242 ಪ್ರಯಾಣಿಕರನ್ನು ಹೊತ್ತು ಗುಜರಾತಿನ ಅಹಮದಾಬಾದಿನಿಂದ ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆಗಿ 20 ನಿಮಿಷದಲ್ಲಿ ಪತನ

ಅಹಮದಾಬಾದ್: ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂ.12) ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.ಇದೇ ವಿಮಾನದಲ್ಲಿ ಗುಜರಾತಾ ನ ಮಾಜಿ ಸಿಎಂ ವಿಜಯ ರೂಪಾಣಿ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಹಮದಾಬಾದ್‌ನಲ್ಲಿ 242 ಪ್ರಯಾಣಿಕರಿದ್ದ ಏ‌ರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಗ್ರೀಮ್‌ಲೈನ‌ರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 […]

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ‌ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ನಗರದ ಗುಂಡಿಬೈಲು, ಬೈಲಕೆರೆ, ಮೂಡನಿಡಂಬೂರು, ಬನ್ನಂಜೆ, ಪಿತ್ರೋಡಿ, ಕಡೆಕಾರು, ಬೊಳ್ಜೆ ಪರಿಸರದಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಆತಂಕ ಶುರುವಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೆ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಿಲ್ಲೆಯಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. […]

ಉಡುಪಿ: ಆತ್ರಾಡಿಯಲ್ಲಿ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ಉದ್ಘಾಟನೆ.

ಉಡುಪಿ: ಆತ್ರಾಡಿ ನಯಾರಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂಭವಿ ಹೋಟೆಲ್ ಕಾಂಪ್ಲೆಕ್ಸ್’ನಲ್ಲಿ ಹೊಸದಾಗಿ ಆರಂಭಗೊಂಡ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ಇದರ ಉದ್ಘಾಟನೆಯು ಜೂ.8 ರಂದು ನಡೆಯಿತು.ಎಂ ಎಸ್ ಡಿ ಸಿ ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಮ್ಯಾನೇಜರ್ ನೀತಾ ಶೆಟ್ಟಿ ಅವರು ನೂತನ ಬ್ಯೂಟಿ ಸ್ಟುಡಿಯೋವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಅಶ್ವಿನಿ, ಐಶ್ವರ್ಯ ಹಾಗೂ ಇತರರು ಉಪಸ್ಥಿತರಿದ್ದರು. ಗ್ರಾಹಕರಿಗೆ ಇಲ್ಲಿದೆ ಹಲವು ಸೇವೆಗಳು:◼ಎಲ್ಲಾ ರೀತಿಯ ಫೇಶಿಯಲ್‌ಗಳು◼ಹೈಡ್ರಾ ಫೇಶಿಯಲ್◼ಕೂದಲು ಕತ್ತರಿಸುವುದು◼ಪೆಡಿಕ್ಯೂರ್, ಮ್ಯಾನಿಕ್ಯೂರ್◼ವ್ಯಾಕ್ಸಿಂಗ್◼ಹುಬ್ಬುಗಳು◼ಚರ್ಮದ ಚಿಕಿತ್ಸೆಗಳು◼ಎಲ್ಲಾ […]

‘ಕಾಂತಾರ-ಚಾಪ್ಟರ್ 1’ ಚಿತ್ರದ ಮತ್ತೋರ್ವ ಕಲಾವಿದ ಹೃದಯಘಾತದಿಂದ ನಿಧನ

ಉಡುಪಿ: ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಕಾಂತಾರ: ಚಾಪ್ಟರ್ 1’ ಚಿತ್ರದ ಜೂನಿಯರ್ ಆರ್ಟಿಸ್ಟ್ ಒಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ವಿಜು ವಿಕೆ ಎಂದು ಗುರುತಿಸಲಾಗಿದೆ. ಇವರು ಕೇರಳದ ತ್ರಿಶೂರ್​ನವರು. ‘ಕಾಂತಾರ:ಚಾಪ್ಟರ್ 1’ ಸಿನಿಮಾ ಶೂಟ್​ಗಾಗಿ ಅವರು ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ. ಕೇರಳದಿಂದ ಕುಟುಂಬಸ್ಥರು ಬಂದ ಬಳಿಕ […]