Mangalore: ಮಂಗಳೂರಿನಲ್ಲಿ ಹೈಟೆಕ್ ಬಸ್ ನಿಲ್ದಾಣ, ಇಲೆಕ್ಟ್ರಿಕ್ ಬಸ್ ಅಳವಡಿಸಲು ಸಾರಿಗೆ ಸಚಿವರಿಗೆ ಮಂಜುನಾಥ ಭಂಡಾರಿ ಒತ್ತಾಯ

ಮಂಗಳೂರು:ನಗರ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ. ಮಂಗಳೂರು ನಗರವು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಚಟುವಟಿಗಳಿಂದಾಗಿ ಕರ್ನಾಟಕದ ಬಂದರು ನಗರಿಯಾಗಿ ಹಾಗೂ ಪ್ರಮುಖ ರೇವು ಪಟ್ಟಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ದೇಶ -ವಿದೇಶಗಳಿಂದಲೂ ಸಾವಿರಾರು […]

ಕಾರ್ಕಳ:CATC ಶಿಬಿರದಲ್ಲಿ NCC ಕ್ಯಾಡೆಟ್‌ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ.

ಕಾರ್ಕಳ: 21 ಕರ್ನಾಟಕ ಬೆಟಾಲಿಯನ್‌ NCC ಅಯೋಜಿಸಿದ ಹತ್ತು ದಿನಗಳ ಕಂಬೈನ್ಡ್‌ ಆನ್ಯುವಲ್‌ ಟ್ರೈನಿಂಗ್‌ ಕ್ಯಾಂಪ್‌ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು. ಈ ತರಬೇತಿ ಶಿಬಿರದಲ್ಲಿ592 ಎನ್.ಸಿ.ಸಿ ಕ್ಯಾಡೆಟ್‌ಗಳು ಭಾಗಹಿಸಿದ್ದು ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ (ಕಸರತ್ತು) , ಫೈರಿಂಗ್‌,ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು. ಯುವ ಆಪದ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ ನಿರ್ವಹಣಾ ಪ್ರಾಧಿಕರ ಪ್ರತಿನಿಧಿಗಳಿಂದಆಯ್ದ ಕೆಡೆಟ್‌ಗಳಿಗೆ ವಿಪತ್ತು ಪರಿಹಾರ ನಿರ್ವಹಣೆಯ ತರಬೇತಿಯನ್ನು ನೀಡಲಾಯಿತು.ಮಂಗಳೂರಿನ ಪೋಲಿಸ್‌ ಕಮಿಷನರ್‌ […]

ಯಾವುದೇ ಬ್ಯಾಂಕ್ ಸಾಲ ಸ್ವಾಧೀನ ಸೌಲಭ್ಯ ಪಡೆಯಲು ಓಂ ಗಣೇಶ್ ಎಂಟರ್ಪ್ರೈಸಸ್ ಒಂದು ಉತ್ತಮ ಆಯ್ಕೆ

ಉಡುಪಿ:ಓಂ ಗಣೇಶ್ ಎಂಟರ್ಪ್ರೈಸಸ್ ನಲ್ಲಿ ಯಾವುದೇ ಬ್ಯಾಂಕ್ ಸಾಲ ಸ್ವಾಧೀನ ಸೌಲಭ್ಯ ಲಭ್ಯವಿದೆ. ಒಂದು ಗ್ರಾಂ.ಗೆ 7500/-. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಮಾಂಡವಿ ಮೆರಿಡಿಯನ್ ಕೋರ್ಟ್ ರೋಡ್, ಉಡುಪಿ. 0820-4291111, 9900062449, 9900513680

ಕಾರ್ಕಳ: ಮಗುವಿಗೆ ಐಸ್ ಕ್ರೀಂ ತರಲು ಹೋಗಿದ್ದ ತಂದೆ ಅಪಘಾತದಿಂದ ಮೃತ್ಯು.

ಕಾರ್ಕಳ: ಹುಟ್ಟುಹಬ್ಬದ ದಿನವೇ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ಪರಪು ನಿವಾಸಿ, ಆಟೋ ಚಾಲಕ, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಮೃತಪಟ್ಟವರು. ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲೆಂದು ಮನೆಯಿಂದ ಪೇಟೆಗೆ ಬಂದಿದ್ದ ಸುಬ್ರಹ್ಮಣ್ಯ ಅವರು ವಾಪಸ್‌ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಸಹಿತ ಹೊಳೆಗೆ ಬಿದ್ದಿದ್ದಾರೆ‌‌. ರಾತ್ರಿ 10:30ರ ವೇಳೆ […]

ಹೆಬ್ರಿ: ಬೆಂಕಿ ತಗುಲಿ ಪತಿ ಮೃತ್ಯು ಪ್ರಕರಣ: ಪತ್ನಿಯಿಂದ ಅತ್ತೆ, ಮಾವನ ವಿರುದ್ಧ ದೂರು ದಾಖಲು

ಹೆಬ್ರಿ: ಹೆಬ್ರಿ ತಾಲೂಕಿನ ಮಂಡಾಡಿಜೆಡ್ಡು ಎಂಬಲ್ಲಿನ ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸ್ಫೋಟಕ ಸಂಗತಿ ಬಯಲಾಗಿದೆ. ಮೃತಪಟ್ಟ ಅನೂಪ್ ನಾಯಕ್ ಅವರ ಪತ್ನಿ ಬೆಂಕಿಯ ರಹಸ್ಯ ಬಾಯಿ ಬಿಟ್ಟಿದ್ದು, ಗ್ಯಾಸ್ ರಿಫಿಲ್ಲಿಂಗ್ ಸಂದರ್ಭದಲ್ಲಿ ಬೆಂಕಿ ತಗುಲಿ ತನ್ನ ಗಂಡನ ಸಾವನ್ನಪ್ಪಿದ್ದು ಇದಕ್ಕೆ ಅತ್ತೆ ಹಾಗೂ ಮಾವನೇ ಕಾರಣ ಎಂದು ಆರೋಪಿಸಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಹಿನ್ನೆಲೆ : ಎ.11ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳೊಂದಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ […]