ಗೆದ್ದಲು ತಿನ್ನುತ್ತಿರುವ 2000 ಮನೆ ನಿವೇಶನದ ಅರ್ಜಿಗಳನ್ನು ಮತ್ತೆ ಓಪನ್ ಮಾಡ್ತಿನಿ: ಸೊರಕೆ
ಉಡುಪಿ: ನಾನು ಶಾಸಕನಾಗಿದ್ದ ಕಾಲದಲ್ಲಿ 94 ಸಿ ಕಾನೂನು ಮತ್ತು ಅಕ್ರಮ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಯನ್ನು ಈ ಭಾಗದಲ್ಲಿ ಶಿಫಾರಸು ಮಾಡಿದ್ದೇನೆ..ನಾನು ಶಿಫಾರಸು ಮಾಡಿದ ಅರ್ಜಿಯನ್ನು ಸಂಪೂರ್ಣ ವಾಗಿ ತಿರಸ್ಕರಿಸಲಾಗಿದೆ ಅಂತಾ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೆರ್ಡೂರು ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಶಿಫಾರಸು ಮಾಡಿದ ಎಲ್ಲಾ ಅರ್ಜಿಗಳು ಗೆದ್ದಲು ಹಿಡಿದಿದ್ದು ಅರ್ಜಿಯ ಕಟ್ಟನ್ನು ಮತ್ತೆ ಓಪನ್ ಮಾಡಿ ಅದಕ್ಕೆ ಮರುಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ […]
ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್:10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್
ಕೊಚ್ಚಿ: ಕಳೆದ ವರ್ಷ ಟೀಸರ್ ರಿಲೀಸ್ ಆದಾಗಿನಿಂದಲೂ ಭಾರೀ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼ ಇತ್ತೀಚೆಗೆ ಟ್ರೇಲರ್ ಮೂಲಕ ದೇಶದ ಗಮನ ಸೆಳೆದಿದೆ. ಇನ್ನೇನು ಸಿನಿಮಾ ತೆರೆಗೆ ಬರಲು ದಿನಗಣನೆ ಬಾಕಿ ಉಳಿದಿದೆ. ರಿಲೀಸ್ ಗೂ ಮುನ್ನ ಚಿತ್ರದ ಬಗ್ಗೆ ಪರ – ವಿರೋಧ ಮಾತುಗಳು ಕೇಳಿ ಬರುತ್ತಿದೆ. ಸುದೀಪ್ತೋ ಸೆನ್ ನಿರ್ದೇಶನದ ಸಿನಿಮಾಕ್ಕೆ ಕೇರಳದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ನಿಷೇಧ ಮಾಡುವಂತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒತ್ತಾಯಿಸುತ್ತಿವೆ. ಇದರ ಜತೆಗೆ […]
Belthangadi; ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಾ ಸಂಪರ್ಕ ಅಭಿಯಾನ ಯಶಸ್ವಿ
ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಮಹಾ ಸಂಪರ್ಕ ಅಭಿಯಾನದಡಿ ಬೆಳ್ತಂಗಡಿ ಮಂಡಲದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಹರೀಶ್ ಪೂಂಜ ಅವರ ಪರ 20 ಸಾವಿರ ಕಾರ್ಯಕರ್ತರು 50 ಸಾವಿರ ಮನೆಗಳನ್ನು ಸಂಪರ್ಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಿದರು. ಬೆಳ್ತಂಗಡಿ ಮಂಡಲದ 81 ಗ್ರಾಮಗಳ 241 ಬೂತ್‌ಗಳಲ್ಲಿ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು ಮತದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಒಂದೇ ದಿನ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಉತ್ಸುಕತೆಯಿಂದ ಪಾಲ್ಗೊಂಡು 50 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ […]
ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮಾತಿನ ಚಕಮಕಿ ಪ್ರಕರಣ: ಪಂದ್ಯದ ಶುಲ್ಕದ 100% ದಂಡ ವಿಧಿಸಿದ ಬಿಸಿಸಿಐ
ಸೋಮವಾರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ನವೀನ್-ಉಲ್-ಹಕ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಕೊಹ್ಲಿ, ಗಂಭೀರ್ ಅವರು ಲೆವೆಲ್ 2 ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರ ಪಂದ್ಯದ ಶುಲ್ಕದ 100% ದಂಡವನ್ನು ವಿಧಿಸಲಾಯಿತು. ನವೀನ್-ಉಲ್-ಹಕ್ ಅವರ ಲೆವೆಲ್ 1 ಅಪರಾಧಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50% ರಷ್ಟನ್ನು ಕಳೆದುಕೊಂಡರು. […]
ಔರಾ ಕೆಫೆ&ಕೇಕ್ ಶಾಪ್ ಶುಭಾರಂಭ
ಉಡುಪಿ: ನಗರದ ಹೊಸ ಬಸ್ ನಿಲ್ದಾಣದ ಬಳಿಯ ಜಿ.ಬಿ. ಪಂತ್ ರಸ್ತೆಯಲ್ಲಿರುವ ಗ್ರಾಸ್ ಲಾಂಡ್ ಕಾಂಪ್ಲೆಕ್ಸ್ ನಲ್ಲಿ ಔರಾ ಕೆಫೆ ಶಾಪ್ ಭಾನುವಾರಂದು ಶುಭಾರಂಭಗೊಂಡಿತು. ಸೇಂಟ್ ಆಂಟೋನಿ ಆರ್ಥೊಡಾಕ್ಸ್ ಚರ್ಚ್ ಕೊಳಲಗಿರಿ ಇದರ ಧರ್ಮಗುರು ಫಾ.ಡೇವಿಡ್ ಕ್ರಾಸ್ತಾ ಬೇಕರಿಯನ್ನು ಉದ್ಘಾಟಿಸಿದರು. ಬೇಕರಿ ಮಾಲೀಕರಾದ ನಿಶಾನ್ ಡಿಸೋಜಾ ಮತ್ತು ನೆಯಾನ್ ಡಿಸೋಜಾ ಉಪಸ್ಥಿತರಿದ್ದರು. ಔರಾ ಕೆಫೆ ಶಾಪ್ ನಲ್ಲಿ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್, ಬೇಕರಿ ಉತ್ಪನ್ನಗಳು, ಚಾಕೋಲೇಟ್ ಗಳು ಹಾಗೂ ಪೆಸ್ಟ್ರಿಗಳು ದೊರೆಯುತ್ತವೆ.