ಚರ್ಚಿಸಲು […]

ಇಂದು (ಮೇ30) ಉಡುಪಿ ಜಿಲ್ಲೆಯ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ ಇಂದು ದಿನಾಂಕ 30-5-2025 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ.ಕೆ ರವರು ಆದೇಶಿಸಿದ್ದಾರೆ. ಎಸ್ .ಎಸ್. ಎಲ್ .ಸಿ ಪೂರಕ ಪರೀಕ್ಷೆಯು ಎಂದಿನಂತೆ ನಡೆಯಲಿದೆ.

IPS Transfer; ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ದಕ್ಷಿಣ ಕನ್ನಡಕ್ಕೆ ವರ್ಗಾವಣೆ

ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ದಕ್ಷಿಣ ಕನ್ನಡಕ್ಕೆ ವರ್ಗಾವಣೆ ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ನೇಮಕ ಉಡುಪಿ: ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಡಾ. ಅರುಣ್‌ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯನ್ನಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮಂಗಳೂರು ನಗರ ಪೊಲೀಸ್ ಕಮಿಷನ‌ರ್ ಅನುಪಮ್ ಅಗರ್‌ವಾಲ್ ಹಾಗೂ ದಕ್ಷಿಣ ಕನ್ನಡ ಎಸ್ ಪಿ ಯತೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಂಗಳೂರಿನ ಕಮಿಷನ‌ರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಸಂಶೋಧನಾ ಅನುದಾನಾವಕಾಶಗಳು ಮತ್ತು ಸಾಧ್ಯತೆಗಳು” ಎಂಬ ವಿಷಯದ ಕುರಿತು ಉಪನ್ಯಾಸ

ಬಂಟಕಲ್,ಉಡುಪಿ:29 ಮೇ 2025 ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಘಟಕವು ಐಎಸ್‌ಟಿಇ ಅಧ್ಯಾಪಕ ಘಟಕದ ಸಹಯೋಗದೊಂದಿಗೆ ದಿನಾಂಕ 27 ಮೇ 2025 ರಂದು ಸಂಶೋಧನಾ ಅನುದಾನಾವಕಾಶಗಳು ಮತ್ತು ಸಾಧ್ಯತೆಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಿತ್ತು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ತಾಂತ್ರಿಕ ವಿದ್ಯಾಲಯ ಇಲ್ಲಿನ ಘಟಕದ ಸಹನಿರ್ದೇಶಕರಾದ ಡಾ. ಅಶೋಕ್ ರಾವ್ ಭಾಗವಹಿಸಿದ್ದರು. ಇವರು ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಯ ಮಹತ್ವ ಮತ್ತು ಶಿಕ್ಷಕರು ಎದುರಿಸುವ ವಿವಿಧ ಸವಾಲುಗಳ […]

ಉಡುಪಿ:ಈಸಿ ಲೈಫ್ ನಲ್ಲಿ ಕೌಂಟರ್ ಸೇಲ್ಸ್ ಅಂಡ್ ಬಿಲ್ಲಿಂಗ್ ಹುದ್ದೆಗೆ ಜನ ಬೇಕಾಗಿದ್ದಾರೆ

ಉಡುಪಿ: ಈಸಿ ಲೈಫ್ ನಲ್ಲಿ ಕೌಂಟರ್ ಸೇಲ್ಸ್ ಅಂಡ್ ಬಿಲ್ಲಿಂಗ್ ಹುದ್ದೆಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನವಿದ್ದು, PF, ESI ಸೌಲಭ್ಯದೊಂದಿಗೆ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ರೆಸ್ಯೂಮ್ ಹಾಗೂ ಫೋಟೋವನ್ನು ಈ ನಂಬರ್ ಗೆ ವಾಟ್ಸಪ್ ಮಾಡಿ:9901876682 ಸ್ಥಳ:ಉಡುಪಿ, ಹಿರಿಯಡಕ.