ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು.

ಬಂಟ್ವಾಳ: ತಾಲೂಕಿನ ಕಾರಿಂಜದಲ್ಲಿ ಸ್ನಾನಕ್ಕೆಂದು ಕೆರೆಗೆ ಇಳಿದ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಕಾರಿಂಜ ಕಂಗಿಹಿತ್ಲು ನಿವಾಸಿ ಶ್ರೀಧರ್ ಮೂಲ್ಯ ಅವರ ಮಗ ಚೇತನ್ (19) ಎಂದು ಗುರುತಿಸಲಾಗಿದೆ. ಚೇತನ್ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ದೇವಾಲಯದ ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾನೆ ಎನ್ನಲಾಗಿದೆ. ಜೊತೆಯಲ್ಲಿ ಇದ್ದ ಪ್ರಶ್ವಿತ್ ಗೆ ಈಜು ತಿಳಿಯದ ಕಾರಣ ಆತ ಸ್ಥಳೀಯರಿಗೆ ಪೋನ್ ಮಾಡಿದ್ದಾನೆ. ಕೂಡಲೇ ಸ್ಥಳೀಯರು ಸೇರಿದ್ದು ಕೆರೆಗೆ […]
ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ ನಿಧನ.

ಬೆಳ್ತಂಗಡಿ: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಶನಿವಾರ ರಾತ್ರಿ ಹೃದಯಾಘಾತದಿಂದ ಮಂಗಳೂರಿನ ಮನೆಯಲ್ಲಿ ನಿಧನರಾದರು. ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕ ರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ಅವರು ನಿರ್ವಹಿಸಿದ್ದರು. ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು.
ಉಡುಪಿ:ರಂಗ ಶಿಕ್ಷಣ ಡಿಪ್ಲೋಮಾ : ಅರ್ಜಿ ಆಹ್ವಾನ

ಉಡುಪಿ: ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿರುವ ಶ್ರೀ ಶಿವಕುಮಾರ ರಂಗಪ್ರಯೋಗಶಾಲೆಯ ಪ್ರಸಕ್ತ ಸಾಲಿನರಂಗಶಿಕ್ಷಣ (ಡಿಪ್ಲೋಮಾ ಇನ್ ಡ್ರಾಮಾ ಆರ್ಟ್ಸ್) ಪ್ರವೇಶಾತಿಗೆ ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣ ಹಾಗೂ ಮೇಲ್ಪಟ್ಟುವಿದ್ಯಾರ್ಹತೆ ಹೊಂದಿರುವ, ರಂಗಭೂಮಿಯಲ್ಲಿ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳಿಂದ ವೆಬ್ಸೈಟ್ https://www.theatreschoolsanehalli.org ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರಿಂದ ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಗ್ರಂಥ ಭಂಡಾರ ಹಾಗೂ ದೃಶ್ಯ, ಶ್ರವ್ಯ ಪರಿಕರಗಳ ಅನುಕೂಲತೆ ಇದ್ದು, ರಂಗಶಾಲೆಯ ವಿದ್ಯಾರ್ಥಿಗಳಿಗೆ ಭಾರತೀಯ ರಂಗಭೂಮಿ, ಕನ್ನಡ […]
ಉಡುಪಿ:ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ : ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2022-23 ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯ ಶೇ. 5 ರ ವಿಕಲಚೇತನರ ಕಲ್ಯಾಣ ಕಾರ್ಯಕ್ರಮದ ಅನುದಾನದಡಿ ಸಾಧನ ಸಲಕರಣೆಗಳನ್ನು ಪಡೆಯಲು ದೈಹಿಕ ವಿಕಲತೆಯ ಬಗ್ಗೆ ಜಿಲ್ಲಾ ಸರ್ಜನ್ರವರಿಂದ ಪಡೆದ ಪ್ರಮಾಣ ಪತ್ರ, ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ ಹಾಗೂಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ:ವಿಕಲಚೇತನರ ಕಲ್ಯಾಣ ಕಾರ್ಯಕ್ರಮ : ಅರ್ಜಿ ಆಹ್ವಾನ

ಉಡುಪಿ: ನಗರಸಭಾ ನಿಧಿಯ ಶೇ. 5 ರ ವಿಕಲಚೇತನರ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ ರಾಜ್ಯ ಹಾಗೂರಾಷ್ಟ್ರೀಯ ಮಟ್ಟದ ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ, ಶಿಕ್ಷಣ, ಸರ್ಕಾರಿ ಕಛೇರಿಗಳು, ಸಮುದಾಯ ಭವನ ಕಟ್ಟಡಗಳಿಗೆ ಜಾರುಹಾದಿ ಹಾಗೂ ವಿಕಲಚೇತನ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲು ಇಚ್ಚಿಸುವ ಆಸಕ್ತರು/ಸಂಸ್ಥೆಗಳು ನಿಗದಿತ ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ಪ್ರಸಕ್ತ ಸಾಲಿನ ತೆರಿಗೆ ಪಾವತಿ ಚಲನ್ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಪಡಿತರ […]