ಉಡುಪಿ:“ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ನಾಯಿಕಡಿತ ಹಾಗೂ ಇಲಿಜ್ವರದ ಕುರಿತು ಮಾಹಿತಿ ಕಾರ್ಯಕ್ರಮ”

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಛೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ನಾಯಿಕಡಿತ ಹಾಗೂ ಇಲಿಜ್ವರದ ಕುರಿತ ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ನಗರದ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ನಡೆಯಿತು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿ, ರೇಬೀಸ್ ಕಾಯಿಲೆ, ರೇಬೀಸ್‌ನಿಂದ ಉಂಟಾಗುವ ಮರಣಪ್ರಮಾಣ, ಇಲಿಜ್ವರ ಹಾಗೂ ಕಾಲರದಂತಹ ಸಾಂಕ್ರಮಿಕ ರೋಗಗಳ ಕುರಿತು […]

ಉಡುಪಿ:ವಿಶ್ವ ಹೃದಯ ದಿನಾಚರಣೆ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಓಕುಡೆ ಡಯಾಗ್ನೋಸಿಸ್ ಮತ್ತು ಡಯಾಲಿಸಿಸ್ಸೆಂಟರ್ ಮತ್ತು ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಂಜಿಬೆಟ್ಟುವಿನ ಓಕುಡೆ ಕ್ಲಿನಿಕ್‌ನಲ್ಲಿ ಇತ್ತೀಚೆಗೆ ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಇಕೋ, ಇಸಿಜಿ ಹಾಗೂ ಆರ್‌ಬಿಎಸ್ ಪರೀಕ್ಷೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕದ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಮಾತನಾಡಿ,ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎನ್ನುವ ಉದ್ದೇಶದಿಂದ ಅಂತರಾಷ್ಟ್ರೀಯ […]

ಉಡುಪಿ:ಪೋಷಣ್ ಮಾಸಾಚರಣೆ – ಸಮಾರೋಪ ಸಮಾರಂಭ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇವರ ಸಹಯೋಗದೊಂದಿಗೆ ಪೋಷಣ್ ಅಭಿಯಾನ್ಯೋಜನೆಯ “ಪೋಷಣ್ ಮಾಸಾಚರಣೆ 2024” ರ ಸಮಾರೋಪ ಸಮಾರಂಭ ಕಾರ್ಯಕ್ರಮವು ಸೋಮವಾರ ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಐ.ಪಿ ಗಡಾದ ಮಾತನಾಡಿ, ದೇಹದ ಸುಸ್ಥಿರ ಅಭಿವೃದ್ಧಿಗೆ ಪೌಷ್ಠಿಕತೆಯ ಪ್ರಾಮುಖ್ಯತೆ ಮತ್ತು ಕಿಶೋರಿಯರ ಆರೈಕೆಯ […]

ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ಆದಿಶಕ್ತಿ ಸನ್ನಿಧಾನದಲ್ಲಿ ತ್ರಿಲೋಕೇಶ್ವರಿ ಮಹಾಯಾಗ ಹಾಗೂ ಶರನ್ನವರಾತ್ರಿ ಮಹೋತ್ಸವ

ಉಡುಪಿ:ಭಗವದ್ಭಕ್ತರೇ,ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವವು ಇದೇ ತಿಂಗಳ ತಾರೀಕು ಮೂರರಿಂದ ಆರಂಭಗೊಂಡು ತಾರೀಕು 12ರ ವಿಜಯದಶಮಿ ಯವರೆಗೆ ನಿತ್ಯವೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ನಿರಂತರ ಅನ್ನಸಂತರ್ಪಣೆಯೊಂದಿಗೆ ವಿಜೃಂಭಣೆಯಿಂದ ಜರಗಲಿರುವುದು..ತಮಗೆಲ್ಲರಿಗೂ ಆದರದ ಸ್ವಾಗತ 🙏🏼

ಕಾರ್ಕಳ: ಬೈಲೂರಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ; ವ್ಯಕ್ತಿ ಮೃತ್ಯು ‌

ಕಾರ್ಕಳ: ತಾಲೂಕಿನ ಬೈಲೂರಿನಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೆ. 30ರಂದು ಸಂಭವಿಸಿದೆ. ಮೃತರು ಯರ್ಲಪ್ಪಾಡಿಯ ವಸಂತ ಆಚಾರ್ಯ (64). ಇವರು ಬೈಲೂರಿನಲ್ಲಿ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ ಸಂದರ್ಭ ಉಡುಪಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಲಾರಿ ವಸಂತ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ವಸಂತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.