ಉದ್ಯಾವರ: ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೇರಿದ ಎಕ್ಸ್ ಯುವಿ ಕಾರು- ಮೂವರಿಗೆ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ರಾ.ಹೆ. 66ರ ಉದ್ಯಾವರದ ಕಿಯಾ ಶೋರೂಮ್ ಬಳಿ ಸಂಭವಿಸಿದೆ. ಮಂಗಳೂರಿನಿಂದ ಹರಿಯಾಣಕ್ಕೆ ತೆರಳುತ್ತಿದ್ದ ಎಕ್ಸ್ ಯುವಿ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಡಿವೈಡರ್ ಮೇಲಿನ ಕ್ರಾಶ್ ಗಾರ್ಡ್ ಸಹಿತ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಮಂಗಳೂರು: ನೀರಿನ ಟ್ಯಾಂಕ್’ನಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ.

ಮಂಗಳೂರು, ಜೂನ್ 05: ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ರಮೇಶ್ ರೈ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ನಗರಸಭೆ ಬಿಜೆಪಿ ಸದಸ್ಯರಾಗಿದ್ದ ರಮೇಶ್ ರೈ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಪಾಣಿ ಮಂಗಳೂರು ಸೇತುವೆಯ ಬಳಿ ರಮೇಶ್ ರೈ ಮೊಬೈಲ್ ಮತ್ತು ಬೈಕ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಇಂದು (ಜೂನ್ 05) ಣೆ ಮಂಗಳೂರಿನ ಸೇತುವೆ ಬಳಿಯ ನೀರಿನ ಟ್ಯಾಂಕಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿನ […]

ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ

ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ನಡೆದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ದುರ್ಘಟನೆ ವಿಷಯದಲ್ಲಿ ರಾಜಕಾರಣ ನಡೆಸುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಈ ದುರಂತವನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಘಟನೆಯು ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಎಂದು ಹೇಳಿದರು. […]

ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮುಲ್ಕಿ ಮೂಲದ ಅಕ್ಷತಾ ಮೃತ್ಯು.

ಕಾರವಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಿದ್ದಾಪುರದ ಅಕ್ಷತಾ (27) ಮೃತಪಟ್ಟಿದ್ದಾರೆ. ಆರ್‌ಸಿಬಿ ಟೀಶರ್ಟ್‌ನಿಂದ ಪತ್ನಿಯ ಗುರುತನ್ನು ಗಂಡ ಆಶಯ್ ಪತ್ತೆ ಹಚ್ಚಿದರು. ಮೂಲತಃ ಮಂಗಳೂರು ಮೂಲ್ಕಿಯ ಅಕ್ಷತಾ, ಸಿ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾಶಾಲಿ ಯುವತಿ. ಒಂದು ವರ್ಷದ ಹಿಂದೆ ಸಿದ್ದಾಪುರದ ಇಂಜಿನಿಯರ್ ಆಶಯ್ ಅವರನ್ನು ವಿವಾಹವಾಗಿದ್ದಳು. ಇಬ್ಬರೂ ಆರ್‌ಸಿಬಿ ಅಭಿಮಾನಿಗಳಾಗಿ, ರೋಡ್‌ ಶೋದಲ್ಲಿ ಪಾಲ್ಗೊಳ್ಳಲು ರಜೆ ತೆಗೆದುಕೊಂಡು ಟೀಶರ್ಟ್ ಧರಿಸಿ ಹೊರಟಿದ್ದರು. ರೋಡ್ ಶೋ ರದ್ದಾದ ಕಾರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದ […]

ಭೂಕುಸಿತದಂತಹ ದುರಂತಕ್ಕೆ ಪರಿಸರದ ಮೇಲಿನ ನಿರಂತರ ದಾಳಿಯೇ ಕಾರಣ

ಉಡುಪಿ: ಪ್ಲ್ಯಾಸ್ಟಿಕ್ ಬಳಕೆಯಿಂದ ಜನರ‌ ಆರೋಗ್ಯ ಹಾಗೂ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ. ಹೀಗಾಗಿ ಮರುಬಳಕೆಗೆ ಯೋಗ್ಯವಾದ ಪ್ಲ್ಯಾಸ್ಟಿಕ್ ಅನ್ನು ಮಾತ್ರ ಬಳಸಬೇಕು. ಏಕಬಳಕೆಯ ಪ್ಲ್ಯಾಸ್ಟಿಕ್ ಅನ್ನು ಬಳಸಬಾರದು. ಪರಿಸರ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು. ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ […]