ಕುಂದಾಪುರ: ಸಮುದ್ರ ಪಾಲಾಗಿದ್ದ ಜೆಟ್ ಸ್ಕೀ ರೈಡರ್ ಮೃತದೇಹ ಪತ್ತೆ

ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಶನಿವಾರ ಸಂಜೆ ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್ಸ್ಕೀ ಅಪಘಾತಕ್ಕೀಡಾಗಿ ನಾಪತ್ತೆಯಾಗಿದ್ದ ಜೆಟ್ ಸ್ಕೀ ರೈಡರ್ ರೋಹಿದಾಸ್ ಯಾನೆ ರವಿ (41)ಯವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.ಘಟನೆ ನಡೆದ 36 ಗಂಟೆಗಳ ಬಳಿಕ ಇಲ್ಲಿನ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆ ಆಗಿದೆ. ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳಿದ ವೇಳೆ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಅವರು […]
ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಧ್ಯಾನ ದಿನಾಚರಣೆ”

ಕಾರ್ಕಳ: ನಗರದ ಎಸ್. ವಿ.ಟಿ. ಶಾಲಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಧ್ಯಾನ ದಿನಾಚರಣಾ” ಸಮಾರಂಭ ಜರಗಿತ್ತು, ಸಮಾರಂಭದ ಆಧ್ಯಕ್ಷತೆಯನ್ನು ಮುಂಬೈಯ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬಿ. ಕೆ. ಸುಕೇತಾ ಶೆಟ್ಟಿಯವರು ವಹಿಸಿದ್ದು, ಧ್ಯಾನ ಮಾಡಲು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯಿದೆ, ಮೊತ್ತಮೊದಲು ನಾನು ಯಾರು, ಪರಮಾತ್ಮ ಯಾರು ಎಂಬುದನ್ನು ಅರಿತು ಧ್ಯಾನ ಮಾಡುವುದರಿಂದ ಪರಮಾತ್ಮ ಪ್ರೀತಿ ಪಡೆಯಲು ಸಾದ್ಯ. ಪ್ರತಿದಿನ ಧ್ಯಾನಾಭ್ಯಾಸದಿಂದ ಆಂತರಿಕ ಶಾಂತಿ, ಜಾಗತಿಕ ಸದ್ಭಾವನೆ ಮಾನಸಿಕ ಸ್ಪಷ್ಟತೆ, ಒತ್ತಡದಿಂದ ಮುಕ್ತಿಯ […]
ಉಡುಪಿ: ಕೊಡವೂರು ನಾರಾಯಣ ಬಲ್ಲಾಳ್ ಅವರಿಗೆ ನಾಗರಿಕ ಅಭಿನಂದನೆ.

ಉಡುಪಿ: ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನೆಯು ಶನಿವಾರದಂದು ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿಯವರು ವಾಣಿಜ್ಯ ಸಂಸ್ಥೆಗಳಿಗಿಂತ ಸಹಕಾರಿ ಸಂಸ್ಥೆಗಳು ಜನ ಸಾಮಾನ್ಯರ ಅಗತ್ಯತೆಗಳಿಗೆ ಬಹು ವೇಗವಾಗಿ, ಉತ್ತಮವಾಗಿ ಸ್ಪಂದಿಸಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಪರಿಹಾರ ನೀಡುವ ಕಾರಣ ಇದೀಗ ಸಹಕಾರಿ ಕ್ಷೇತ್ರ ಉತ್ತುಂಗದಲ್ಲಿದೆ. ಅದಕ್ಕೆ ನಾರಾಯಣ ಬಲ್ಲಾಳ್ ರಂತಹ ಸಹಕಾರಿ ಧುರೀಣರು ಹಾಗೂ ಸಿಬ್ಬಂದಿಗಳು ಕಾರಣ ಎಂದು […]
ಉಡುಪಿ: ವಿದ್ಯಾರ್ಥಿ ನಾಪತ್ತೆ

ಉಡುಪಿ: ವಿಜಯ ನಗರ ಜಿಲ್ಲೆಯ ಕೂಡ್ಲುಗಿ ತಾಲೂಕಿನ ಪ್ರಸ್ತುತ ಸಂತೆಕಟ್ಟೆ ಸುಬ್ರಹ್ಮಣ್ಯ ನಗರ ನಿವಾಸಿ 9 ನೇ ತರಗತಿ ವಿದ್ಯಾರ್ಥಿ ಕೆ. ಮಣಿಕಂಠ (15) ಡಿ.19 ರಂದು ಸ್ಕೂಲ್ಗೆ ಹೋಗಿದ್ದು, ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈತ ಸಂತೆಕಟ್ಟೆ ಮಿಲಾಗ್ರಿಸ್ ಹೈಸ್ಕೂಲ್ನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದು, 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ. ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ […]
ಕುಂದಾಪುರ: ಟೂರಿಸ್ಟ್ ಬೋಟ್ ಮಗುಚಿ ರೈಡರ್ ನಾಪತ್ತೆ; ಬೆಂಗಳೂರು ಪ್ರವಾಸಿಗನ ರಕ್ಷಣೆ.

ಕುಂದಾಪುರ, ಡಿ.21: ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್ಸ್ಕೀ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾಪತ್ತೆಯಾದ ಘಟನೆ ಇಲ್ಲಿನ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಜೆಟ್ ಸ್ಕೀ ರೈಡರ್ ರೋಹಿದಾಸ್ ಅಲಿಯಾಸ್ ರವಿ (45) ನಾಪತ್ತೆಯಾಗಿದ್ದು, ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ನ ಜೆಟ್ಸ್ಕೀ ಬೋಟ್ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ಸ್ಕೀ […]