ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ ‘ವಿಶ್ವ ಸುಂದರಿ ಕಿರೀಟ’

ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ಅವರು 72ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನ‌ರ್ ಅಪ್’ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಸಂಜೆ ಹೈದರಾಬಾದ್‌ನ ಹೈಟೆಕ್‌ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ 72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಚಾತಾ ಕಿರೀಟ ತಮ್ಮದಾಗಿಸಿಕೊಂಡರು. ಇನ್ನೂ ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ 8ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು. ವಿಜೇತರಿಗೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ […]

ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಜಾನ್ವಿ ಕನ್ಸ್ಟ್ರಕ್ಷನ್ ಗೆ ಇಂದೇ ಭೇಟಿ ನೀಡಿ

ಉಡುಪಿ: ಮನೆ, ಕಟ್ಟಡ ಕಟ್ಟುವ ಪ್ಲಾನ್ ನಿಮಗಿರಬಹುದು. ಆದರೆ ಈ ಕುರಿತು ಸರಿಯಾದ ಮಾಹಿತಿ, ಮಾರ್ಗದರ್ಶನ ಇಲ್ಲದೇ ನಿಮಗೆ ಚಿಂತೆಯಾಗಿರಬಹುದು. ನಿಮಗೆ ಒಂದೊಳ್ಳೆ ಮಾಹಿತಿ, ಮಾರ್ಗದರ್ಶನ ನೀಡಲು ಜಾನ್ವಿ ಕನ್ಟ್ರಕ್ಷನ್ ನಿಮ್ಮೊಂದಿಗಿದೆ. ನಿಮ್ಮ ಕನಸಿನ ಸೌಧ ಕಟ್ಟುವ ಆಸೆಯನ್ನು ಸುಲಭವಾಗಿ ನನಸು ಮಾಡುತ್ತೆ ಜಾನ್ವಿ ಕನ್ಸ್ಟ್ರಕ್ಷನ್. ಹೌದು, ಮನೆ, ಕಟ್ಟಡ ನಿರ್ಮಾಣದಲ್ಲಿ ಉದ್ಯಾವರದ ಜಾನ್ವಿ ಕನ್ಟ್ರಕ್ಷನ್ ಒಳ್ಳೆಯ ಹೆಸರು. ಕರಾವಳಿಯಾದ್ಯಂತ ಪ್ರಸಿದ್ಧಿ ಪಡೆದಿರುವ ‘ಜಾನ್ವಿ ಕನ್ಟ್ರಕ್ಷನ್’ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದರಲ್ಲಿ ಎಂದಿಗೂ ಒಂದು ಹೆಜ್ಜೆ ಮುಂದೆ. […]

ಬೆಳ್ಳಾರ್ಪಾಡಿ ಅಂಗನವಾಡಿಗೆ ನೂತನವಾಗಿ ನಿರ್ಮಿಸಿದ ಮಕ್ಕಳ ಆಟದ ಪಾರ್ಕ್ ಹಸ್ತಾಂತರ

ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಯೋಜನೆಯಾಗಿ ಮಕ್ಕಳ ಅಭಿವೃದ್ಧಿಗೆ ಬೆಂಬಲ, ಮಕ್ಕಳ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವ ಹಾಗೂ ಅಂಗನವಾಡಿ ಮಕ್ಕಳ ಹಾಜರಾತಿ ಹೆಚ್ಚಿಸುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ ಹೊಸದಾಗಿ ನಿರ್ಮಿಸಲಾದ ಆಟದ ಪಾರ್ಕ್ ಜೂನ್ 1 ರಂದು ಬೆಳ್ಳಾರ್ಪಾಡಿ ಅಂಗನವಾಡಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಈ ಯೋಜನೆ ರೋಟರಿ ಇಂಟರ್‌ನ್ಯಾಷನಲ್‌ನ “ಮೂಲ ಶಿಕ್ಷಣ ಮತ್ತು ಸಾಕ್ಷರತೆ” ಕೇಂದ್ರಕ್ಷೇತ್ರದಡಿ ಕೈಗೊಳ್ಳಲಾಯಿತು. ಈ ಯೋಜನೆಗಾಗಿ ರೋಟರಿ ಜಿಲ್ಲಾ ನಿಧಿ ಯಿಂದ ₹83,500 ರೂ. ಅನುದಾನ […]

ಉಡುಪಿ:ಹದಿನೈದು ದಿನಗಳ ಒಳಗಾಗಿ ಏಕವಿನ್ಯಾಸ ನಕ್ಷೆ ಸಮಸ್ಯೆ ಬಗೆಹರಿಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಉಡುಪಿ: ಜನಸಾಮಾನ್ಯರಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕ ವಿನ್ಯಾಸ ನಕ್ಷೆಯ ಸಮಸ್ಯೆಗಳ ಬಗ್ಗೆ ದಿನೇ ದಿನೇ ದೂರುಗಳು ಕೇಳಿ ಬರುತ್ತಿದ್ದು, ಇದರಿಂದಾಗಿ ಗೃಹ ನಿರ್ಮಾಣ ಮತ್ತು ಕಟ್ಟಡಗಳನ್ನು ಕಟ್ಟಲು ತೊಂದರೆಯಾಗುತ್ತಿದೆ. ಇದನ್ನು ಹದಿನೈದು ದಿನಗಳ ಒಳಗಾಗಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ […]

ಉಡುಪಿ:ಹವಾಮಾನ ವೈಪರಿತ್ಯಗಳ ನಿರ್ವಹಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಚಂಡಮಾರುತ, ಪ್ರವಾಹ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಜೀವನೋಪಾಯ ಮತ್ತು ಆರ್ಥಿಕತೆಯನ್ನು ಬೆಂಬಲಿಸುವ ಅನೇಕ ಉತ್ಪನ್ನಗಳನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದ್ದು, ಕೃತಕ ಬುದ್ಧಿಮತ್ತೆ ಸೇರಿದಂತೆ ಮತ್ತಿತರ ತಂತ್ರಜ್ಞಾನಗಳ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ತ್ಯಾಜ್ಯಗಳ ಅಸಮರ್ಪಕ ವಿಲೇವಾರಿಯು ಪರಿಸರದೊಂದಿಗೆ ಮಾನವನ ಜೀವನಕ್ಕೆ ಹಾನಿಯುಂಟು ಮಾಡುತ್ತಿವೆ. […]