ಉಡುಪಿ: ಸೆಪ್ಟೆಂಬರ್ 4ರಂದು ‘ಉಚಿತ ಆರೋಗ್ಯ ಮೇಳ’

ಉಡುಪಿ: ಜಯಂಟ್ಸ್ ಗ್ರೂಪ್ ಆಫ್, ಉಡುಪಿ, ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ, ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೀಡಿನಗುಡ್ಡೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸಿ.ಎಸ್.ಐ ಲೋಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಇವರು ಜಂಟಿಯಾಗಿ ಆಯೋಜಿಸಿರುವ ಉಚಿತ ಆರೋಗ್ಯ ಮೇಳವು ಸೆಪ್ಟೆಂಬರ್ 4ರಂದು (ಗುರುವಾರ) ಸ್ಥಳ: ಶಾರದಾಂಬ ದೇವಸ್ಥಾನ ವಠಾರ ಚಿಟ್ಪಾಡಿ ಉಡುಪಿ, ಸಮಯ: ಬೆಳಿಗ್ಗೆ 9.೦೦ ರಿಂದ ಮಧ್ಯಾಹ್ನ 1.೦೦ಗಂಟೆಯ ವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, […]
ಕುಂದಾಪುರ: ಹನಿ ಟ್ರ್ಯಾಪ್ ಬಲೆಗೆ ಬೀಳಿಸಿ ಸುಲಿಗೆ: ಮುಸ್ಲಿಂ ಮಹಿಳೆ ಸಹಿತ ಆರು ಮಂದಿಯ ಬಂಧನ

ಉಡುಪಿ: ವ್ಯಕ್ತಿಯೊಬ್ಬನನ್ನು ಹನಿ ಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಆತನಿಗೆ ಹಲ್ಲೆಗೈದು ಸಾವಿರಾರು ರೂ. ಸುಲಿಗೆ ಮಾಡಿದ ಘಟನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಸಂದೀಪ್ ಕುಮಾರ್ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಧಿತರನ್ನು ಬೈಂದೂರು ನಾವುಂದ ಗ್ರಾಮದ ಸವದ್ ( 28), ಕುಂದಾಪುರ ಗುಲ್ವಾಡಿ ಗ್ರಾಮದ ಸೈಪುಲ್ಲಾ ( 38), ಕುಂದಾಪುರ ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ ( 36), ಕುಂದಾಪುರ ಕುಂಭಾಶಿ ಗ್ರಾಮದ ಅಬ್ದುಲ್ ಸತ್ತಾರ್ ( […]
ನಿಮ್ಮ ಭವಿಷ್ಯಕ್ಕೆ ಆರ್ಥಿಕ ಬೆಂಬಲ ನೀಡುತ್ತೆ ಅಂಚೆ ಇಲಾಖೆಯ ಈ ಯೋಜನೆ: ಕಡಿಮೆ ಹೂಡಿಕೆ ಮಾಡಿ, ಹೆಚ್ಚಿನ ಆದಾಯ ಪಡೀರಿ

ಪೋಸ್ಟ್ ಆಫೀಸ್ ನಲ್ಲಿರುವ ಕೆಲವೊಂದು ಯೋಜನೆಗಳು ಬ್ಯಾಂಕ್ ನಲ್ಲಿ ಸಿಗುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತದೆ. ಕಡಿಮೆ ಹೂಡಿಕೆಯಲ್ಲಿ ಪಿಪಿಎಫ್ ಯೋಜನೆ 2025: ಆಕರ್ಷಕ ಬಡ್ಡಿದರವನ್ನು ನೀಡುತ್ತವೆ. ಸಣ್ಣ ಹೂಡಿಕೆದಾರರಿಗೆ, ಮಧ್ಯಮ ವರ್ಗದವರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ವಿಶ್ವಾಸಾರ್ಹ ಆಯ್ಕೆಯಾಗಿವೆ. ಹಾಗಾದ್ರೆ ನೋಡೋಣ ಬನ್ನಿ ಬಡ್ಡಿ ದರ ಮತ್ತು ಯೋಜನೆಯ ವಿವರಗಳನ್ನು. ಅಂಚೆಇಲಾಖೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) ಅತ್ಯಂತ ಜನಪ್ರಿಯವಾಗಿದೆ, ಇದು ಕಡಿಮೆ ಅಪಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹೊಂದಿದೆ ಬಡ್ಡಿದರ […]
ಕುಂಜಾರುಗಿರಿ: ಅವಳಿ ಕರುವಿಗೆ ಜನ್ಮ ನೀಡಿದ ಹಸು

ಉಡುಪಿ: ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಕುಂಜಾರುಗಿರಿಯಲ್ಲಿ ನಡೆದಿದೆ.ಕುಂಜಾರುಗಿರಿಯ ಪಾಜೈಯ ಕೃಷಿಕ ಹಾಗೂ ಬಾಣಸಿಗ ಬಾಲಕೃಷ್ಣ ಭಟ್ ಅವರ ಮನೆಯ ದನವು ಅವಳಿ ಕರುಗಳಿಗೆ ಜನ್ಮನೀಡಿದೆ. ಒಂದು ಹೆಣ್ಣು ಹಾಗೂ ಒಂದು ಗಂಡು ಕರು ಹಾಕಿದ್ದು, ಎರಡು ಕರುಗಳು ಆರೋಗ್ಯವಂತಾಗಿವೆ. ಈ ಕರುಗಳನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ.
ವಾಹನ ನೀಡಲು ನಿರಾಕರಿಸಿದ ಆಸ್ಪತ್ರೆ, ಮಂಚದ ಮೇಲೆಯೇ ಶವ ಹೊತೊಯ್ದರು; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್!

ಗರಿಯಾಬಂದ್: ಆಸ್ಪತ್ರೆಯವರು ವಾಹನ ನೀಡಲು ನಿರಾಕರಿಸಿದ್ದರಿಂದ ಮೃತದೇಹವನ್ನು ಮಂಚದ ಮೇಲೆಯೇ ಹೊತ್ತೊಯ್ದಿರುವ ಘಟನೆ ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯ ಅಮ್ಲಿಪಡರ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಚ್ಚಾಬಾಯಿ ಪಟೇಲ್ ಎಂಬ 60 ವರ್ಷದ ವೃದ್ಧೆಯು ಸೋಮವಾರ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೊಂಡೊಯ್ಯಲು ವಾಹನವನ್ನು ಕಳುಹಿಸುವಂತೆ ಮೃತರ ಕುಟುಂಬಸ್ಥರು ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಇರಿಸಿದ್ದ ಆಸ್ಪತ್ರೆಯ ಮಂಚವನ್ನೇ 2.5 ಕಿ.ಮೀ. ದೂರ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಈ ವಿಡಿಯೊ […]