ಬಾರಕೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆ
ಬ್ರಹ್ಮಾವರ: ಬಾರಕೂರು ಮದರ್ ಎನ್ ಕ್ಲೇವ್ ನ ಮೊದಲ ಮಹಡಿಯಲ್ಲಿ ಸೆ.26 ರಂದು ಬಾರಕೂರು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನೆಗೊಂಡಿತು. ಹಿರಿಯ ಉದ್ಯಮಿ ವೈ. ಗಣಪತಿ ಕಾಮತ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್ ಸಮೂಹ ಸಂಸ್ಥೆಯ ಬಿ. ಶ್ರೀನಿವಾಸ ಶೆಟ್ಟಿಗಾರ್, ಬ್ರಹ್ಮಾವರದ ಲೆಕ್ಕಪರಿಶೋಧಕ ಸಿಎ ಕೆ. ಪದ್ಮನಾಭ ಕಾಂಚನ್, ಬಾರಕೂರು ಯುನಿಟಿ ಶ್ಯಾಮಿಯಾನದ ಶೌಕತ್ ಅಲಿ, ಪಾಯಸ್ ಎಂಟರ್ ಪ್ರೈಸಸ್ ನ ಸ್ಟ್ಯಾನಿ ಪಾಯಸ್ […]
ಉಡುಪಿ: ಧ್ವನಿ ಬೆಳಕು ಸಂಯೋಜಕರ ಸಂಘಟನೆ ವತಿಯಿಂದ ವೈಭವದ ಮೆರವಣಿಗೆ
ಉಡುಪಿ: ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ , ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ಗಂಗಾವತಿ, ಕೇಂದ್ರ ಕಛೇರಿ ವಿಜಯಪುರ, ಆಲ್ ಇಂಡಿಯಾ ಟೆಂಟ್ ಎಂಡ್ ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ನವದೆಹಲಿ ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಇದರ ಉಡುಪಿ ಜಿಲ್ಲಾ ದಶಮಾನೋತ್ಸವ ಪ್ರಯುಕ್ತ ಉಡುಪಿ ವೈಭವಕ್ಕೆ ಉಡುಪಿ ಜೋಡುಕಟ್ಟೆ ಸಮಿತಿ ವತಿಯಿಂದ ಶ್ರೀ ಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಮೂಲಕ ತೆಂಗಿನಕಾರಿ ಒಡೆದು ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣೆಗೆಯಲ್ಲಿ ಚೆಂಡೆ ವಾದನ, […]
ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರ ಉದ್ಘಾಟನೆ
ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರವು ಅ.17 ಸೋಮವಾರದಂದು ಮಣಿಪಾಲದ ಕೆನರಾ ಬ್ಯಾಂಕಿನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಣಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ ಮಾತನಾಡಿ, ಇಂದಿನ ಕಾಲದಲ್ಲಿ ನಮ್ಮಲ್ಲಿ ಹೆಚ್ಚಿನವರು ನಮ್ಮ ಭೌತಿಕ ದೇಹದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಮನುಷ್ಯನ ದೇಹವನ್ನು ಗಮನಿಸಿದರೆ ಮಸ್ತಿಷ್ಕವು ನಮ್ಮ ದೇಹದ ಅತ್ಯಂತ ಕಡಿಮೆ ಅರ್ಥಮಾಡಿಕೊಳ್ಳಲಾದ ಭಾಗ. […]
ಮಂಗಳೂರು: ಸ್ಕೂಟರ್ ಗೆ ಬಸ್ ಡಿಕ್ಕಿ; ಬಾಲಕ ಸಾವು
ಮಂಗಳೂರು: ಇಲ್ಲಿನ ಲಾಲ್ ಬಾಗ್ ಸಿಗ್ನಲ್ ಬಳಿಯಲ್ಲಿ ಖಾಸಗಿ ಬಸ್ಸೊಂದು ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನ ಮರಣ ಸಂಭವಿಸಿದೆ. ನೀರುಮಾರ್ಗದ ಧನು(13) ಎಂಬ ಬಾಲಕ ಮೃತಪಟ್ಟ ದುರ್ದೈವಿ. ತನ್ನ ಸಂಬಂಧಿ ಜೊತೆ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದದ್ದರಿಂದ ಸ್ಕೂಟರ್ ಚಲಾಯಿಸುತ್ತಿದ್ದ ಸಂಬಂಧಿ ಎಡಗಡೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಧನು ಬಲಗಡೆಗೆ ಬಿದ್ದಿದ್ದು, ಆತನ ಮೇಲೆ ಬಸ್ ನ ಚಕ್ರ ಹಾದು ಹೋಗಿದೆ. ಇದರಿಂದಾಗಿ […]
ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಸಮರ: ತಿಂಗಳು ಕಳೆದರೂ ನಿಲ್ಲದ ಇರಾನಿ ಮಹಿಳೆಯರ ಪ್ರತಿಭಟನೆ
ತೆಹರಾನ್: ಸೆ.16 ರಂದು ಇರಾನ್ ನಲ್ಲಿ ಇರಾನಿ ಮಹಿಳೆಯರಿಂದ ಪ್ರಾರಂಭವಾದ ಹಿಜಾಬ್ ವಿರೋಧಿ ಪ್ರತಿಭಟನೆ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದೆ. ಈ ಮಧ್ಯೆ ಇರಾನ್ ನಲ್ಲಿ ಶುರುವಾದ ಪ್ರತಿಭಟನೆಗೆ ವಿಶ್ವದಾದ್ಯಂತದ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡಾ ಪ್ರತಿಭಟನಾ ನಿರತ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ. ಸೆಪ್ಟೆಂಬರ್ 16 ರಂದು 22 ವರ್ಷದ ಮಹ್ಸಾ ಅಮಿನಿ ಸಾವಿನ ನಂತರ ಇರಾನ್ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮೊದಲು ಇರಾನ್ ಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ಇದೀಗ ವಿಶ್ವದೆಲ್ಲೆಡೆ […]