ಮಣಿಪಾಲದ ಓರೇನ್ ಇಂಟರ್ನ್ಯಾಷನಲ್ ನಲ್ಲಿದೆ ನಿಮ್ಮ ವೃತ್ತಿಜೀವನವನ್ನು ಬೆಳಗಿಸುವ ‘ಸ್ಪಾ ಕೋರ್ಸ್’.!

ಮಣಿಪಾಲ: ಸ್ಪಾ ಕ್ಷೇತ್ರದಲ್ಲಿ ವೃತ್ತಿಪರರಾಗಲು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ಒಳ್ಳೊಳ್ಳೆಯ ಅವಕಾಶ ನಿಮಗಾಗಿ ಕಾದಿವೆ. ಹೌದು, ಡಿಪ್ಲೋಮಾ ಇನ್ ಸ್ಪಾ ಥೆರಪಿ, ಸರ್ಟಿಫಿಕೇಟ್ ಇನ್ ಬೇಸಿಕ್ ಸ್ಪಾ, ಡಿಪ್ಲೋಮಾ ಆಯುರ್ವೇದ, ಹೀಗೆ ವಿವಿಧ ಡಿಪ್ಲೋಮಾ ಕೋರ್ಸ್ ಗಳನ್ನು ನೀಡಲಾಗುತ್ತಿದ್ದು ಈ ಕೋರ್ಸ್ ಗಳನ್ನು ಕಲಿತರೆ ಸ್ಪಾ ಕ್ಷೇತ್ರದಲ್ಲಿರುವ ಅದ್ಬುತ ಅವಕಾಶಗಳು ನಿಮಗೆ ಸಿಗಲಿದೆ. ಎಲ್ಲಾ ಕೋರ್ಸ್ ಗಳಿಗೆ ಇಲ್ಲಿ ವಿಶೇಷ ವಿದ್ಯಾರ್ಥಿವೇತನದ ಸೌಲಭ್ಯಗಳೂ ಕೂಡ ಲಭ್ಯವಿದೆ. ಇದು ವೃತ್ತಿಜೀವನವನ್ನು ಕಟ್ಟಲು ಅನುವು ಮಾಡಿಕೊಡುತ್ತದೆ. […]
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ರಾಜೀನಾಮೆ

ಬೈಂದೂರು: ಕಳೆದ ಐದು ವರ್ಷಗಳಿಂದ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದೀಪಕ್ ಕುಮಾರ್ ಶೆಟ್ಟಿ ಶುಕ್ರವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಘಟನಾ ಪರ್ವದ ಆಶಯದಂತೆ ನನ್ನ ಸ್ವಂತ ಇಚ್ಚೆಯಿಂದ ರಾಜೀನಾಮೆ ನೀಡುತ್ತಿದ್ದು ಮುಂದಿನ ಹೊಸ ನಾಯಕತ್ವಕ್ಕೆ ಬೆಂಬಲ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಇವರು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಮೂಡ್ಲಕಟ್ಟೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 20 ಜೂನ್ 2025 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಉಪಸ್ಥಿತರಿದ್ದು ಯೋಗದಿಂದಾಗುವ ಉಪಯೋಗಗಳ ಬಗ್ಗೆ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆಂದು ತಿಳಿಸಿದರು. ಯೋಗದ ಪ್ರಾಮುಖ್ಯತೆ ಮತ್ತು ಯೋಗಾಸನ ಮಾಡಬೇಕಾದರೆ ಪಾಲಿಸಬೇಕಾದ ಕ್ರಮಗಳ ಬಗ್ಗೆ […]
ಉಡುಪಿ:ಪದಾಧಿಕಾರಿಗಳ ಆಯ್ಕೆ

ಉಡುಪಿ: ನಗರದ ಮಿಷನ್ ಕಂಪೌಂಡ್ ಬಳಿ ಇರುವ ಸಿಟಿ ಗೇಟ್ ವೇ ಅಪಾರ್ಟ್ಮೆಂಟ್ ಕಟ್ಟಡ ಸಂಕೀರ್ಣ ಸಂಘದ ಮಹಾಸಭೆಯು ರವಿವಾರ ಕಟ್ಟಡದ ಸಭಾಗ್ರಹದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಕ್ಬಾಲ್ ಹಮ್ಮಾಜಿ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರಮೀಳಾ ಜತ್ತನ್ನ ಮಹಾಸಭೆಯ ವರದಿ ಮಂಡಿಸಿದರು. ಬಳಿಕ ಸಂಘದ ಖಜಾಂಚಿ ರೇಷ್ಮಾ ತೋಟ ಆಯವ್ಯ ಯಗಳ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ 2025 – 26 ನೇ ಸಾಲೀನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಕ್ಬಾಲ್ ಹಮ್ಮಾಜಿ,ಕಾರ್ಯದರ್ಶಿಯಾಗಿ ಪ್ರಮೀಳಾ ಜತ್ತನ್ನ […]
ಉಡುಪಿಯಲ್ಲಿ ಎಸ್ ಬಿ ಐ ನ ಮಿನಿ ಗೃಹ ಸಾಲ ಕೇಂದ್ರ ಉದ್ಘಾಟನೆ.

ಉಡುಪಿ: ಉಡುಪಿ ಬನ್ನಂಜೆ ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಹಾರ ಕಚೇರಿಯ ಕಟ್ಟಡದಲ್ಲಿ ಎಸ್ ಬಿ ಐ ನ ಮಿನಿ ಗೃಹ ಸಾಲ ಕೇಂದ್ರವನ್ನು ಎಸ್ ಬಿ ಐ ಬೆಂಗಳೂರು ವೃತ್ತದ ಜನರಲ್ ಮ್ಯಾನೇಜರ್ ಶ್ರೀ ಪ್ರಫುಲ್ಲ ಕುಮಾರ ಜೇನಾ ಮತ್ತು ಮಂಗಳೂರು ಆಡಳಿತ ಕಚೇರಿಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಎಂ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪ್ರಾದೇಶಿಕ ವ್ಯವಹಾರ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಬಿ ಪ್ರಕಾಶ್ ಅಡಿಗ ಅವರು ಮಾತನಾಡಿ ಗೃಹ […]