ಉಡುಪಿ-ಮಂಗಳೂರಿನ ಪ್ರಖ್ಯಾತ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ ಮತ್ತು ಮಂಗಳೂರಿನ ಪ್ರಖ್ಯಾತ ಪೈಪ್-ಕಾರ್ಟನ್ ಪ್ರೊಡಕ್ಷನ್ ಮತ್ತು ಸ್ಟೀಲ್ ಟ್ರೇಡಿಂಗ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಕರ್ಷಕ ವೇತನದೊಂದಿಗೆ PF – ESI ಸೌಲಭ್ಯವಿದೆ. 📞7019891796,9606968198

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ವಿಲ್ಸನ್ ಎಎಸ್‌ಎಗೆ 3ನೇ ಹಡಗು ಲೋಕಾರ್ಪಣೆ

ಉಡುಪಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್(ಸಿಎಸ್‌ಎಲ್)ನ ಮಾಲಕತ್ವದ ಅಂಗಸಂಸ್ಥೆಯಾದ ಮಲ್ಪೆ ಬಂದರಿನಲ್ಲಿ ಕಾರ್ಯಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ನಾರ್ವೆಯ ವಿಲ್ಸನ್ ಎಎಸ್‌ಎ ಕಂಪೆನಿಗೆ ನಿರ್ಮಿಸುತ್ತಿರುವ 3,800 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆ ಹಡಗುಗಳ ಸರಣಿಯ ಮೂರನೇ ಹಡಗನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. ಉಡುಪಿ ಶಿಪ್‌ಯಾರ್ಡ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಡಗನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕೃತವಾಗಿ ಜಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾರ್ವೆಯ ಡ್ರೈ ಡಾಕ್ಸ್ ಆ್ಯಂಡ್ ಪ್ರೊಜೆಕ್ಟ್‌ನ ಫ್ಲೀಟ್ ಮೆನೇಜರ್ ಗೇರ್ ಓವೆಲಮ್ ಹಾಜರಿದ್ದರು. […]

ಪೆರ್ಡೂರು: ಶಾಲಾ ಬಸ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು.

ಉಡುಪಿ: ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೆ.6ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಗಣೇಶ್ ಎಂದು ಗುರುತಿಸಲಾಗಿದೆ. ದೊಂಡರಂಗಡಿ ಕಡೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದ ಅಮೃತ ಭಾರತಿ ಶಾಲೆಯ ಬಸ್, ಎದುರಿನಿಂದ ಹೋಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್ ಸವಾರ ಗಣೇಶ್ ಹಾಗೂ ಸಹಸವಾರ ಸುದರ್ಶನ್ ಬೈಕ್ ಸಮೇತ ರಸ್ತೆ ಬಿದ್ದರು. ಇದರಿಂದ ಗಂಭೀರ ವಾಗಿ ಗಾಯಗೊಂಡ ಗಣೇಶ್ ಸ್ಥಳದಲ್ಲಿಯೇ […]

ಉಡುಪಿ ನಗರಸಭೆ: ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆ

ಉಡುಪಿ: ಆಡಳಿತವನ್ನು ಸರಳಿಕರಣ ಗೊಳಿಸಲು ಸ್ಥಳೀಯ ಸಂಸ್ಥೆಗಳ ಸ್ಥಾಯಿ ಸಮಿತಿಗಳನ್ನು ವಿಂಗಡಿಸುವ ರಾಜ್ಯ ಸರ್ಕಾರದ ನಿರ್ದೇಶನದಂತೆ ಉಡುಪಿ ನಗರಸಭೆಯಲ್ಲಿ ಮೂರು ನೂತನ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಿ ಅದರ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪಿಲುಗಳ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಮಂಜುನಾಥ ಮಣಿಪಾಲ, ಪಟ್ಟಣ ಯೋಜನೆ ಮತ್ತು ಪುರೋಭೀವ್ರದ್ದಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿಜಯ್ ಕೊಡವೂರು, ಲೆಕ್ಕಪತ್ರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಟಿ.ಜಿ ಹೆಗಡೆ ಯವರನ್ನು ಬುಧವಾರ ಸತ್ಯಮೂರ್ತಿ ಸಭಾಂಗಣದಲ್ಲಿ ಅವಿರೋಧವಾಗಿ ಆಯ್ಕೆ […]

ಉಡುಪಿ: ಕಾಲೇಜಿಗೆ ಶುಲ್ಕ‌ ಪಾವತಿಸಲು ಹೋಗಿದ್ದ ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಬೈಲೂರು ಬಬ್ಬುಸ್ವಾಮಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಹನಾ (24) ಎಂಬ ಯುವತಿಯು ಸೆ. 4ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕಾಲೇಜಿಗೆ ಫೀಸು ಕಟ್ಟಲೆಂದು ಮನೆಯಿಂದ ಹೋದವರು ವಾಪಾಸು ಬಾರದೆ ನಾಪ್ತತೆಯಾಗಿರುತ್ತಾರೆ. 5 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ […]