ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ ನೇಮಕ

ಉಡುಪಿ: ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ (ಕೆಎಂಎಎಸ್) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಹಾರೂಗೇರಿ ಪುರಸಭೆ, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಇಂಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ‌. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಮಹಾಂತೇಶ ಅವರು, ಬಿಎಸ್ಸಿ (ಕೃಷಿ) ಪದವೀಧರರಾಗಿದ್ದಾರೆ. ಅವರು 2017ನೇ ಸಾಲಿನ ಕೆ. ಎ. ಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.

ದೀಪಿಕಾ ಎದೆಯ ಬಗ್ಗೆ ಜಾಹೀರಾತು ನಿರ್ದೇಶಕ ಹೇಳಿದ ಆ ಕೆಟ್ಟ ಡೈಲಾಗ್ ! ಕೊನೆಗೆ ದೀಪಿಕಾ ಮಾಡಿದ್ದೇನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ದೀಪಿಕಾ ಅಭಿಮಾನಿಗಳು ಸಖತ್ ಥ್ರಿಲ್ಲ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಾದ ಘಟನೆಯೊಂದರ ಕುರಿತು ಓಪನ್ ತಾಕ್ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ದೀಪಿಕಾ ಒಳಉಡುಪು ಉತ್ಪನ್ನದ ಕುರಿತು ಒಂದು ಜಾಹೀರಾತಿನ ಫೋಟೋ ಶೂಟ್ ಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಾಗ ಅಲ್ಲಿದ್ದ ಜಾಹೀರಾತು ನಿರ್ದೇಶಕರು, ಲೈಂಗಿಕವಾಗಿ ಕಮೆಂಟ್ ಮಾಡಿದ್ದು ದೀಪಿಕಾಗೆ ತೀರಾ […]

ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಹೊರಿಸಿ,ಕಾರ್ಕಳ ಬಿಜೆಪಿಯ ಪ್ರತಿಭಟನೆಯ ನಾಟಕ: ಮುನಿಯಾಲು ಉದಯಕುಮಾರ್ ಶೆಟ್ಟಿ.

ಕಾರ್ಕಳ : ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾರ್ಕಳ ಬಿಜೆಪಿ ಯುವ ಮೋರ್ಚಾ ಮುಖಂಡನಿಗೆ ತನ್ನ ಅಧಿಕಾರ ಬಳಸಿ ಆಶ್ರಯ ನೀಡುವ ಕೆಲಸನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾಡುತ್ತಿದ್ದಾರೆ ಎಂದು ಮುನಿಯಲು ಉದಯ್ ಶೆಟ್ಟಿ ಹೇಳಿದ್ದಾರೆ. ಅವರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ ರವರ ಸುಳ್ಳು ಆರೋಪ ಹಾಗೂ ಅವರ ವೈಫಲ್ಯ ಮತ್ತು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಯುವ ಮೋರ್ಚ ಮುಖಂಡನ ಬಂಧನಕ್ಕೆ […]

ಆ.1-2: ಮೂಡುಬಿದಿರೆಯಲ್ಲಿ ʼಆಳ್ವಾಸ್ ಪ್ರಗತಿ -2025 ಬೃಹತ್ ಉದ್ಯೋಗ ಮೇಳʼ

ಮಂಗಳೂರು: ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಅಯೋಜಿಸಲ್ಪಡುತ್ತಿರುವ ಹದಿನೈದನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಆಗಸ್ಟ್ 1 ಹಾಗೂ 2 ರಂದು ಮೂಡಬಿದ್ರೆಯ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2007ರಲ್ಲಿ ಪ್ರಾರಂಭವಾದ ಅಳ್ವಾಸ್ ಪ್ರಗತಿ- ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸುವಲ್ಲಿ ಶ್ರೇಷ್ಠವೇದಿಕೆಯಾಗಿ ಜನಮಾನಸದಲ್ಲಿ ಹೆಸರುವಾಸಿಯಾಗಿದೆ ಎಂದರು. […]

ಉಡುಪಿ:ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ/ ಪ.ಪಂಗಡದಕುಟುಂಬದ ಸದಸ್ಯರಿಗೆ ವಿತರಿಸಲಾದ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ನ್ನು ಪ್ರಸಕ್ತ ಸಾಲಿನಲ್ಲಿ ನವೀಕರಿಸಲಾಗುತ್ತಿದ್ದು, ಕಾರ್ಡ್ ಹೊಂದಿರುವ ಕುಟುಂಬದ ಯಾವುದಾದರೂ ಸದಸ್ಯರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮುಚ್ಚಳಿಕೆ ಪತ್ರ ಹಾಗೂ ಹಳೆ ಆರೋಗ್ಯ ಕಾರ್ಡ್ ಪ್ರತಿಯೊಂದಿಗೆ ಜುಲೈ 21 ರ ಒಳಗಾಗಿ ನಗರಸಭಾ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸುವಂತೆ ಹಾಗೂ ದಾಖಲೆ ಸಲ್ಲಿಸಿದವರ ಕಾರ್ಡ್ಗಳನ್ನು ಮಾತ್ರ ನವೀಕರಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ […]