ಕುಂದಾಪುರ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಉಡುಪಿ: ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ಕುಂದಾಪುರದ ಸಾಸ್ತಾನ ಬಳಿಯ ಗುಂಡ್ಮಿಯಲ್ಲಿ ನಡೆದಿದೆ.ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕರಾದ ಜೆ. ರತ್ನಾಕರಾಯ (84) ಮತ್ತು ಅವರ ಪತ್ನಿ ಸರೋಜಮ್ಮ (72) ಸಾವಿನಲ್ಲೂ ಒಂದಾದ ದಂಪತಿ. ಸರೋಜಮ್ಮ ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ಪತ್ನಿಯ ಪಕ್ಕದಲ್ಲೇ ಇದ್ದ ರತ್ನಾಕರಾಯ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಕ್ಷಣ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಪತ್ನಿ ಸಾವನ್ನಪ್ಪಿದ 4 ಗಂಟೆಗಳ ಬಳಿ […]
ಉಡುಪಿ: ಕೈರಂಪಣಿ ಮೀನುಗಾರಿಕೆ ಆರಂಭ; ಮೀನುಗಾರರ ಬಲೆಗೆ ಬಿತ್ತು ಬಗೆ ಬಗೆಯ ಮೀನುಗಳು

ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಯಾಂತ್ರಿಕ ಮೀನುಗಾರಿಕೆ ಅವಧಿಕ್ಕಿಂತ ಮೊದಲೇ ಅಂತ್ಯಗೊಂಡಿದೆ. ನಷ್ಟದಲ್ಲೇ ಆಳ ಸಮುದ್ರ ಮೀನುಗಾರಿಕೆ ಅಂತ್ಯಗೊಳಿಸಿದ ಮೀನುಗಾರರು ಸದ್ಯ ಕೈರಂಪಣಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಕ್ಷಸ ಗಾತ್ರದ ಅಬ್ಬರದ ಅಲೆಗಳನ್ನು ಲೆಕ್ಕಿಸದೆ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾರೆ. ಮೀನುಗಾರ ಕಾರ್ಮಿಕರೇ ಸೇರಿ ನಡೆಸುವ ಮೀನುಗಾರಿಕೆ ಇದಾಗಿದ್ದು, ಸದ್ಯ ಮೀನುಗಾರರು ಕೈರಂಪಣಿ ಮೀನುಗಾರಿಕೆ ನಂಬಿ ದಿನ ಕಳೆಯುತ್ತಿದ್ದಾರೆ. ಕೈರಂಪಣಿ ಮೀನುಗಾರಿಕೆ ಆರಂಭಿಸಿರುವ ಮೀನುಗಾರರಿಗೆ ಪಡುಕರೆಯಲ್ಲಿ ಬೃಹತ್ ಗಾತ್ರದ ಮೀನುಗಳು […]
ಕಾರ್ಕಳ: ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಗಣಿತನಗರ : ಡಾ.ಸುಧಾಕರ್ ಶೆಟ್ಟಿಯವರಪರಿಕಲ್ಪನೆಯಲ್ಲಿ ಜ್ಞಾನಸುಧಾ ಸಂಸ್ಥೆಯು ಉತ್ತಮಶಿಕ್ಷಣದ ಜೊತೆಯಲ್ಲಿ ದೇಶಪ್ರೇಮಿಗಳನ್ನುನಿರ್ಮಿಸುತ್ತಿರುವ ಕಾರ್ಯ ಪ್ರಶಂಸನೀಯ. ಉತ್ತಮಫಲಿತಾಂಶದ ಮೂಲಕ ರಾಜ್ಯದ ಮಾದರಿ ಸಂಸ್ಥೆಯಾಗಿದೆಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ಪೂಜಾರಿ ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಶ್ರೀ ಮಹಾಗಣಪತಿದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಕ್ಷೇತ್ರದ ಶಾಸಕ ಶ್ರೀ ವಿ. ಸುನಿಲ್ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ “ಹೃದಯ ಮತ್ತು ಶ್ವಾಸಕೋಸದ ಪುನರುಜ್ಜೀವ” ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶನ

ಬಂಟಕಲ್, ಉಡುಪಿ:ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ದಿನಾಂಕ 28 ಮೇ 2025 ರಂದು ವಿಶ್ವ ರೆಡ್‌ಕ್ರಾಸ್ ದಿನದ ಅಂಗವಾಗಿ “ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ” ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯನ್ನು ಆಯೋಜಿಸಿತ್ತು.ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯಾವುದೇ ವ್ಯಕ್ತಿಯಅನಾರೋಗ್ಯ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವುದಾಗಿದೆ. ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ ತಂತ್ರಗಳ ನೇರ ಪ್ರದರ್ಶನವನ್ನು ಇಂಜಿನಿಯರಿಂಗ್ ವಿಭಾಗ, ಎಂಬಿಎ ವಿಭಾಗ ಮತ್ತು ನಿರಾಮಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು […]
ಮಂಗಳೂರು:ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರ ಪಾತ್ರ ಬಹಳ ಮುಖ್ಯ : ಪ್ರೊ. ನರೇಂದ್ರ ಎಲ್ ನಾಯಕ್

ಮಂಗಳೂರು:ಪದವಿ ಪೂರ್ವ ಹಂತದಲ್ಲಿ ವಿದ್ಯಾರ್ಥಿಗಳ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಿಕೊಳ್ಳುವ ಮೂಲಕ ಹೆತ್ತವರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ.ನರೇಂದ್ರ.ಎಲ್. ನಾಯಕ್ ಅವರು ಹೇಳಿದರು. ಅವರು ನಗರದ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳಸಭಾಂಗಣದಲ್ಲಿ ನಡೆದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಆಯೋಜಿಸಿದ ಓರಿಯೆಂಟೇಶನ್-2025 ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮಾತನಾಡುತ್ತ ವಿದ್ಯಾಭ್ಯಾಸದಲ್ಲಿ […]