ಉಡುಪಿ:ಮಣಿಪಾಲ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಡುಪಿ:ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಣಿಪಾಲ್ ಪ್ರಧಾನ ಅಂಚೆ ಕಚೇರಿಯಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಲಾಯಿತು. ಮಾಜಿ ಸೈನಿಕ ಹಾಗೂ ಉಡುಪಿ ದಕ್ಷಿಣ ಅಂಚೆ ಉಪ ವಿಭಾಗದ ಸಹಾಯಕ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಯೋಗ ಗುರುವಾಗಿ ಶಿಬಿರ ನಡೆಸಿದರು. ಅಂಚೆ ಕಚೇರಿಯ ಸಿಬ್ಬಂದಿಗಳು ಸಕ್ರಿಯರಾಗಿ ಭಾಗವಹಿಸಿದರು. ಪ್ರಧಾನ ಅಂಚೆ ಪಾಲಕ ಗುರುಪ್ರಸಾದ್ ಗುರು ವಂದನೆಗೈದರು.

ಖಾಸಗಿ ಕಂಪೆನಿಗಳಿಗೆ ಟಕ್ಕರ್ ಕೊಡೋಕೆ ಬಂತು BSNL 5G  ಕ್ವಾಂಟಮ್ ಸೂಪರ್ ಫಾಸ್ಟ್ ಇಂಟರ್ ನೆಟ್ !

ಸಿಮ್, ವಯರ್ ಯಾವುದೂ ಇಲ್ಲದೇ 100 mbps speed ನಲ್ಲಿ ಕಾರ್ಯನಿರ್ವಹಿಸುವ ಒಂದು ಅದ್ಬುತ ಇಂಟರ್ ನೆಟ್ ಅನ್ನು ಬಿಎಸ್ಎನ್ಎಲ್ ಶುರು ಮಾಡಿದ್ದು ಈ ಸೇವೆಗೆ ಕ್ವಾಂಟಮ್ 5G  ಎಂದು ಹೆಸರಿಡಲಾಗಿದೆ. ಈಗಾಗಲೇ ಭಾರತದ ಆಯ್ದ ಕೆಲವು ನಗರಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು ಇದೀಗ ಮೊದಲಾಗಿ ಹೈದರಾಬಾದ್ ನಲ್ಲಿ ಈ ಸೇವೆಗೆ ಬಿಎಸ್ಎನ್ಎಲ್ ಚಾಲನೆ ನೀಡಿದೆ. ವಿಡಿಯೋ ಕರೆಯಿಂದ ಹಿಡಿದು ಇಂಟರ್ನೆಟ್ ಆಧಾರಿತ ಯಾವುದೇ ಕೆಲಸನ್ನು ಕೆಲೇ ಸೆಕೆಂಡ್ ಗಳಲ್ಲಿ ಮಾಡಿಬಿಡುವ ವೇಗಧೂತ ನೆಟ್ ಇದು. […]

ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ: ಸಚಿವೆ ಹೆಬ್ಬಾಳ್ಕರ್ ಗೆ ಸಂಸದ ಕೋಟ ತಿರುಗೇಟು

ಉಡುಪಿ: ಯುಪಿಎ ಸರಕಾರದ ಅವಧಿಯಲ್ಲಿದ್ದ 33 ಸಾವಿರ ಕೋಟಿ ರೂ. ನರೇಗಾ ಬಜೆಟ್ ಈಗ 86 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ದಿನಕ್ಕೆ 150ರೂ. ಕನಿಷ್ಟ ಕೂಲಿಯನ್ನು 370ರೂ.ಗೆ ಏರಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೇಂದ್ರದಿಂದ ನರೇಗಾ ಹಣ ಬಂದಿಲ್ಲ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಪಕ್ಕೆ ಅವರು ಅವರು ಮಾಧ್ಯಮದ ಮೂಲಕ ಉತ್ತರಿಸಿದರು.ಉಡುಪಿಗೆ 7.90 ಸಾವಿರ ಮಾನವ ದಿನಗಳ […]

ಕಟಪಾಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕಟಪಾಡಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಬಿಜೆಪಿ ನಾಯಕಿ ಗೀತಾಂಜಲಿ ಸುವರ್ಣ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರವು ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ಬಡವರನ್ನು ತುಳಿಯುವ ಕೆಲಸ ಮಾಡುತ್ತಿದೆ. ರಾಜ್ಯ ಸರಕಾರ ಜಾರಿಗೆ ತಂದ ಜಟಿಲ ನಿಯಮಗಳು ಜನಸಾಮಾನ್ಯರಿಗೆ ಮಾರಕವಾಗಿವೆ. ಬಡವರಿಗೆ ಮನೆಕಟ್ಟು 9/11 ಸಿಗುತ್ತಿಲ್ಲ. ಅಕ್ರಮ ಸಕ್ರಮ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ‌. […]

ಇಸ್ರೇಲ್-ಇರಾನ್ ನಡುವೆ ಸಂಘರ್ಷ; ಇರಾನ್’ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ.

ವಿಶ್ವಸಂಸ್ಥೆ: ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇರಾನ್ ರಾಷ್ಟ್ರದ 3 ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿ ಇಸ್ರೇಲ್’ಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಶಪಥ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡುವುದಾಗಿ ಇರಾನ್ ಹೇಳಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಇರಾನ್‌ನ ರಾಯಭಾರಿ ಅಮೀರ್ ಸಯೀದ್ ಇರಾವಿನಿ ಅವರು ದಾಳಿಯ ಸಮಯ, ಸ್ವರೂಪ, ಪ್ರಮಾಣ’ ನಾವು ನಿರ್ಧರಿಸುತ್ತೇವೆಂದು ಎಂದು ಹೇಳಿದ್ದಾರೆ. ರಾಜತಾಂತ್ರಿಕತೆಯನ್ನು ನಾಶಮಾಡಲು ಅಮೆರಿಕ ನಿರ್ಧರಿಸಿದೆ. ಈಗ ರಾಜತಾಂತ್ರಿಕತೆಯ ಸಮಯ […]