AIMIT ಕೇಂದ್ರ ಮತ್ತು IBM ನಡುವಿನ ತಂತ್ರಜ್ಞಾನ ಮತ್ತು ನಿರ್ವಹಣಾ ಶಿಕ್ಷಣದ ಉನ್ನತಿಗಾಗಿ ಸಹಿ

ಮಂಗಳೂರು: ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), AIMIT ಕೇಂದ್ರ ಮತ್ತು IBM ನಡುವಿನ ಒಡಂಬಡಿಕೆಯನ್ನು 2025ರ ಜುಲೈ 03ರಂದು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ AIMIT ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, IBM ನ ಸಾಫ್ಟ್‌ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, IBMನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್‌ಪಾಥ್‌ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ AIMITನ ಡೀನ್‌ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ […]

ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್: ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ.

ಕಿರಿಮಂಜೇಶ್ವರ: ಜೂನ್ 2 ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಗಣಹೋಮ ಮತ್ತು ವಿದ್ಯಾ ಸರಸ್ವತಿ ಹೋಮದೊಂದಿಗೆ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವು ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು. ಪುಟಾಣಿ ಮಕ್ಕಳನ್ನು ಭವ್ಯ ಮೆರವಣಿಗೆಯಿಂದ ಶಾಲೆಗೆ ಬರಮಾಡಿಕೊಳ್ಳಲಾಯಿತು. ಶಾಲಾ ಪ್ರಾರಂಭೋತ್ಸವವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀಯುತ ಗಣೇಶ್ ಮೊಗವೀರ ಅವರು ಶಿಕ್ಷಣ ಕೇವಲ ನಾಲ್ಕು ಗೋಡೆಯ ನಡುವಿನ ಪಾಠ ಪ್ರವಚನಕ್ಕೆ ಸೀಮಿತವಾಗಿರದೆ ಮಕ್ಕಳನ್ನು ಕ್ರೀಡೆ ಸಾಂಸ್ಕೃತಿಕ ರಂಗದಲ್ಲಿಯೂ ಸಜ್ಜುಗೊಳಿಸುವ ಪಣತೊಟ್ಟಿದ್ದೇವೆ, ವಿದ್ಯಾರ್ಥಿಗಳಿಗೆ […]

ಉಡುಪಿ: ಬೈಕ್ ಗೆ ಕಾರು ಡಿಕ್ಕಿ; ಎಂಬಿಎ ವಿದ್ಯಾರ್ಥಿ ಸಾವು

ಉಡುಪಿ: ಬೈಕ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ ಕಿನ್ನಿಮುಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಮೃತ ಸವಾರನನ್ನು ಭಜನೆ ಹಾಡುಗಾರ ಮತ್ತು ತಬಲ ವಾದಕ ಕಿದಿಯೂರಿನ ಸಂಕೀರ್ತನ್ (28) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ – 66ರಲ್ಲಿ ಸಾಗುತ್ತಿದ್ದ ಕಾರನ್ನು ಅದರ ಚಾಲಕ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೂಡ್ಸ್ ವಾಹನವೊಂದಕ್ಕೆ ಮತ್ತು ಅದರ ಹಿಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಕಾರನ್ನು […]

ಯುಪಿಎಂಸಿ’ಯಲ್ಲಿ ಉಪೇಂದ್ರ ಪೈ ಪ್ರೀಮಿಯರ್ ಲೀಗ್ – ವಾಲಿಬಾಲ್ ಪಂದ್ಯಾಟ.

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮೇ 27ರಂದು ಯುಪಿಎಲ್ ಅಂತರ್ಕಕ್ಷ್ಯಾ ವಾಲಿಬಾಲ್ ಪಂದ್ಯಾಟ ಜರಗಿತು.ಕಾಲೇಜಿನ ಹಳೆ ವಿದ್ಯಾರ್ಥಿ ಮುಕುಂದ ರಿಟೈಲರ್ಸ್ ಮಾಲಕ ಮುಕುಂದ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ರೀಡಾ ಜರ್ಸಿ ಮತ್ತು ಫಲಕ ಅನಾವರಣಗೊಂಡಿತು.ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನ […]

ಉಡುಪಿ: ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಿ.ಕೆ. ರಾಜೇಂದ್ರ, ವಿಜಯಶ್ರೀ ಸಬರದ ಆಯ್ಕೆ

ಉಡುಪಿ: ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕವಿಖ್ಯಾತರಾದ ಪ್ರೊ.ಕು.ಶಿ.ಹರಿದಾಸ ಭಟ್ ಶತಮಾ ನೋತ್ಸವ ಜಾನಪದ ಪ್ರಶಸ್ತಿ-2024ಕ್ಕೆ ನಿವೃತ್ತ ಪ್ರಾದ್ಯಾಪಕರಾದ ಡಾ.ಡಿ.ಕೆ. ರಾಜೇಂದ್ರ ರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ-2025ಕ್ಕೆ ಜಾನಪದ ವಿದ್ವಾಂಸೆ, ಲೇಖಕಿ ಡಾ.ವಿಜಯಶ್ರೀ ಸಬರದ ಅವರು ಆಯ್ಕೆ ಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಈ ಎರಡೂ […]