ಉಡುಪಿ & ಬ್ರಹ್ಮಾವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ವತಿಯಿಂದ ಪ್ರಸಕ್ತ ಸಾಲಿನ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಆಗಸ್ಟ್ 17 ರಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಅಂದು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಗಳ ವಿವರ: ಪುರುಷರಿಗೆ : ಅಥ್ಲೆಟಿಕ್ಸ್ (100 ಮೀ, 200 ಮೀ, 400 ಮೀ, 800 ಮೀ, […]
ಉಡುಪಿ:ಜನನ, ಮರಣ ದಾಖಲೆಗಳ ಸಮರ್ಪಕ ನಿರ್ವಹಣೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

ಉಡುಪಿ: ಸಾರ್ವಜನಿಕರಿಗೆ ಜನನ, ಮರಣ ದಾಖಲೆಗಳು ತಮ್ಮ ಶೈಕ್ಷಣಿಕ ಹಾಗೂ ಆರ್ಥಿಕ ವ್ಯವಹಾರಗಳು ಸೇರಿದಂತೆ ಮತ್ತಿತರ ಕೆಲಸ ಕಾರ್ಯಗಳಿಗೆ ಅತ್ಯವಶ್ಯಕ. ಇವುಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಬುಧವಾರ ನಗರದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರಕಾರ ನಾಗರಿಕ ನೋಂದಣಿ ಪದ್ಧತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ಕಡ್ಡಾಯವಾಗಿ […]
ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಯುವಕ ಮೃತ್ಯು

ಕೊಲ್ಲೂರು: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಕೊಲ್ಲೂರು ನಿವಾಸಿ ನಟೇಶ್ ಬಾಳಿಗ (36) ಎಂದು ಗುರುತಿಸಲಾಗಿದೆ. ಇವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಭಾರೀ ಮಳೆಯ ಕಾರಣ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಅಮೇಲೆ ಹುಡುಕಾಡಿದಾಗ ನಟೇಶ್ ಮೃತದೇಹವು ಕೊಲ್ಲೂರಿನ ಮಾವಿನ ಕಾರು ಸೇತುವೆ ಬಳಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ […]
ಹೆಬ್ರಿ: ವಿಷದ ಹಾವು ಕಚ್ಚಿ ಬಾಲಕಿ ಮೃತ್ಯು

ಅಮಾಸೆಬೈಲು: ವಿಷದ ಹಾವು ಕಚ್ಚಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಆ.3ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಹೆಬ್ರಿ ಶೇಡಿಮನೆ ಗ್ರಾಮದ ಶ್ರೀಧರ ಎಂಬವರ ಮಗಳು ಸನ್ನಿಧಿ (8) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಕಾರಣ ತಂದೆಯ ಜೊತೆ ತೋಟದಲ್ಲಿದ್ದ ಸನ್ನಿಧಿಗೆ ವಿಷಕಾರಿ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಆಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.
ಕಂಬಳ ಕೋಣಗಳೇ ಇಲ್ಲಿ ರಿಯಲ್ ಹೀರೋಗಳು! “ಕರಾವಳಿ” ಸಿನಿಮಾದ ಟೀಸರ್ ನೋಡಿ ಖುಷಿಯಿಂದ ದಂಗಾದ್ರು ಪ್ರೇಕ್ಷಕರು ! ಅಂತದ್ದೇನಿದೆ ಟೀಸರ್ ನಲ್ಲಿ?

ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು. ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ […]