ಬೆಳ್ತಂಗಡಿ: ಜೂ.7ರಿಂದ ಗಡಾಯಿಕಲ್ಲು, ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಅನುಮತಿ

ಬೆಳ್ತಂಗಡಿ : ಗಡಾಯಿಕಲ್ಲು (ಜಮಲಾಬಾದ್ ಗಡ) ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಜೂ.7ರಿಂದ ಎಂದಿನಂತೆ ಪ್ರವೇಶ ಮಾಡಲು ಅನುಮತಿ ನೀಡಲಾಗಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ನದಿ ಹಳ್ಳಗಳು ಉಕ್ಕಿ ಹರಿದು ಒಳ ಹರಿವು ಜಾಸ್ತಿ ಇದ್ದುದ ರಿಂದ ಪ್ರವಾಸಿಗರ ಚಾರಣಕ್ಕೆ ಮೇ 31ರಂದು ಮುಂದಿನ ಆದೇಶದವರೆಗೆ ಪ್ರವೇಶವನ್ನು ನಿಷೇಧ ಮಾಡಿ […]
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ

ಉಡುಪಿ:ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.6,7,8,9 ನೇ ಕ್ಲಾಸ್ ಫೈಲ್ ಆದವರು ನೇರವಾಗಿ SSLC ಬರೆಯಲು ಅವಕಾಶ ಮತ್ತು 1st ಪಿಯುಸಿ ಫೈಲ್ ಆದವರು ನೇರವಾಗಿ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಕಲಿಯುವ ಅವಕಾಶ, ಮತ್ತು 1ರಿಂದ 10 ನೇ ತರಗತಿಯವರೆಗೆ ಟ್ಯೂಷನ್ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಉಡುಪಿ- 8971588367
ಮಣಿಪಾಲ: ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ, ಘೋಷ ವಾಕ್ಯ ರಚನಾ ಸ್ಪರ್ಧೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರವು ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ , ಘೋಷ ವಾಕ್ಯ ರಚನಾ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯೂ ಎಲ್ಲರಿಗೂ ಮುಕ್ತವಾಗಿದ್ದು , ಸಾರ್ವಜನಿಕರು, ಮಕ್ಕಳು ವಯಸ್ಸಿನ ಭೇದವಿಲ್ಲದೆ ಕಳುಹಿಸಬಹುದು. ವಿಷಯ: ರಕ್ತ ನೀಡಿ, ಭರವಸೆ ನೀಡಿ: ಒಟ್ಟಾಗಿ ನಾವು ಜೀವ ಉಳಿಸೋಣ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಕಳುಹಿಸಬಹುದು. ಎರಡೂ ಭಾಷೆಯ ವಿಜೇತರಿಗೆ ಪ್ರತ್ಯೇಕ ಬಹುಮಾನವಿದೆ. ಘೋಷ ವಾಕ್ಯ ಕಳುಹಿಸಲು ಕೊನೆಯ ದಿನಾಂಕ 10ನೇ ಜೂನ್ 2025. ವಿಜೇತರು […]
ಉಡುಪಿ:ರಸ್ತೆ ಅಗಲೀಕರಣ ಕಾಮಗಾರಿ : ರಸ್ತೆ ಸಂಚಾರ ನಿಷೇಧ ಅವಧಿ ವಿಸ್ತರಣೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬೆಟ್ಟು-ಪಟ್ಲ ರಸ್ತೆಯ ಬೈಲುಗದ್ದೆ ಬಳಿಯ ರಸ್ತೆ ಮಾರ್ಗದಅಗಲೀಕರಣ ಕಾಮಗಾರಿ ಈಗಾಗಲೇ ಕೈಗೊಂಡಿದ್ದು, ಜಿಲ್ಲೆಯಲ್ಲಿ ಅಕಾಲಿಕ ಮಳೆ ಪ್ರಾರಂಭವಾಗಿರುವುದರಿಂದ ಕಾಮಗಾರಿಯುಅಪೂರ್ಣವಾಗಿರುವುದರಿಂದ, ಸದ್ರಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಆದೇಶಿಸಿದ್ದ ಅಧಿಸೂಚನೆಯನ್ನು ಸಾರ್ವಜನಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221(ಎ)(2) ಮತ್ತು (5) […]
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ‘ಬಕ್ರೀದ್ ಹಬ್ಬ’ ಆಚರಣೆ

ಉಡುಪಿ: ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಈದುಲ್ ಅಝಾ(ಬಕ್ರೀದ್) ಹಬ್ಬವನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಿದರು. ಉಡುಪಿ ನಗರ ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಮರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ […]