ಉಡುಪಿ-ಮಂಗಳೂರಿನ ಅತಿದೊಡ್ಡ ಗ್ರೂಪ್ ಆಫ್ ಕಂಪೆನಿಯಲ್ಲಿ ಉದ್ಯೋಗವಕಾಶ!

ಬೈಲೂರು: ಮೈತ್ರಿ ಸೇವಾ ಸಂಘದ ವತಿಯಿಂದ ಸನ್ಮಾನ

ಕಾರ್ಕಳ: ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಗಣಿತ ನಗರ ಜ್ಞಾನ ಸುಧಾ ಕಾಲೇಜಿನ ವಿದ್ಯಾರ್ಥಿನಿ ಕಣಜಾರು ಹಡಂಕೋಳಿಯ ಸ್ವಸ್ತಿ ಕಾಮತ್ ಹಾಗೂ ಫಿಜಿಯೋಥೆರಫಿಯಲ್ಲಿ ದ್ವಿತೀಯ ರ್ಯಾಂಕ್ ಅನ್ನು ಪಡೆದಿರುವ ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕೌಡೂರಿನ ನಿಶಾ ಶೆಟ್ಟಿ ಇವರಿಗೆ ಜೂ.14ರಂದು ಮೈತ್ರಿ ಸೇವಾ ಸಂಘದ ಸಾಮಾನ್ಯ ಸಭೆಯಲ್ಲಿ ಶಾಲು ಹೊಂದಿಸಿ ಫಲ ಪುಷ್ಪ ಹಾಗೂ ಗೌರವಧನ ನೀಡಿ ಗೌರವಿಸಲಾಯಿತು. ವಿಕ್ರಂ ಹೆಗ್ಡೆಯವರು ಸನ್ಮಾನಿತರ ಬಗ್ಗೆ ಮಾತನಾಡಿದರು. ಈ ಸಂದರ್ಭ […]
ಉಡುಪಿ: ಯೋಗ ಸ್ಪರ್ಧೆಯಲ್ಲಿ ವಿದ್ಯೋದಯ ಶಾಲಾ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಉಡುಪಿ: CISCE ರಾಷ್ಟ್ರೀಯ ಕ್ರೀಡೆ ಮತ್ತು ಕ್ರೀಡಾಕೂಟ 2025–2026 ವಲಯ ಮಟ್ಟದ ಯೋಗ ಸ್ಪರ್ಧೆ (Z1) – ದಕ್ಷಿಣ ಕನ್ನಡ ಜಿಲ್ಲೆ ಪ್ರಾಯೋಜಿತ ಸುಳ್ಯದ ಮಾರುತಿ ಅಂತರರಾಷ್ಟ್ರೀಯ ಶಾಲೆಯಲ್ಲಿ ವಲಯ ಮಟ್ಟದ ಯೋಗ ಸ್ಪರ್ಧೆಯನ್ನು ಜೂನ್ 11, 2025 ರಂದು ನಡೆಸಲಾಗಿತ್ತು. ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದರಲ್ಲಿ 14 ವರ್ಷದೊಳಗಿನ ಯೋಗಪಟುಗಳ ವಿಭಾಗದಲ್ಲಿ ಶಾಲಾವಿದ್ಯಾರ್ಥಿನಿಯರಾದ ಶಿವಾನಿ ಶೆಟ್ಟಿ ಲಯಬದ್ಧ ಯೋಗ ಮತ್ತು ಸಾಂಪ್ರದಾಯಿಕ ಯೋಗ ಎರಡರಲ್ಲೂ ಪ್ರಥಮ ಸ್ಥಾನ ಪಡೆದರು. ಈ ಹಿಂದೆಯೂ ಶಿವಾನಿ […]
ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜುಗಳ ಪ್ರಾರಂಭೋತ್ಸವ :ಅರ್ಹ ವಿದ್ಯಾರ್ಥಿಗಳಿಗೆ 47.87ಲಕ್ಷ ರೂ.ವಿದ್ಯಾರ್ಥಿವೇತನ

ಉಡುಪಿ:ಭಗವಂತನ ಸೃಷ್ಟಿಯಲ್ಲಿ ನಾವೆಲ್ಲರೂ ವಿಭಿನ್ನರು. ನಮ್ಮಲ್ಲಿರುವ ವಿಶೇಷತೆಯನ್ನು ಅರಿತು, ಕಾಯಕವೇ ಕೈಲಾಸ ಎಂಬುದನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ ಅದನ್ನು ಸಾಧಿಸುವ ಮನೋಧೈರ್ಯನಮ್ಮಲ್ಲಿರಬೇಕು. ತಮ್ಮ ಸಾಧನೆಯನ್ನು ಹೆತ್ತವರ ಪಾದಗಳಿಗೆ ಅರ್ಪಿಸಿ ಅದರಿಂದ ಸಿಗುವ ಪರಮಸುಖವನ್ನು ಅನುಭವಿಸುವ ಶ್ರೇಷ್ಠ ಮಕ್ಕಳೆನಿಸಿಕೊಳ್ಳಿ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಯವರು ಹೇಳಿದರು. ಇವರು ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನಲ್ಲಿ ನಡೆದ ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜುಗಳು ಜಂಟಿಯಾಗಿ ಆಯೋಜಿಸಿದ ಪ್ರಾರಂಭೊತ್ಸವದಲ್ಲಿ […]
ಮೂಡುಬಿದಿರೆ:ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್ ಯೋಗಪಟುಗಳಿಗೆ 8 ಚಿನ್ನದ ಪದಕ

ಮೂಡುಬಿದಿರೆ: ಇತ್ತೀಚೆಗೆ ವಿಯೆಟ್ನಾಂನಲ್ಲಿ ಜರುಗಿದ ಎರಡನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ 8 ಯೋಗಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ 8 ಚಿನ್ನದ ಪದಕವನ್ನು ಜಯಿಸುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲಿ 8 ಅಂತರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿಯನ್ನು ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು. ಸಬ್‌ಜ್ಯೂನಿಯರ್ ವಿಭಾಗದಲ್ಲಿ ಯಶಿಕ ಹಾಗೂ ಚಂದನ – ತಾಳಬದ್ದ ಯೋಗಾಸನದಲ್ಲಿ ಚಿನ್ನ, ಕೋಮಲ – ಕಲಾತ್ಮಕ ಯೋಗಾಸನದಲ್ಲಿ ಚಿನ್ನದ ಪದಕ ಪಡೆದರು. ಜ್ಯೂನಿಯರ್ ಹುಡುಗರ ವಿಭಾಗದಲ್ಲಿ ಪ್ರಜ್ವಲ್ – ಕಲಾತ್ಮಕ ಯೋಗಾಸನ […]