ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಸ್ಪರ್ಧೆ: ಆಳ್ವಾಸ್ ಧೀಂಕಿಟ ಕೇಂದ್ರ ಪ್ರಥಮ ಒಂದು ಲಕ್ಷ ಬಹುಮಾನ ಪಡೆದ ತಂಡ

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಇದರ ದಶಮ ಸಂಭ್ರಮದ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡ್ನಲ್ಲಿ 15 ವರ್ಷದಿಂದ 25 ವರ್ಷದೊಳಗಿನ ಯುವ ಪ್ರತಿಭೆಗಳಿಗಾಗಿ ಏರ್ಪಡಿಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡವು ಪ್ರಥಮ ಬಹುಮಾನವನ್ನು ಪಡೆಯಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿಸಿದ, ಶೇಖರ ಶೆಟ್ಟಿಗಾರ್ ಮತ್ತು ಆದಿತ್ಯ ಅಂಬಲಪಾಡಿ ನಿರ್ದೇಶನದಲ್ಲಿ ‘ಸತಿ ಉಲೂಪಿ’ ಪ್ರಸಂಗ ಪ್ರದರ್ಶನವನ್ನು ನೀಡಿ, ಒಂದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಪ್ರಥಮ ಬಹುಮಾನವನ್ನು ಆಳ್ವಾಸ್ ಧೀಂಕಿಟ […]

ಮಣಿಪುರ ಪ್ರವಾಹ: 10 ಸಾವಿರ ಮನೆಗಳಿಗೆ ಹಾನಿ, 56 ಸಾವಿರ ಜನರಿಗೆ ಸಂಕಷ್ಟ; ಹಲವು ಪ್ರದೇಶಗಳು ಜಲಾವೃತ.

ಇಂಫಾಲ: ಮಣಿಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳ ಉಕ್ಕಿ ಹರಿಯುತ್ತಿದ್ದು, ಒಡ್ಡುಗಳು ಒಡೆದು ಹಠಾತ್‌ ಪ್ರವಾಹ ಸಂಭವಿಸಿದೆ. ಪರಿಣಾಮ 56 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, 10,477 ಮನೆಗಳು ಹಾನಿಗೀಡಾಗಿವೆ ಎಂದು ಸರ್ಕಾರ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪ್ರವಾಹದಿಂದ ಒಟ್ಟು 56,516 174 ಜನರು ತೊಂದರೆಗೀಡಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ 2,913 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರ ವ್ಯಕ್ತಿಯೊಬ್ಬರು ಇಂಫಾಲದ ಪೂರ್ವ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. […]

ಉಡುಪಿ: ಆತ್ರಾಡಿ ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು.

ಉಡುಪಿ: ಅತ್ರಾಡಿ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆತ್ರಾಡಿ ನಿವಾಸಿ ಅಬೂಬಕ್ಕರ್‌ (50) ಅವರನ್ನು ಆರೋಪಿಗಳಾದ ಹಿರಿಯಡಕ ಬೊಮ್ಮಾರಬೆಟ್ಟು ನಿವಾಸಿ ಸಂದೇಶ್‌ (31) ಹಾಗೂ ಪಾಪೂಜೆ ದರ್ಕಾಸ್‌ ನಿವಾಸಿ ಸುಶಾಂತ್‌ (32) ಅವರು ದ್ವಿಚಕ್ರವಾಹನದಲ್ಲಿ ಆಗಮಿಸಿ ಮೇ 1ರಂದು ರಾತ್ರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಅನಂತರ […]

ಕಾರ್ಕಳ: ಜೆ.ಇ.ಇ ಅಡ್ವಾನ್ಸ್ಡ್ 2025 ಫಲಿತಾಂಶ: ಕೆ.ಸಿ.ಇ.ಟಿ. ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದ ತರುಣ್ ಸುರಾನಾನಿಗೆ ರಾಷ್ಟ್ರ ಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ 2403 ನೇ ರ‍್ಯಾಂಕ್

ಗಣಿತನಗರ:ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಅಡ್ವನ್ಸ್ಡ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಐವರು ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗಿನ ರ‍್ಯಾಂಕ್ ಗಳಿಸಿದ್ದಾರೆ. ಜನರಲ್ ಮೆರಿಟ್ ನಲ್ಲಿ ತರುಣ್ ಎ.ಸುರಾನಾ (2403) (ಕೆಟಗರಿಯಲ್ಲಿ 429 ರ‍್ಯಾಂಕ್),ಮನೋಜ್ ಕಾಮತ್( 3911 ) (ಜನರಲ್ ಇ.ಡಬ್ಲು.ಎಸ್ 39 ರ‍್ಯಾಂಕ್). ಆಕಾಶ್ಪ್ರಭು (5105 ), ಚಿಂತನ್ ಮೇಗಾವತ್ (6375 )(ಕೆಟಗರಿಯಲ್ಲ್ಲಿ142 ರ‍್ಯಾಂಕ್),ವಿಷ್ಣು ಧರ್ಮಪ್ರಕಾಶ್(8565) ರ‍್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಎ.ಪಿ.ಜಿ.ಇ.ಟಿ ಯ ಅಧ್ಯಕ್ಷರಾದ […]

ರಾಯಲ್ ಚಾಲೆಂಜರ್ಸ್ ಬೆಂಗಳೂರು – ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ 2025ರ ಫೈನಲ್ ಪಂದ್ಯ; ಆರ್ ಸಿಬಿ’ಗೆ ಸಿಗುತ್ತಾ ಈ ಸಲ ಕಪ್.?

ಬೆಂಗಳೂರು: ಇಂದು (ಜೂ.3) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಅಭಿಮಾನಿಗಳು ಹೊಸ ಚಾಂಪಿಯನ್ ತಂಡವನ್ನು ನೋಡಲಿದ್ದಾರೆ. ರೆಡ್‌ – ರೆಡ್ ಫೈಟ್‌ನಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ವಿರಾಟ್‌ ಕೊಹ್ಲಿಗಾಗಿ ಆರ್‌ಸಿಬಿ ಆಟಗಾರರು ಪ್ರತಿ ಪಂದ್ಯದಲ್ಲಿಯೂ ಅದ್ಭುತ […]